
ಶಿರ್ವ : ಅರಣ್ಯ ಇಲಾಖೆ ಉಡುಪಿ ವಲಯದ ವತಿಯಿಂದ ಜೂ, 5 ರಂದು ಬೆಳಗ್ಗೆ ಶಿರ್ವ ಪೋಲಿಸ್ ಠಾಣೆಯ ಪರಿಸರದಲ್ಲಿ 30 ಗಿಡಗಳನ್ನು ನೆಟ್ಟು ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. “ತಾಯಿಯ ಹೆಸರಿನಲ್ಲಿ ಒಂದು ಗಿಡ” ಎಂಬ ಧ್ಯೇಯವಾಕ್ಯದೊಂದಿಗೆ ಗಿಡಗಳನ್ನು ನೆಡಲಾಯಿತು. ಸರಳ ಕಾರ್ಯಕ್ರಮದಲ್ಲಿ ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದರವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಶೌರ್ಯ ಸಿಬ್ಬಂದಿಗೆ ಗಿಡಗಳನ್ನು ಹಸ್ತಾಂತರಿಸಿ, ಪರಿಸರದಲ್ಲಿ ಗಿಡಗಳನ್ನು ನೆಟ್ಟು ಅದನ್ನು ಉಳಿಸಬೇಕು, ಪರಿಸರ ನಮ್ಮನ್ನುರಕ್ಷಿಸುತ್ತದೆ, ನಾವು ಪರಿಸರವನ್ನು ರಕ್ಷಿಸಬೇಕೆಂದು ಕರೆಕೊಟ್ಟರು. ಶಿರ್ವ ಠಾಣಾ ಪರಿಸರದಲ್ಲಿ ಶಿರ್ವ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ(PDO)ಒಂದು ಗಿಡ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅರಣ್ಯ ಇಲಾಖೆಯ ಪಡುಬಿದ್ರೆ ಘಟಕದ DRF ಮಲ್ಲಿಕಾರ್ಜುನ ರವರು 30 ಗಿಡಗಳನ್ನು ಶಿರ್ವ ಠಾಣೆಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಪಡುಬಿದ್ರಿ ಘಟಕದ ಬೀಟ್ ಫಾರೆಸ್ಟ್ ಅಕಿಲೇಶ್, ಶ್ರೀನಿವಾಸ್ ಜೋಗಿ, ಶಿರ್ವ. ಠಾಣೆಯ ಎಎಸ್ ಐ ಶ್ರೀಧರ್, ಹೆಡ್ ಕಾನ್ಸಬಲ್ ಮಂಜುನಾಥ್ ಅಡಿಗ, ಪ್ರಕಾಶ್, ವೆಂಕಟೇಶ್ ಮತ್ತು ಧರ್ಮಸ್ಥಳ.
ಗ್ರಾಮಾಭಿವದ್ಧಿ ಯೋಜನೆಯ ಶಿರ್ವ ಹಾಗೂ ಸೂಡ ಘಟಕದ ಶೌರ್ಯ ಸಂಘದ ಕಾರ್ಯಕರ್ತರು ಹಾಜರಿದ್ದರು.

ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now