ಹವ್ಯಕ ಸಭಾ ಉಡುಪಿಯ ನೂತನ ಅಧ್ಯಕ್ಷರಾಗಿ ಶ್ರೀ ಸಿಎಚ್ ಸುಬ್ರಹ್ಮಣ್ಯ ಭಟ್

ಹವ್ಯಕ ಸಭಾ ಉಡುಪಿಯ ನೂತನ ಅಧ್ಯಕ್ಷರಾಗಿ ಶ್ರೀ ಸಿಎಚ್ ಸುಬ್ರಹ್ಮಣ್ಯ ಭಟ್
0Shares

1997ರಲ್ಲಿ ಸ್ಥಾಪನೆಗೊಂಡ ಹವ್ಯಕ ಸಭಾ (ರಿ) ಉಡುಪಿಯ 30ನೆಯ ವಾರ್ಷಿಕ ಮಹಾಸಭೆಯು ಇದೇ ಕಳೆದ ರವಿವಾರ ದಿನಾಂಕ 19-07-2026ರಂದು ಹವ್ಯಕ ಸಭಾದ ಅಧ್ಯಕ್ಷ ಪ್ರೊಫೆಸರ್ ಶಂಕರ್ ಅವರ ಅಧ್ಯಕ್ಷತೆಯಲ್ಲಿ ಪೆರಂಪಳ್ಳಿಯ ಹವ್ಯಕಧಾಮದಲ್ಲಿ ನೆರವೇರಿತು. ಕಾರ್ಯದರ್ಶಿ ಶ್ರೀ ಪ್ರಸನ್ನ ಅಡಿಗರು ಗತವರ್ಷದಲ್ಲಿ ಕೈಗೊಂಡ ಕಾರ್ಯಚಟುವಟಿಕೆಗಳ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ಶ್ರೀ ಗಿರೀಶ್ ಕೆಎನ್ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿ, ಸಭೆಯ ಅನುಮೋದನೆಯನ್ನು ಪಡೆದರು.

ಒಟ್ಟು 23 ಸದಸ್ಯರನ್ನೊಳಗೊಂಡ ನೂತನ ಕಾರ್ಯಕಾರಿ ಸಮಿತಿಗೆ 2026-27ನೇ ಸಾಲಿನ ಅಧ್ಯಕ್ಷರಾಗಿ ಶಿಕ್ಷಣತಜ್ಞ ಶ್ರೀ ಸಿಎಚ್ ಸುಬ್ರಹ್ಮಣ್ಯ ಭಟ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಡಾ. ಮಹಾದೇವ ಭಟ್ ಹಾಗೂ ಶ್ರೀಮತಿ ಶ್ವೇತಾ ಹೆಗಡೆ, ಕಾರ್ಯದರ್ಶಿಯಾಗಿ ಶ್ರೀ ನಟೇಶ್ ವೈಆರ್, ಜತೆ-ಕಾರ್ಯದರ್ಶಿಗಳಾಗಿ ಡಾ| ಜಯಶಂಕರ ಕಂಗಣ್ಣಾರು ಮತ್ತು ಶ್ರೀಮತಿ ಲಕ್ಷ್ಮಿ ಹೆಗ್ಡೆ, ಕೋಶಾಧಿಕಾರಿಯಾಗಿ ಶ್ರೀ ಅರವಿಂದ ಕುಮಾರ್ ಹಾಗೂ ಆಂತರಿಕ ಲೆಕ್ಕ ಪರಿಶೊಧಕರಾಗಿ ಪ್ರೊ. ಕೆ.ಸದಾಶಿವ ರಾವ್ ಆಯ್ಕೆಯಾದರು.

ಉಡುಪಿ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಹವ್ಯಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಅಧ್ಯಕ್ಷತೆ ವಹಿಸಿದ ಪ್ರೊಫೆಸರ್ ಶಂಕರ್ ಎಲ್ಲರ ಸಹಕಾರವನ್ನು ಸ್ಮರಿಸಿಕೊಂಡರಲ್ಲದೆ ಧರ್ಮಸ್ಥಳದ ವ್ಯಸನವರ್ಜನಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತನ್ನ ಅನುಭವಗಳನ್ನು ಹಂಚಿಕೊಂಡರು.

ಶ್ರೀ ಎಚ್ ಎನ್ ವೆಂಕಟೇಶ್ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಸನ್ನ ಅಡಿಗರು ವಂದನಾರ್ಪಣೆ ಮಾಡಿದರು. ಶ್ರೀ ಮಂಜುನಾಥ ಭಟ್ ಬೈಲಾರ ಮತ್ತು ಬಳಗದವರಿಂದ ವೇದಘೋಷ ಹಾಗೂ ಕುಮಾರಿ ಆದ್ಯ & ಆರಾದ್ಯರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯ ಕಾರ್ಯಕ್ರಮ ನಿರ್ವಹಿಸಿದವರು ಡಾ| ಜಯಶಂಕರ ಕಂಗಣ್ಣಾರು.

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ರುದ್ರಪಠಣ, ಮಹಿಳೆಯರಿಂದ ಕುಂಕುಮಾರ್ಚನೆ, ಹಾಗೂ

ಸಾಮೂಹಿಕ ಸತ್ಯನಾರಾಯಣ ಪೂಜೆ ಜರುಗಿದ್ದು, ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: 6362835435

ನಟೆಶ್ ವೈ ಆರ್

ಕಾರ್ಯದರ್ಶಿ ಹವ್ಯಕಸಭಾ ಉಡುಪಿ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now