
ಅಂಡರ್ ಆರ್ಮ್ ಕ್ರಿಕೆಟ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಯಂಗ್ ಫ್ರೆಂಡ್ಸ್ ಉರ್ವ ತಂಡದ ಮಾಲೀಕ ತಿಲಕ್ ಗುರು ಅವರು ವಿಧಿವಶರಾಗಿದ್ದಾರೆ.
ಅಂಡರ್ ಆರ್ಮ್ ಕ್ರಿಕೆಟ್ನ ಅಂಬಾಸಿಡರ್ ಎಂದೇ ಗುರುತಿಸಿಕೊಂಡಿದ್ದ ತಿಲಕ್ ಗುರು ಅವರು, ಉರ್ವ ಮೈದಾನದಲ್ಲಿ ನಡೆಯುತ್ತಿದ್ದ ಹಲವು ಪಂದ್ಯಾವಳಿಗಳ ಪೋಷಕ, ಮೇಲ್ವಿಚಾರಕ ಹಾಗೂ ತಮ್ಮ ತಂಡದ ನಾಯಕರಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅಂಡರ್ ಆರ್ಮ್ ಕ್ರಿಕೆಟ್ಗೆ ನೇರ ಪ್ರಸಾರದ ಪರಿಕಲ್ಪನೆಯನ್ನು ಪರಿಚಯಿಸುವ ಮೂಲಕ ಈ ಕ್ರೀಡೆಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟ ಹೆಗ್ಗಳಿಕೆ ಅವರದ್ದು. ಅಲ್ಲದೆ, ಆಟಗಾರರಿಗೆ ದಿನ ಭತ್ಯೆ ಆಧಾರಿತ ಸಂಭಾವನೆ ನೀಡುವ ವ್ಯವಸ್ಥೆ ಜಾರಿಗೆ ತರುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now