
ಉಡುಪಿ : ಮಣಿಪಾಲ – ಪೆರಂಪಳ್ಳಿ – ಅಂಬಾಗಿಲು ಪ್ರಮುಖ ರಸ್ತೆಯ ಬದಿಯಲ್ಲಿ ಸಮರ್ಪಕ ಚರಂಡಿಲ್ಲದೆ ರಸ್ತೆಯ ಮೇಲೆ ನೀರು ಕೆರೆಯಂಥಾಗಿ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಈ ರಸ್ತೆ ಮೇಲೆ ನೀರು ನಿಂತಿರುವ ಸ್ಥಳ ಸೆಂಚುರಿ ಚಿಕನ್ ಸೆಂಟರ್ ಎದುರುಗಡೆ ಪೆರಂಪಳ್ಳಿ ಮತ್ತು ವಿಶ್ವಾಸ್ ಹೋಟೆಲ್ ಸಮೀಪ, ರಸ್ತೆಯು ಬಹಳ ಪ್ರಮುಖವಾಗಿ ಮಣಿಪಾಲಕ್ಕೆ ಸಂಪರ್ಕಿಸುವ ಪ್ರಮುಖರಸ್ತೆಯಾಗಿದ್ದು ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಆದರೆ ಮಳೆಗಾಲ ಬಂದರೆ ಈ ರಸ್ತೆಯಲ್ಲಿ ಚರಂಡಿಲ್ಲದೆ ಮಳೆ ನೀರು ರಸ್ತೆಯಲ್ಲಿ ನಿಲ್ಲುವುದರಿಂದ ಈಗಾಗಲೇ ಈ ರಸ್ತೆ ಮೇಲೆ ನೀರು ನಿಂತಿರುವುದರಿಂದ ದೊಡ್ಡ ದೊಡ್ಡ ಹೊಂಡಗಳು ಬಿದ್ದಿದೆ. ಈ ರಸ್ತೆಯು ಮಣಿಪಾಲ ಕೆ ಎಂ ಸಿ ಹಾಸ್ಪಿಟಲ್ ಹೋಗುವ ಪ್ರಮುಖ ರಸ್ತೆಯಾಗಿದೆ. ರಾತ್ರಿ ಹೊತ್ತು ಆಂಬುಲೆನ್ಸ್ ರೋಗಿಗಳನ್ನು ಕರ್ಕೊಂಡು ಬರುವುದರಿಂದ, ರಸ್ತೆಯ ಮೇಲೆ ನೀರು ನಿಂತುಕೊಂಡು ಹೊಂಡಗಳು ಕಾಣುತ್ತಿಲ್ಲ. ಹಾಗಾಗಿ ಮಳೆ ಬರುವಾಗ ಈ ರಸ್ತೆಯಲ್ಲಿ ಬಹಳಷ್ಟು ಅಪಘಾತಗಳು ಆಗಿದೆ. ಸಮರ್ಪಕವಾಗಿ ದಾರಿದೀಪಗಳು ಈ ರಸ್ತೆಯಲ್ಲಿ ಇಲ್ಲ. ಹುಲ್ಲುಗಳ ಪೊದೆಗಳು ರಸ್ತೆ ಬಾಗಿರುವುದರಿಂದ, ವಾಹನ ಸವಾರರಿಗೆ ಬಹಳಷ್ಟು ಸಮಸ್ಯೆ ಆಗಿದೆ. ಚರಂಡಿ ಇಲ್ಲದಿರುವುದರಿಂದ ಮಳೆ ನೀರು ರಸ್ತೆಯಲ್ಲಿ ಹರಿಯುವುದರಿಂದ. ಜಲ್ಲಿಕಲ್ಲು ಹಾಗೂ ಮಣ್ಣುಗಳು ರಸ್ತೆಯ ಮೇಲೆ ದಿಬ್ಬದಂತಾಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಆದರೆ ರಸ್ತೆಯ ಬದಿಯಲ್ಲಿ ಚರಂಡಿ ಇಲ್ಲದೆ ಸಾವಿರಾರು ಕೋಟಿ ರೂಪಾಯಿಯ ರಸ್ತೆಯು ಸಂಪೂರ್ಣ ಹಾಳಾಗುವ ಸನ್ನಿವೇಶವಿದ್ದು. ಇಲಾಖೆಯು ಈ ಮೊದಲು ರಸ್ತೆ ಮಾಡುವಾಗ ಚರಂಡಿ ಮಾಡದಿರುವುದು ಇದು ದೊಡ್ಡ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಣಿಪಾಲ ಕಾಯಿನ್ ಸರ್ಕಲ್ ಇಂದ ಅಂಬಾಗಿಲು ತನಕ ಈ ರಸ್ತೆಯು ಬದಿಯಲ್ಲಿ ಚರಂಡಿ ಇಲ್ಲದೆ ರಸ್ತೆಯ ಮೇಲೆ ಹರಿಯುವ ನೀರು ರಸ್ತೆಯ ಮೇಲೆ ನಿಲ್ಲುವಂತೆ ಆಗಿದೆ. ಈ ಕೂಡಲೇ ಈ ಸಾರ್ವಜನಿಕ ಸಮಸ್ಯೆಯನ್ನು ರಸ್ತೆ ಎರಡು ಬದಿ ಸಮರ್ಪಕವಾಗಿ ಚರಂಡಿಯನ್ನು ಮಾಡಿ ಕೂಡಲೇ ನಗರಸಭೆ ಅಧಿಕಾರಿಗಳು ಹಾಗೂ ಪಿಡಬ್ಲ್ಯೂ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕೆಂದು ಸಾರ್ವಜನಿಕರ ಮತ್ತು ವಾಹನ ಸವಾರರ ಪರವಾಗಿ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಆಗ್ರಹಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now