ಸಂಜೆ ಚಹಾ ಜೊತೆಗೆ ಪರ್ಫೆಕ್ಟ್ ಗೋಳಿಬಜೆ – ಪ್ರತಿಯೊಬ್ಬರೂ ಮಾಡುವಷ್ಟು ಸುಲಭ!

ಸಂಜೆ ಚಹಾ ಜೊತೆಗೆ ಪರ್ಫೆಕ್ಟ್ ಗೋಳಿಬಜೆ – ಪ್ರತಿಯೊಬ್ಬರೂ ಮಾಡುವಷ್ಟು ಸುಲಭ!
0Shares

ಬೇಕಾಗುವ ಪದಾರ್ಥಗಳು (Ingredients)

ಮೊಸರು: 1 ಕಪ್

ಮೈದಾ ಹಿಟ್ಟು: 1 ಕಪ್

ಅಡುಗೆ ಸೋಡಾ: ½ ಸ್ಪೂನ್

ಉಪ್ಪು: ರುಚಿಗೆ ತಕ್ಕಷ್ಟು

ಹಸಿಮೆಣಸಿನಕಾಯಿ: ಸಣ್ಣಗೆ ಹೆಚ್ಚಿದ್ದು

ಕರಿಬೇವು: ಸಣ್ಣಗೆ ಹೆಚ್ಚಿದ್ದು

ಶುಂಠಿ: ತುರಿದಿಟ್ಟುಕೊಂಡಿದ್ದು

ಅಜ್ವೈನ್ (ಓಮ ಕಾಳು): ಸ್ವಲ್ಪ

ಕೊತ್ತಂಬರಿ ಸೊಪ್ಪು: ಸಣ್ಣಗೆ ಹೆಚ್ಚಿದ್ದು

ಎಣ್ಣೆ: ಕರಿಯಲು ಅಗತ್ಯವಿರುವಷ್ಟು

ತಯಾರಿಸುವ ವಿಧಾನ (Method of Cooking)ಮಿಶ್ರಣ ತಯಾರಿಕೆ: ಮೊದಲು ಒಂದು ಮಿಕ್ಸಿಂಗ್ ಬೌಲ್‌ನಲ್ಲಿ 1 ಕಪ್ ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ½ ಸ್ಪೂನ್ ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಹಿಟ್ಟು ಕಲಸುವುದು: ನಂತರ ಅದೇ ಕಪ್ ಅಳತೆಯಲ್ಲಿ 1 ಕಪ್ ಮೈದಾ ಹಿಟ್ಟು ಹಾಕಿ, ನೀರು ಸೇರಿಸದೇ ಯಾವುದೇ ತರಹದ ಗಂಟುಗಳಿಲ್ಲದಂತೆ ನೀಟಾಗಿ ಕಲಸಿಕೊಳ್ಳಿ.

ಮಸಾಲೆ ಸೇರಿಸುವುದು: ಈಗ ಇದಕ್ಕೆ ಸಣ್ಣಗೆ ಕಟ್ ಮಾಡಿದ ಹಸಿಮೆಣಸಿನಕಾಯಿ, ಕರಿಬೇವು, ತುರಿದ ಶುಂಠಿ, ಸ್ವಲ್ಪ ಅಜ್ವೈನ್ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ನೆನೆಯಲು ಬಿಡುವುದು: ಈ ಮಿಶ್ರಣದ ಮೇಲೆ ಮುಚ್ಚಳ ಮುಚ್ಚಿ ಅರ್ಧ ಗಂಟೆ (30 ನಿಮಿಷ) ನೆನೆಯಲು ಬಿಡಿ.

ಕರಿಯುವುದು: ಅರ್ಧ ಗಂಟೆಯ ನಂತರ, ಕೈಯನ್ನು ನೀರಿನಲ್ಲಿ ಒದ್ದೆ ಮಾಡಿಕೊಂಡು ಹಿಟ್ಟನ್ನು ಒಮ್ಮೆ ಮಿಕ್ಸ್ ಮಾಡಿ, ಕಾದಿರುವ ಎಣ್ಣೆಯಲ್ಲಿ ಸ್ವಲ್ಪ ಸ್ವಲ್ಪ ಹಿಟ್ಟನ್ನು ಉಂಡೆಗಳಂತೆ ಬಿಡಿ.

ಫ್ರೈ ಮಾಡುವುದು: ಹಿಟ್ಟು ಹಾಕಿದ ತಕ್ಷಣ ತಿರುಗಿಸದೇ, ಒಂದು ಕಡೆ ಚೆನ್ನಾಗಿ ಫ್ರೈ ಆದ ಮೇಲೆ ತಿರುಗಿಸಿಕೊಂಡು ಎರಡೂ ಕಡೆ ಹೊಂಬಣ್ಣ (ಬಂಗಾರದ ಬಣ್ಣ) ಬರುವವರೆಗೆ ಕರಿಯಿರಿ.

ಈಗ ಕ್ರಿಸ್ಪಿಯಾದ ಹಾಗೂ ರುಚಿಕರವಾದ ಮಂಗಳೂರು ಸ್ಪೆಷಲ್ ಗೋಳಿ ಬಜ್ಜೆ ಸವಿಯಲು ಸಿದ್ಧ!

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now