ಶ್ರೀ ನಾರಾಯಣ ಗುರು ಉದ್ಯಾನವನದಲ್ಲಿ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮ ಶ್ರೀ ಶನೀಶ್ವರ ಕಥೆಯೊಂದಿಗೆ ಮುಕ್ತಾಯ.

ಶ್ರೀ ನಾರಾಯಣ ಗುರು ಉದ್ಯಾನವನದಲ್ಲಿ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮ ಶ್ರೀ ಶನೀಶ್ವರ ಕಥೆಯೊಂದಿಗೆ ಮುಕ್ತಾಯ.

0Shares

ಮೇ 14 ರಿಂದ 16 ರ ವರೆಗೆ ಶ್ರೀ ನಾರಾಯಣ ಗುರು ಯುವ ವೇದಿಕೆ ರಿ ಉಡುಪಿ ಇದರ ವತಿಯಿಂದ ಶ್ರೀ ನಾರಾಯಣ ಗುರು ಉದ್ಯಾನವನ ಬಲಾಯಿ ಪಾದೆ ಯಲ್ಲಿ ಮೂರು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಯಶ್ವಸ್ವಿಯಾಗಿ ನೆರವೇರಿತು. ಮೇ 14 ರಂದು ಯುವವಾಹಿನಿ ಉಡುಪಿ ಘಟಕದಿಂದ ಶ್ರೀ ನಾರಾಯಣ ಗುರುಗಳ ತತ್ವ ಸಂದೇಶ ಸಾರುವ ಗುರು ಸತ್ಸಂಗ ಕಾರ್ಯಕ್ರಮ ನೆರವೇರಿತು. ಯುವ ಪ್ರತಿಭೆ ಶ್ರೇಯಸ್ ಕೋಟ್ಯಾನ್ ಗುರು ಸಂದೇಶ ನೀಡಿದರು. ದಿನೇಶ್ ಜತ್ತನ್ ಅರೂರುತೋಟ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಮೇ 15 ರಂದು ಶ್ರೀ ರಾಮ ಕೃಷ್ಣ ಭಜನಾ ಮಂಡಳಿ, ಬಿಲ್ಲವ ಸೇವಾ ಸಂಘ ಕುತ್ಪಾಡಿ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನೆರವೇರಿತು .ಶ್ರೀನ್ವಿಟೋಭಾ ರುಕುಮಾಯಿ ಮಂದಿರ ಕಟ್ಟಡ ಸಮಿತಿಯ ಅಧ್ಯಕ್ಷರಾದ ರಘುನಾಥ್ ಕೋಟ್ಯಾನ್ ರವರ ನೇತೃತ್ವದಲ್ಲಿ ನಡೆದ ಭಜನಾ ಕಾರ್ಯಕರ್ಮ ನೆರವೇರಿತು ಭಾಸ್ಕರ್ ಸುವರ್ಣ ಕನ್ನರಪಾಡಿ. ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಮೇ 16 ರಂದು ಶ್ರೀ ಬ್ರಹ್ಮ ಬೈದರ್ಕಳ ಯಕ್ಷಗಾನ ಕಲಾ ಮಂಡಳಿ (ರಿ) ಬೊಳ್ಜೆ ಇದರ ಸದಸ್ಯರಿಂದ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ರಮೇಶ್ ಜತ್ತನ್ ಬಬ್ಬರ್ ಜಿಡ್ಡ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಮೂರು ದಿನಗಳ ಕಾಲ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು , ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು , ಧಾರ್ಮಿಕ ಮುಖಂಡರು ಹಾಗೂ ಅಪಾರ ಪ್ರಮಾಣದಲ್ಲಿ ಸಾರ್ವಜನಿಕರು ಭಾಗವಹಿಸಿದರು.

ಕಾರ್ಯಕ್ರಮಕ್ಕೆ ಸಹಕರಿಸಿದ ಮತ್ತು ಆಗಮಿಸಿದ ಸರ್ವರಿಗೂ ಕೂಡ ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ ಇದರ ಗೌರವಾಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆ ಗುಡ್ಡೆ, ಅಧ್ಯಕ್ಷರಾದ ಮಿಥುನ್ ಅಮೀನ್ ಸಂತೆಕಟ್ಟೆ, ಉಪಾಧ್ಯಕ್ಷರಾದ ಶಬರೀಶ್ ಸುವರ್ಣ ಅಲೆವೂರು, ಸಾಯಿರಾಜ್ ಕಿದಿಯೂರು, ವಿಕೇಶ ಸುವರ್ಣ ಹೆಜಮಾಡಿ, ಮಹೇಶ್ ಪೂಜಾರಿ ಬೈಂದೂರು, ದಿವಾಕರ್ ಬೊಳ್ಜೆ, ಸಚಿನ್ ಸಾಲ್ಯಾನ್ ಉದ್ಯಾವರ, ಲಕ್ಷ್ಮಣ ಸನಿಲ್, ರಾಘು ಸನಿಲ್, ನವೀನ್ ಪೂಜಾರಿ, ದಿನೇಶ್ ಪೂಜಾರಿ, ಸುಪ್ರೀತ್ ಸುವರ್ಣ, ಪ್ರಸನ್ನ ಪೂಜಾರಿ, ಸುಧಾಕರ್ ಬೊಳ್ಜೆ, ಸುನೀಲ್ ಪೂಜಾರಿ ಮಲ್ಪೆ, ಹರೀಶ್ ಪೂಜಾರಿ ಮಲ್ಪೆ , ಗುಣಕರ ಸನಿಲ್, ಮೋಹನ್ ಧನ್ಯವಾದ ಸಲ್ಲಿಸಿರುತ್ತಾರೆ.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now