
ದಿನಾಂಕ 03/06/2026 ರಂದು ಮಲ್ಪೆಯ ಸನತ್ ಕಾಮತ್ ಎಂಬವರು ಅಕ್ರಮವಾಗಿ ಅನಿಲ ಸಿಲಿಂಡರ್ ಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ವಿಚಾರವನ್ನು ಆಹಾರ ಇಲಾಖೆಗೆ ಮಾಹಿತಿ ನೀಡಿದಂತೆ ಶ್ರೀಮತಿ ಆಶಾ.ಕೆ ಪ್ರಾಯ: 53 ವರ್ಷ ಆಹಾರ ಶಿರಸ್ತೇದಾರರು, ಉಡುಪಿ ತಾಲೂಕು ಕಛೇರಿ, ಉಡುಪಿ ಜಿಲ್ಲೆ ಇವರು ಆಹಾರ ನಿರೀಕ್ಷಕರಾದ ಶ್ರೀ ಹಿತೇಶ್ ಯು.ಬಿ ರವರೊಂದಿಗೆ ಸ್ಥಳಕ್ಕೆ ಬಂದಿದ್ದು, ಮಲ್ಪೆ ಪೊಲೀಸ್ ಠಾಣಾ ಪಿಎಸ್‌ಐ ಅನೀಲ್ ಕುಮಾರ್ ಮತ್ತು ಸಿಬ್ಬಂದಿಯವರಾದ ಹೆಚ್.ಸಿ ಭಾಸ್ಕರ, ಆದರ್ಶ, ಸುರೇಶ, ಆನಂದ, ಪಿಸಿ ಕುಬೇರ, ಶರಣಬಸವ, ನಾಗರಾಜ ರವರೊಂದಿಗೆ ಬೆಳಿಗ್ಗೆ 10:45 ಗಂಟೆಗೆ ಉಡುಪಿ ತಾಲೂಕು ಕೊಡವೂರು ಗ್ರಾಮದ ಮಲ್ಪೆ ಜಂಕ್ಷನ್ ಬಳಿ ಇರುವ ಸನತ್ ಕಾಮತ್ ರವರ ಮನೆ ಅಂಗಳಕ್ಕೆ ದಾಳಿ ನಡೆಸಿದಾಗ ಸ್ಥಳದಲ್ಲಿ 19 ಕೆ.ಜಿ ಯ ಅನಿಲ ತುಂಬಿದ 1 ಸಿಲಿಂಡರ್ ಸಹಿತ ಒಟ್ಟು 12 ವಾಣಿಜ್ಯ ಸಿಲಿಂಡರ್ ಗಳು ಮತ್ತು 5 ಕೆ.ಜಿ ಯ 9 ವಾಣಿಜ್ಯ ಸಿಲಿಂಡರ್ ಗಳು ದಾಸ್ತಾನು ಇರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಸನತ್ ಕಾಮತ್ ರವನ್ನು ವಿಚಾರಿಸಲಾಗಿ, ಸದರಿಯವರು ತಾನೇ ಸದರಿ ವಾಣಿಜ್ಯ ಬಳಕೆಯ ಸಿಲಿಂಡರ್ ಗಳನ್ನು ಮೀನುಗಾರಿಕಾ ಉದ್ದೇಶಕ್ಕಾಗಿ ಬಳಸುವವರಿಗೆ ಮಾರಾಟ ಮಾಡಲು ದಾಸ್ತಾನು ಇರಿಸಿರುವುದಾಗಿ, ಈ ಬಗ್ಗೆ ಯಾವುದೇ ಪರವಾನಿಗೆ ಹಾಗೂ ದಾಖಲೆಗಳನ್ನು ಹೊಂದಿರುವುದಿಲ್ಲ ಎಂದು ತಿಳಿಸಿದ ಮೇರೆಗೆ ಸದರಿ 19 ಕೆಜಿ ಯ 12 ವಾಣಿಜ್ಯ ಸಿಲಿಂಡರ್ ಮತ್ತು 5 ಕೆಜಿ ಯ 9 ವಾಣಿಜ್ಯ ಸಿಲಿಂಡರ್ ಗಳನ್ನು ಆಹಾರ ಶಿರಸ್ತೇದಾರರು ಮಹಜರು ಮೂಲಕ ಸ್ವಾಧೀನಪಡಿಸಿಕೊಂಡು, ಮುಂದಿನ ಕಾನೂನು ಕ್ರಮಕ್ಕಾಗಿ ಠಾಣೆಗೆ ಬಂದು ದೂರು ನೀಡಿದ ಮೇರೆಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 63/2026, ಕಲಂ: 3, 7 Essential Commodities Act 1955 ಮತ್ತು ಕಲಂ: 4, 7 Liquefied Petroleum Gas(Regulation of Supply and Distribution) Order 2000 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಪ್ರಕರಣದ ಆರೋಪಿತನಾದ ಸನತ್ ಆರ್ ಕಾಮತ್ ಪ್ರಾಯ: 43 ವರ್ಷ ತಂದೆ: ಯು ಶ್ರೀನಿವಾಸ ಕಾಮತ್ ವಾಸ: ಮನೆ ನಂಬ್ರ 30-21-4, ದೇವಿ ಕೃಪಾ ಮಲ್ಪೆ ಜಂಕ್ಷನ್ ಬಳಿ, ಮಲ್ಪೆ ಮುಖ್ಯ ರಸ್ತೆ ಕೊಡವೂರು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಈತನನ್ನು ದಿನಾಂಕ 03/06/2026 ರಂದು 20:15 ಗಂಟೆಗೆ ಮಲ್ಪೆ ಜಂಕ್ಷನ್ ಬಳಿ ವಶಕ್ಕೆ ಪಡೆದು, ವಿಚಾರಣೆ ನಡೆಸಿದಲ್ಲಿ ಆರೋಪಿತನು ತಾನು ಯಾವುದೇ ಪರವಾನಿಗೆ ಇಲ್ಲದೆ ಅನಿಲ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿ ಅವುಗಳನ್ನು ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಆರೋಪಿತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now