
ನವಚೇತನ ಯುವಕ ಮಂಡಲ (ರಿ.) ಇದರ 2026–27ನೇ ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ದಿನಾಂಕ ಜೂನ್ 07 2026ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ನಡೆಯಿತು.
ಮಂಡಳಿಯ ಅಧ್ಯಕ್ಷರಾಗಿ ರಾಘವೇಂದ್ರ ಕುತ್ಪಾಡಿ, ಉಪಾಧ್ಯಕ್ಷರಾಗಿ ಹರೀಶ್ ಶೆಟ್ಟಿಗಾರ್, ಕಾರ್ಯದರ್ಶಿಯಾಗಿ ಸಂದೀಪ್ ಎಸ್. ಸುವರ್ಣ, ಜೊತೆ ಕಾರ್ಯದರ್ಶಿಯಾಗಿ ಲಕ್ಷ್ಮಣ ಅಂಚನ್ ಹಾಗೂ ಕೋಶಾಧಿಕಾರಿಯಾಗಿ ನಾರಾಯಣ ಪೂಜಾರಿ ಆಯ್ಕೆಯಾಗಿದ್ದಾರೆ.
ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸುಪ್ರೀತ್ ಸುವರ್ಣ ಮತ್ತು ಶಿವಾನಂದ, ಕ್ರೀಡಾ ಕಾರ್ಯದರ್ಶಿಗಳಾಗಿ ಪ್ರಜ್ವಲ್ ಕುಮಾರ್ ಹಾಗೂ ವಿಖ್ಯಾತ ಕುಮಾರ್, ಸಾಮಾಜಿಕ ಕಾರ್ಯದರ್ಶಿಗಳಾಗಿ ಪ್ರವೀಣ್ ಪಾಲನ್ ಮತ್ತು ಕೌಶಿಕ್ ಪೂಜಾರಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ಸದಸ್ಯರಾಗಿ ಅಶೋಕ್ ಪಾಲನ್, ಅಶೋಕ್ ಮೇಸ್ತ್ರಿ, ಜಯಕರ, ಮೋಹನ್ ಸೋನ್ಸ್, ನಾಗೇಶ್ ಹಾಗೂ ಪ್ರಕಾಶ್ ಬಂಗೇರ, ರಾಜು ನಂಬಿಯಾರ್ ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಮುಂದಿನ ದಿನಗಳಲ್ಲಿ ಸಂಘಟನೆಯ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವ ಸಂಕಲ್ಪವನ್ನು ನೂತನ ತಂಡ ವ್ಯಕ್ತಪಡಿಸಿದೆ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now