
ವಸಂತ ಕುಮಾರ್, ಆಹಾರ ನಿರೀಕ್ಷಕರು, ಬ್ರಹ್ಮಾವರ ಇವರಿಗೆ ದಿನಾಂಕ 28.07.2026 ರಂದು ಬೆಳಿಗ್ಗೆ 10:00 ಗಂಟೆ ಸಮಯಕ್ಕೆ ದೊರೆತ ಮಾಹಿತಿಯ ಮೇರೆಗೆ ಆಹಾರ ನಿರೀಕ್ಷಕರು, ಕೋಟ ಪೊಲೀಸ್ ಠಾಣಾ ಪಿ.ಎಸ್.ಐ. ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿಯವರೊಂದಿಗೆ ಬ್ರಹ್ಮಾವರ ತಾಲೂಕು, ಮಣೂರು ಗ್ರಾಮದ ಮಹಾಲಕ್ಷ್ಮೀ ಹೊಟೇಲ್ ಎದುರು ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲು KA-47-5533ನೇ ಅಶೋಕ ಲೈಲ್ಯಾಂಡ್ ಲಾರಿಯಲ್ಲಿ ಶ್ರೀ ಗಣೇಶ್ ರೈಸ್ ಇಂಡಸ್ಟ್ರೀಸ್ ನಾಡಮಸ್ಕಿರಿ, ಕುಮಟಾ ಮಾಲಿಕರಾದ ನಾಗರಾಜ್ ನಾಯ್ಕ್ ಇವರು ಅಕ್ಕಿಯನ್ನು ಲಾರಿಗೆ ಲೋಡ್ ಮಾಡಿ, ಶಾಜಿ ಟ್ರೆಡಿಂಗ್ ಕಂಪೆನಿ ಕಾಸರಗೋಡು, ಕೇರಳ ಇಲ್ಲಿಗೆ ಸಾಗಾಟ ಮಾಡಲು ಲಾರಿ ಮಾಲಿಕರಾದ ಗಿರೀಶ್ ನಾಯ್ಕ್ ಇವರು ತಿಳಿಸಿದಂತೆ ಲಾರಿ ಚಾಲಕ ಕೆ. ನರಸಿಂಹ ಇವರು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಸಾಗಾಟ ಮಾಡುತ್ತಿದ್ದ ಅನ್ನಭಾಗ್ಯ ಯೋಜನೆಯಡಿಯಲ್ಲಿ ನೀಡುವ ಉಚಿತ ಪಡಿತರ ಅಕ್ಕಿ ಸುಮಾರು 320 ಪ್ಲಾಸ್ಟಿಕ್ ಬಿಳಿ ಪಾಲಿತಿನ್ ಚೀಲದಲ್ಲಿ ತುಂಬಿದ ಒಟ್ಟು 160 ಕ್ವಿಂಟಾಲ್ ಅಕ್ಕಿ (ಅದರ ಅಂದಾಜು ಮೌಲ್ಯ ರೂ 3,84,000/- ಆಗಬಹುದು) ಹಾಗೂ ವಾಹನದ ಅಂದಾಜು ಮೌಲ್ಯ 3,50,000/- ರೂ ಯನ್ನು ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ 7,34,000/- ನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಸ್ವಾಧೀನಪಡಿಸಿಕೊಂಡು, ವಸಂತ ಕುಮಾರ್, ಆಹಾರ ನಿರೀಕ್ಷಕರು, ಬ್ರಹ್ಮಾವರ ಇವರ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅ.ಕ್ರ. 122/2026 ಕಲಂ 3, 6, 7 Essential Commodities Act 1955 ಮತ್ತು ಸಾರ್ವಜನಿಕ ನಿಯಂತ್ರಣ ಕಾಯ್ದೆ 2016 ( PDS Control Order 2016 ) ಕಲಂ 3(2)(3) ಮತ್ತು ಕಲಂ 112 ಬಿ.ಎನ್.ಎಸ್. (BNS) – 2023 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now