ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿ ಧರ್ಮ ಗುರುಗಳಾದ ಅತೀ ವಂದನಿಯ ಜೋಸೆಫ್ ಮಾಚಾದೋ ಅವರ ಪೌರೋಹಿತ್ಯದ 40ನೇ ವಾರ್ಷಿಕೋತ್ಸವದ ಆಚರಣೆ

ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿ ಧರ್ಮ ಗುರುಗಳಾದ ಅತೀ ವಂದನಿಯ ಜೋಸೆಫ್ ಮಾಚಾದೋ ಅವರ ಪೌರೋಹಿತ್ಯದ 40ನೇ ವಾರ್ಷಿಕೋತ್ಸವದ ಆಚರಣೆ

0Shares

ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿ ಈ ದೇವಾಲಯದ ಧರ್ಮ ಗುರುಗಳಾದ ಅತೀ ವಂದನಿಯ ಜೋಸೆಫ್ ಮಾಚಾದೋ ಅವರ ಪೌರೋಹಿತ್ಯದ 40ನೇ ವಾರ್ಷಿಕೋತ್ಸವದ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಾಮಾನ್ಯವಾಗಿ ಇದನ್ನು ರೂಬಿ ಜುಬಿಲಿಎಂದು ಕರೆಯಲಾಗುತ್ತದೆ , ಇದು ನಾಲ್ಕು ದಶಕಗಳ ಸಮರ್ಪಿತ ಸೇವೆ, ಆಧ್ಯಾತ್ಮಿಕ ನಾಯಕತ್ವ ಮತ್ತು ನಿಷ್ಠಾವಂತ ಸೇವೆಯನ್ನು ಗೌರವಿಸುವ ಮಹತ್ವದ ಮೈಲಿಗಲ್ಲು. ಈ ಆಚರಣೆಯನ್ನು ಸಾಮಾನ್ಯವಾಗಿ ವಿಶೇಷ ಕೃತಜ್ಞತಾ ಪ್ರಾರ್ಥನೆ, ಧರ್ಮಗ್ರಂಥ ಮತ್ತು ಸೇವೆಯ ಕುರಿತು ವೈಯಕ್ತಿಕ ಪ್ರತಿಬಿಂಬಗಳು ಮತ್ತು ಪಾದ್ರಿಯ ಶಾಶ್ವತ ಪ್ರಭಾವವನ್ನು ಗೌರವಿಸಲು ಪ್ಯಾರಿಷಿಯನ್ನರೊಂದಿಗೆ ಕೂಟಗಳನ್ನು ಆಚರಿಸಿದರು. ದಿವ್ಯ ಬಲಿಪೂಜೆ ಹಾಗೂ ಪವಿತ್ರ ಪರಮ ಪ್ರಸಾದದ ಆರಾಧನೆಯೊಂದಿಗೆ ಆರಂಭಗೊಂಡಿತು. ದಿವ್ಯ ಬಲಿಪೋಜೆಯ ಸಹಾಯಜಕರಾಗಿ ಫೇತ್ರಿ ಚರ್ಚಿನ ಧರ್ಮ ಗುರುಗಳಾದ ವಂದನಿಯ ವಿಕ್ಟರ್ ಜೆರಾಲ್ಡ್ ಡಿಸೋಜಾ ಅವರೊಂದಿಗೆ ನೆರವೇರಿಸಿದರು. ಪರಮ ಪ್ರಸಾದದ ಆರಾಧನೆಯನ್ನು ಬ್ರದರ್ ಡೇರಿಕ್ ಮಾಸ್ಕರೆನ್ಹಸ್ ನಡೆಸಿದರು.
ಪೂಜೆಯ ಬಳಿಕ ಚರ್ಚ್ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವು ಪಾಲನಾ ಮಂಡಳಿಯ ವತಿಯಿಂದ ಆಯೋಜಿಸಲಾಗಿತ್ತು. ಕಾರ್ಯಕ್ರಮವು ಮಕ್ಕಳಿಂದ ಸ್ವಾಗತ ನ್ರತ್ಯದ ಮೂಲಕ ಕಾರ್ಯಕ್ರಮ ಆರಂಭಗೊಂಡು ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದರು. ಧರ್ಮಗುರುಗಳಿಗೆ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಡೊನ್ ಮೆಂಡೋನ್ಸಾ, ಕಾರ್ಯಧರ್ಶಿ ಶ್ರೀಮತಿ ಜೆಸಿಂತಾ ಡಿಸೋಜಾ, 20 ಆಯೋಗದ ಸಂಯೋಜಕಿ ಶ್ರೀಮತಿ ಸಾರಾ ಡೈಸಿ ಡಿಸೋಜಾ, ಕ್ರಿಸ್ತ ಜ್ಯೋತಿ ಕಾನ್ವೆಂಟಿನ ಹಿರಿಯರಾದ ಸಿಸ್ಟರ್ ಲವಿನಾ ಕ್ರಾಸ್ತಾ ಹಾಗೂ 13 ವಾರ್ಡಿನ ಗುರಿಕಾರರು ಹಾಗೂ ಸದಸ್ಯರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆಯನ್ನು ಬ್ರದರ್ ಡೇರಿಕ್ ಮಸ್ಕರೇನ್ಹಸ್ ಅವರು ನೀಡಿದರು. ಕಾರ್ಯಕ್ರಮದ ನಂತರ ಬಂದ ಅತಿಥಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು..

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now