
ದಿನಾಂಕ 01.06.2026 ರಂದು ಬೆಳಿಗ್ಗೆ 09.00 ಗಂಟೆಗೆ ಕಾಪು ತಾಲೂಕು ಶಿರ್ವ ಗ್ರಾಮದ ಕಲೊಟ್ಟು ಸೇತುವೆಯ ಕೆಳಗಡೆ ಪಾಪನಾಶಿನಿ ಹೊಳೆಯ ನೀರಿನಲ್ಲಿ ಯಾವುದೋ ಜಾನುವಾರಿನ ತಲೆ ಬುರುಡೆಯ ಭಾಗ, ಕಾಲಿನ ಗೆರಸು ಇತ್ಯಾದಿ ಇರುವುದಾಗಿ ಬಾತ್ಮೀದಾರರು ಮಾಹಿತಿ ನೀಡಿದ ಮೇರೆಗೆ ಠಾಣಾ ಎಎಸ್ಐ ಸುರೇಶ್ ಕುಮಾರ್ ಹಾಗೂ ಪಿಸಿ ಅರುಣ ಕುಮಾರ ಕೆಎಂ ಜೊತೆಯಲ್ಲಿ ಮೇಲ್ಕಂಡ ಸ್ಥಳಕ್ಕೆ ಬಂದು ನೋಡಿದಾಗ ಬಾತ್ಮೀದಾರರು ಮಾಹಿತಿಯಲ್ಲಿ ತಿಳಿಸಿದ ವಸ್ತುಗಳು ಇರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಉಪ ನಿರ್ದೇಶಕರು ಪಶು ಆಸ್ಪತ್ರೆ ಕಾಪು ಹಾಗೂ ಜಿಲ್ಲಾ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳು ಉಡುಪಿ ಇವರುಗಳನ್ನು ಹಾಗೂ ಪಂಚ ಸಾಕ್ಷಿದಾರರನ್ನು ಸ್ಥಳಕ್ಕೆ ಬರಮಾಡಿಕೊಂಡು ಬೆಳಿಗ್ಗೆ 10.45 ಗಂಟೆಗೆ ಪಂಚ ಸಾಕ್ಷಿದಾರರ ಸಮಕ್ಷದಲ್ಲಿ ಪಶು ಸಹಾಯಕ ನಿರ್ದೇಶಕರು ಪರಿಶೀಲಿಸಲಾಗಿ ಸೇತುವೆಯ ಕೆಳ ಭಾಗದಲ್ಲಿ ಪಾಪನಾಶಿನಿ ಹೊಳೆಯ ದಕ್ಷಿಣ ಬದಿಯಲ್ಲಿ ನೀರಿನಲ್ಲಿ ಯಾವುದೋ ಜಾನುವಾರಿನ ತಲೆಯ ಮೇಲ್ದವಡೆಯ ಪೂರ್ತಿ ಭಾಗ ಇರುವುದು ಕಂಡು ಬರುತ್ತದೆ. ಇದರಲ್ಲಿ ಹಲ್ಲುಗಳು ಮುಗಿನ ಹೊಳ್ಳೆಯ ಭಾಗ ಇದ್ದು, ಚರ್ಮ ಇರುವುದಿಲ್ಲ. ಸದರಿ ಮೇಲ್ದವಡೆಯ ಭಾಗವು ಹಸುವಿನದ್ದಾಗಿರಬಹುದು ಎಂದು ಪಶು ಸಹಾಯಕ ನಿರ್ದೇಶಕರು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಸ್ವಲ್ಪ ದೂರದಲ್ಲಿ ನೀರಿನಲ್ಲಿ ಜಾನುವಾರಿನ ಕಾಲಿನ 2 ಗೆರಸುಗಳು ಮತ್ತು ಮಾಂಸ ಹಾಗೂ ಎರಡು ಕಡೆ ಜಾನುವಾರಿನ ಹೊಟ್ಟೆಯ ಒಳಗಿನ ಭಾಗಗಳು ಇರುವುದು ಕಂಡು ಬರುತ್ತದೆ. ಸದರಿ ಗೆರಸುಗಳು ಹಾಗೂ ಮಾಂಸ ಹಸುವಿನದ್ದಾಗಿರಬಹುದು ಎಂದು ತಿಳಿದುಬಂದಿರುತ್ತದೆ. ಯಾರೋ ದುಷ್ಕರ್ಮಿಗಳು ಹಸುವನ್ನು ಕಡಿದು ಮಾಂಸ ಮಾಡಿ ಅವಶೇಷಗಳನ್ನು ಹೊಳೆಗೆ ಎಸೆದಿರುವುದರಿಂದ ಈ ಬಗ್ಗೆ ಸದರಿ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿದ್ದು, ಈ ಬಗ್ಗೆ ಮಂಜುನಾಥ ಮರಬದ, ಪಿಎಸ್ಐ ಶಿರ್ವ ಪೊಲೀಸ್ ಠಾಣೆ ಇವರ ದೂರಿನಂತೆ ಶಿರ್ವ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 51/2026, U/S. 4, 12 The Karnataka Prevention of slaughter and preservation of cattle Act 2020 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now