
ಕಾಪು (ಜುಲೈ 27): ಉಡುಪಿ-ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳ ನಡುವಿನ ಟೈಮಿಂಗ್ಸ್ ಕದನ ಮತ್ತೆ ಮಿತಿಮೀರಿದೆ. ಪ್ರಯಾಣಿಕರಿಂದ ತುಂಬಿದ್ದ ಬಸ್‌ಗಳನ್ನು ಚಾಲಕರು ಉದ್ದೇಶಪೂರ್ವಕವಾಗಿಯೇ ಡಿಕ್ಕಿ ಹೊಡೆಸಿ ರಸ್ತೆ ತಡೆ ಉಂಟುಮಾಡಿದ ಘಟನೆ ಸೋಮವಾರ ಬೆಳಿಗ್ಗೆ ಕಾಪು ಬಸ್ ನಿಲ್ದಾಣದ ಸರ್ವಿಸ್ ರಸ್ತೆಯಲ್ಲಿ ನಡೆದಿದ್ದು, ಸಾರ್ವಜನಿಕರು ಹಾಗೂ ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ವಿವಾದದ ಆರಂಭ: ಉಡುಪಿಯಿಂದ ಮಂಗಳೂರು ಕಡೆಗೆ ಹೊರಟಿದ್ದ ‘ಸಂದೇಶ್ ಟ್ರಾವೆಲ್ಸ್’ ಮತ್ತು ‘ಆನಂದ್ ಟ್ರಾವೆಲ್ಸ್’ ಬಸ್‌ಗಳ ಚಾಲಕ ಹಾಗೂ ಸಿಬ್ಬಂದಿ ನಡುವೆ ಉದ್ಯಾವರದಿಂದಲೇ ಟೈಮಿಂಗ್ಸ್ ವಿಚಾರವಾಗಿ ಜಗಳ ಶುರುವಾಗಿತ್ತು.
ಅಪಘಾತ ಸಂಭವಿಸಿದ್ದು ಹೇಗೆ?: ಬಸ್‌ಗಳು ಕಾಪು ತಲುಪಿದಾಗ, ಸಂದೇಶ್ ಟ್ರಾವೆಲ್ಸ್ ಬಸ್ ಕಾಪುವಿನ ಸರ್ವಿಸ್ ರಸ್ತೆ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಿತ್ತು. ಈ ವೇಳೆ ಆಕ್ರೋಶದಿಂದ ಹಿಂದಿನಿಂದ ಬಂದ ಆನಂದ್ ಟ್ರಾವೆಲ್ಸ್ ಬಸ್ ಚಾಲಕ, ನೇರವಾಗಿ ಸಂದೇಶ್ ಬಸ್‌ನ ಬಲಭಾಗಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದಾನೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now