
ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಮುಖ್ಯ ನಿರ್ವಾಹಣಾಧಿಕಾರಿಯವರು ದಿನಾಂಕ 22/06/2026 ಕಚೇರಿಗೆ ಬೆಳಿಗ್ಗೆ 10:45 ಗಂಟೆಗೆ ಬಂದು ತನ್ನ ಕಚೇರಿಯಲ್ಲಿರುವ ಈ-ಮೇಲ್‌ನ್ನು ಪರಿಶೀಲಿಸಿದಾಗ ದಿನಾಂಕ 21/06/2026 ರಂದು ಸಂಜೆ 6:33 ಗಂಟೆಗೆ Prl.District and Session Judge(Udupi) ಸಂದೇಶ ಬಂದಿದ್ದು, ಅದನ್ನು ತೆರೆದು ನೋಡಲಾಗಿ ಅದರಲ್ಲಿ ಇಂಗ್ಲಿಷ್ ಬಾಷೆಯಲ್ಲಿ ಬಾಂಬ್ ಇರಿಸಿರುವುದಾಗಿ ಮೈಲ್ ಬಂದಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿರುತ್ತಾರೆ. ಕೂಡಲೇ ಕಾರ್ಯಪ್ರವರ್ತರಾದ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ, ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ಮತ್ತು ಪೊಲೀಸ್ ಉಪನಿರೀಕ್ಷಕರಾದ ಭರತೇಶ್ ಕಂಕಣವಾಡಿ ರವರು ಉಡುಪಿ ನ್ಯಾಯಾಲಯ ಸಂಕೀರ್ಣಕ್ಕೆ ಭೇಟಿ ನೀಡಿ ಅಲ್ಲಿಗೆ ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳವನ್ನು ನ್ಯಾಯಾಲಯ ಸಂಕೀರ್ಣಕ್ಕೆ ಕರೆಯಿಸಿ ನ್ಯಾಯಾಲಯದೊಳಗಿರುವ ಎಲ್ಲಾ ಕೋಣೆಗಳನ್ನು, ಹಾಲ್ ಗಳನ್ನು ಮತ್ತು ಶೌಚಾಲಯಗಳನ್ನು ತಪಾಸಣೆ ನಡೆಸಲಾಯಿತು ಹಾಗೂ ನ್ಯಾಯಾಲಯದ ಆವರಣ ಹೊರಗೂ ತಪಾಸಣೆ ನಡೆಸಲಾಯಿತು. ನಂತರ ಇದೊಂದು ಸಂಶಯಿತ ಹುಸಿ ಕರೆಯೆಂದು ಕಂಡು ಬಂದ ಕಾರಣ ನ್ಯಾಯಾಲಯದ ಕಲಾಪ ಮುಂದುವರೆಯುವಂತೆ ಅವಕಾಶ ಮಾಡಿಕೊಡಲಾಯಿತು. ಸದರಿ ಹುಸಿ ಬಾಂಬ್ ಮೇಲ್ ಕಳುಹಿಸಿದಾತನ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 76/2026 ಕಲಂ 351(4) 353(1) (b) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now