ಹೋಟೆಲ್ ಶೈಲಿಯ ಬಂಗುಡೆ ಮೀನಿನ ಸಾರು

ಹೋಟೆಲ್ ಶೈಲಿಯ ಬಂಗುಡೆ ಮೀನಿನ ಸಾರು
Oplus_16908288
0Shares
Oplus_16908288



​ಬೇಕಾಗುವ ಪದಾರ್ಥಗಳು:
​ಬಂಗುಡೆ ಮೀನು: 5೦೦ ಗ್ರಾಂ (ಅರ್ಧ ಕೆಜಿ)
​ಬ್ಯಾಡಗಿ ಒಣಮೆಣಸಿನಕಾಯಿ: 12
​ಧನಿಯಾ (ಕೊತ್ತಂಬರಿ ಕಾಳು): 1 ಚಮಚ
​ಕಾಳುಮೆಣಸು: 3/4 ಚಮಚ
​ಮೆಂತ್ಯ ಕಾಳು: 2-3 ಚಿಟಿಕೆ
​ಜೀರಿಗೆ: 1/4 ಚಮಚ
​ಈರುಳ್ಳಿ: 2 (1 ಮಸಾಲೆಗೆ, 1 ಒಗ್ಗರಣೆಗೆ)
​ಬೆಳ್ಳುಳ್ಳಿ: 6 ಎಸಳು
​ತುರಿದ ತೆಂಗಿನಕಾಯಿ: ಅರ್ಧ ತೆಂಗಿನಕಾಯಿ
​ಹುಣಸೆಹಣ್ಣು: ನಿಂಬೆಹಣ್ಣಿನ ಗಾತ್ರದ್ದು
​ಅರಿಶಿನ ಪುಡಿ: 1/4 ಚಮಚ
​ಹಸಿಮೆಣಸಿನಕಾಯಿ: 3 ರಿಂದ 4
​ಸಣ್ಣಗೆ ಹೆಚ್ಚಿದ ಶುಂಠಿ: 1 ಚಮಚ
​ಟೊಮ್ಯಾಟೊ: 1
​ಕರಿಬೇವು & ಕೊತ್ತಂಬರಿ ಸೊಪ್ಪು: ಅಗತ್ಯಕ್ಕೆ ತಕ್ಕಷ್ಟು
​ಎಣ್ಣೆ ಹಾಗೂ ಉಪ್ಪು: ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಮೀನು ಮ್ಯಾರಿನೇಟ್ ಮಾಡುವುದು:
​ಶುಚಿಗೊಳಿಸಿದ 5೦೦ ಗ್ರಾಂ ಬಂಗುಡೆ ಮೀನಿಗೆ ಉಪ್ಪು, ಅರಶಿಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮಸಾಲೆ ರೆಡಿಯಾಗುವವರೆಗೆ ಪಕ್ಕಕ್ಕೆ ಇಡಿ.


​ಮಸಾಲೆ ಹುರಿಯುವುದು:
​ಫ್ರೈಯಿಂಗ್ ಪ್ಯಾನ್‌ಗೆ 1 ಚಮಚ ಎಣ್ಣೆ ಹಾಕಿ, 12 ಬ್ಯಾಡಗಿ ಮೆಣಸಿನಕಾಯಿಯನ್ನು 2-3 ನಿಮಿಷ ಹುರಿದುಕೊಳ್ಳಿ.
​ನಂತರ ಅದೇ ಪ್ಯಾನ್‌ಗೆ ಧನಿಯಾ, ಕಾಳುಮೆಣಸು, ಮೆಂತ್ಯ ಕಾಳು ಮತ್ತು ಜೀರಿಗೆ ಹಾಕಿ 2 ನಿಮಿಷ ಫ್ರೈ ಮಾಡಿ ಎತ್ತಿಟ್ಟುಕೊಳ್ಳಿ.

​ಮಸಾಲೆ ರುಬ್ಬುವುದು:
​ಹುರಿದುಕೊಂಡ ಮಸಾಲೆ ಪದಾರ್ಥಗಳಿಗೆ ನಿಂಬೆಹಣ್ಣಿನ ಗಾತ್ರದ ಹುಣಸೆಹಣ್ಣು, 1/4 ಚಮಚ ಅರಿಶಿನ ಪುಡಿ, ಹೆಚ್ಚಿದ 1 ಈರುಳ್ಳಿ, 6 ಬೆಳ್ಳುಳ್ಳಿ ಎಸಳುಗಳು, ತುರಿದ ತೆಂಗಿನಕಾಯಿ, ಸಣ್ಣ ತುಂಡು ಶುಂಠಿ ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

​ಸಾರು ತಯಾರಿಸುವುದು:
​ಒಂದು ಪಾತ್ರೆಗೆ 3 ಚಮಚ ಎಣ್ಣೆ ಹಾಕಿ.
​ಎಣ್ಣೆ ಕಾದ ಮೇಲೆ ಕರಿಬೇವು, ಉದ್ದಕ್ಕೆ ಸೀಳಿದ ಹಸಿಮೆಣಸಿನಕಾಯಿ ಹಾಗೂ ಹೆಚ್ಚಿದ ಶುಂಠಿ ಹಾಕಿ 3೦ ಸೆಕೆಂಡ್ ಫ್ರೈ ಮಾಡಿ.
​ನಂತರ 1 ಹೆಚ್ಚಿದ ಈರುಳ್ಳಿ ಮತ್ತು 1 ಟೊಮ್ಯಾಟೊ ಹಾಕಿ 1 ನಿಮಿಷ ಚೆನ್ನಾಗಿ ಹುರಿಯಿರಿ.
​ಈಗ ರುಬ್ಬಿಟ್ಟುಕೊಂಡ ಮಸಾಲೆಯನ್ನು ಸೇರಿಸಿ, ಅಗತ್ಯಕ್ಕೆ ತಕ್ಕಂತೆ 2 ರಿಂದ 3 ಲೋಟ ನೀರು ಬೆರೆಸಿ.
​ಪಾತ್ರೆಯ ಮುಚ್ಚಳ ಮುಚ್ಚಿ ಮಸಾಲೆಯನ್ನು 1೦ ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ.

ಮೀನು ಬೇಯಿಸುವುದು:
​ಮಸಾಲೆ ಕುದಿಬಂದ ಮೇಲೆ ಮ್ಯಾರಿನೇಟ್ ಮಾಡಿಟ್ಟಿದ್ದ ಬಂಗುಡೆ ಮೀನನ್ನು ಸೇರಿಸಿ.
​ಮುಚ್ಚಳ ಮುಚ್ಚಿ 5 ನಿಮಿಷಗಳ ಕಾಲ ಮೀನನ್ನು ಬೇಯಿಸಿಕೊಳ್ಳಿ.
​ನಂತರ ರುಚಿ ನೋಡಿ ಅಗತ್ಯವಿದ್ದರೆ ಇನ್ನಷ್ಟು ಉಪ್ಪು ಸೇರಿಸಿ, ಮತ್ತೆ ಮುಚ್ಚಳ ಮುಚ್ಚಿ 2-3 ನಿಮಿಷ ಬೇಯಿಸಿ.
​ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಸ್ಟವ್ ಆಫ್ ಮಾಡಿ. ಬಿಸಿಬಿಸಿಯಾದ ಮತ್ತು ರುಚಿಯಾದ ಕರಾವಳಿ ಹೋಟೆಲ್ ಶೈಲಿಯ ಬಂಗುಡೆ ಮೀನಿನ ಸಾರು ಸಿದ್ಧವಾಗಿರುತ್ತದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now