
ಬ್ರಹ್ಮಾವರ : ರಾಷ್ಟ್ರೀಯ 66 ರಲ್ಲಿ ಇಂದು ಬೆಳಿಗ್ಗೆ ಭೀಕರ ರಸ್ತೆ ಅಪಘಾತ ನಡೆದಿದ್ದು, ಖ್ಯಾತ ಹುಲಿ ವೇಷದ ಕಲಾವಿದ ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ಬ್ರಹ್ಮಾಾವರದ ಹೇರೂರು ರೂಡ್ ಸೆಟ್ ಕ್ರಾಸಿಂಗ್ ಬಳಿ ನಡೆದಿದೆ.
ಸಂತೆಕಟ್ಟೆ ಲಕ್ಷ್ಮಿನಗರದ ಐದು ಯುವಕರು ಗೋವಾದಲ್ಲಿ ನಡೆದ ಮೀಟಿಂಗ್ ಮುಗಿಸಿ, ಇನ್ನೇನು ಮನೆಗೆ ತಲುಪುವ ಮೊದಲೇ, ರಸ್ತೆ ಅಪಘಾತ ನಡೆದಿದೆ. ಉಡುಪಿಯತ್ತ ತೆರಳುತ್ತಿದ್ದ ವೇಗದೂತ ಬಸ್ಸೊಂದು ದಿಡೀರ್ ಆಗಿ ಬ್ರೇಕ್ ಹಾಕಿದ ಪರಿಣಾಮ, ಇನ್ನೋವಾ ಕಾರು ನಿಯಂತ್ರಣ ತಪ್ಪಿ ಬಸ್ಸಿನ ಹಿಂಬದಿಗೆ ಗುದ್ದಿದೆ. ಈ ವೇಳೆ ಲಕ್ಷ್ಮೀ ನಗರದ ಮಂಜುನಾಥ್ (43) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಉಳಿದ ನಾಲ್ವರು ಅತ್ಯಲ್ಪ ಗಾಯದಿಂದ ಅಪಾಯದಿಂದ ಪಾರಾಗಿದ್ದಾರೆ.
ಮೃತ ಮಂಜುನಾಥ್ ಖ್ಯಾತ ಹುಲಿ ವೇಷದ ಕಲಾವಿದನಾಗಿದ್ದು, ಕಳೆದ ಹಲವು ವರ್ಷಗಳಿಂದ ಹಲವಾರು ಹುಲಿ ವೇಷದಾರಿಗಳಿಗೆ ಪೈಂಟಿಂಗ್ ಅನ್ನು ಮಾಡಿದ್ದರು. ಬ್ರಹ್ಮಾವರ ಠಾಣೆಯಲ್ಲಿ ಕೇಸು ದಾಖಲಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now