
ಫಿರ್ಯಾದಿದಾರರಾದ ದೇವಿ(27) ಗಂಡ : ಮಹೇಶ್ ವಾಸ: ಮುಳ್ಳುಗುಜ್ಜಿ ಮನೆ, ಮದಗ ಅತ್ರಾಡಿ ಗ್ರಾಮ ಮತ್ತು ಅಂಚೆ ,ಉಡುಪಿ ಇವರ ಮನೆಯ ಪಕ್ಕದಲ್ಲಿ ಅವರ ತಾಯಿಯವರ ಮನೆಯಿದ್ದು, ಅಲ್ಲಿ ಫಿರ್ಯಾದಿದಾರರ ಅಣ್ಣ ಪೂನ್ನಯ್ಯ ಮತ್ತು ಆತನ ಹೆಂಡತಿ ಪಾರ್ವತಿ ವಾಸವಾಗಿದ್ದು, ಇನ್ನೊಂದು ಕಡೆ ಫಿರ್ಯಾದಿದಾರರ ಅಕ್ಕ ಚೆಲುವಿಯ ಮನೆ ಇರುತ್ತದೆ. ಫಿರ್ಯಾದಿದಾರರ ಅಕ್ಕ ಚೆಲುವಿಗೆ 15 ವರ್ಷದ ಹಿಂದೆ ಮಂಚಿಯ ಸಿಗ್ಗಮ ಎಂಬಲ್ಲಿಯ ಸುಬ್ರಹ್ಮಣ್ಯ ಎಂಬವರೊಂದಿಗೆ ಮದುವೆ ಮಾಡಿಸಿದ್ದು, ಮದುವೆಯ ಸಮಯದಲ್ಲಿ ಚೆಲುವಿ ಮಣಿಪಾಲದ ಎಣ್ಣೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಆಗ ಅಲ್ಲಿ ಕೆಲಸ ಮಾಡುವ ರಶೀದು ಎಂಬವನ ಪರಿಚಯವಾಗಿರುತ್ತದೆ. ನಂತರ ಸುಬ್ರಹ್ಮಣ್ಯ ಮತ್ತು ಚೆಲುವಿ ಇಬ್ಬರ ಮದ್ಯೆ ಮನಸ್ತಾಪ ಉಂಟಾಗಿ ಚೆಲುವಿ ಗಂಡ ಸುಬ್ರಹ್ಮಣ್ಯನನ್ನು ಬಿಟ್ಟು ರಶೀದುನೊಂದಿಗೆ ಮುಂಬಾಯಿಗೆ ಹೋಗಿ ಅಲ್ಲಿ ಸುಮಾರು 2 ವರ್ಷ ಇದ್ದು, ನಂತರ ಕಾರ್ಕಳಕ್ಕೆ ಬಂದು ಅಲ್ಲಿ ಬಾಡಿಗೆ ಮನೆಯಲ್ಲಿ ರಶೀದುನೊಂದಿಗೆ ಇದ್ದು, ಆ ಸಮಯ ಆಕೆಗೆ ಪ್ರೀತಮ್ ಮತ್ತು ಪ್ರಿಯಾ ಎಂಬ ಇಬ್ಬರು ಮಕ್ಕಳಾಗಿದ್ದು, ನಂತರ ಚೆಲುವಿ ಹಾಗೂ ರಶೀದ್ ರವರಲ್ಲಿ ಗಲಾಟೆಯಾಗಿ ಚೆಲುವಿ ತನ್ನ ಮಕ್ಕಳೊಂದಿಗೆ ತಾಯಿ ಮನೆಯಾದ ಆತ್ರಾಡಿ ಮದಗಕ್ಕೆ ವಾಪಾಸ್ಸು ಬಂದಿರುತ್ತಾಳೆ. ಆ ನಂತರ ಕೂಡ ರಶೀದು ಮನೆಗೆ ಬಂದು ಹೋಗಿರುತ್ತಾನೆ. ನಂತರ ಚೆಲುವಿ ತಾಯಿ ಮನೆಯ ಪಕ್ಕದಲ್ಲಿ ಶೆಡ್ ಮಾಡಿಕೊಂಡು ತನ್ನ ಮಕ್ಕಳೊಂದಿಗೆ ವಾಸವಾಗಿದ್ದಳು. ಫಿರ್ಯಾದಿದಾರರ ತಾಯಿ ತನ್ನ ಎರಡನೇ ಮಗಳ ಕಾರ್ಯದ ಬಗ್ಗೆ ಹೋಗಿದ್ದು, ಚೆಲುವಿಯ ಮಗನಾದ ಪ್ರೀತಮ್ ನನ್ನ ಇನ್ನೊಂದು ಅಕ್ಕನ ಮಗನಾದ ಶಿವನೊಂದಿಗೆ ಭದ್ರವತಿಗೆ ಹೋಗಿರುತ್ತಾನೆ. ಮನೆಯಲ್ಲಿ ಚೆಲುವಿ ಮತ್ತು ಆಕೆಯ ಮಗಳಾದ ಪ್ರಿಯಾ ಮಾತ್ರ ಇದ್ದರು. ದಿನಾಂಕ: 08/05/2022 ರಂದು ಬೆಳಿಗ್ಗೆ ಸಮಯ ಚೆಲುವಿಯ ಮಗಳು ಫಿರ್ಯಾದಿದಾರರ ಮನೆಗೆ ಬಂದು ಸಂಜೆ 5 ಗಂಟೆಗೆ ವಾಪಾಸ್ಸು ಮನೆಗೆ ಹೋಗಿರುತ್ತಾಳೆ. ಈ ದಿನ ದಿನಾಂಕ: 09/05/2022 ರಂದು ಬೆಳಿಗ್ಗೆ ಫಿರ್ಯಾದಿದಾರರ ತಾಯಿ ಮುನಿಯಮ್ಮ ಫಿರ್ಯಾದಿದಾರರಿಗೆ ಫೋನ್ ಮಾಡಿ ಚೆಲುವಿಯ ಫೋನ್ ಸ್ವಿಚ್ ಆಪ್ ಬರುತ್ತಿದೆ. ಮಗನನ್ನು ಕಳುಹಿಸಿ ನೋಡಿ ಬರುವಂತೆ ತಿಳಿಸಿದ್ದು, ಅದಕ್ಕೆ ಫಿರ್ಯಾದಿದಾರರು ಆಕೆಯ ಮಗನನ್ನು ಚೆಲುವಿ ಮನೆಗೆ ಕಳುಹಿಸಿದ್ದು. ಫಿರ್ಯಾದಿದಾರರ ಮಗ ವಾಪಾಸ್ಸು ಬಂದು ಅವರು ಮಲಗಿದ್ದು, ಎದ್ದಿರುವುದಿಲ್ಲ ಎಂದು ತಿಳಿಸಿದ್ದು, ಫಿರ್ಯಾದಿದಾರರು ಬೆಳಿಗ್ಗೆ 10:00 ಗಂಟೆಗೆ ಚೆಲುವಿಯ ಮನೆಗೆ ಆಕೆಯ ಅತ್ತೆ ಶಾಂತಿಯವರೊಂದಿಗೆ ಹೋಗಿ ನೋಡಿದಾಗ ಮನೆಯ ಬಾಗಿಲು ತೆರೆದಿದ್ದು, ಕರೆದಾಗ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದು, ಒಳಗೆ ಹೋಗಿ ನೋಡಿದಾಗ ಚೆಲುವಿ ಹಾಗೂ ಪ್ರಿಯಾ ಹಾಲ್ ನಲ್ಲಿ ಅಕ್ಕಪಕ್ಕ ಮಲಗಿದ್ದು, ಎಬ್ಬಿಸಿದರೂ ಏಳದೇ ಇರುವುದನ್ನು ಕಂಡು ಅವರ ಹತ್ತಿರ ಹೋಗಿ ಪ್ರಿಯಾಳನ್ನು ನೋಡಿದಾಗ ಪ್ರಿಯಾಳ ಕುತ್ತಿಗೆಯಲ್ಲಿ ಕಪ್ಪು ಬಣ್ಣದ ಮಾರ್ಕ್ ಇದ್ದು, ಚೆಲುವಿ ಯ ಮೂಗು ಹಾಗೂ ಬಾಯಿಯ ಬಳಿ ರಕ್ತ ಸೋರುತ್ತಿರುವುದು ಕಂಡು ಬಂದಿರುತ್ತದೆ. ಕೂಡಲೇ ಮನೆಯ ಹತ್ತಿರ ಇರುವ ಆರೋಗ್ಯ ಕೇಂದ್ರದ ನರ್ಸ್ ಶ್ವೇತಾರವರನ್ನು ಕರೆದುಕೊಂಡು ಬಂದು ತೋರಿಸಿದ್ದು, ಅವರು ಪರಿಶೀಲಿಸಿ ಚೆಲುವಿ ಹಾಗೂ ಪ್ರಿಯಾ ಮೃತಪಟ್ಟಿರುವುದಾಗಿ ತಿಳಿಸಿರುತ್ತಾಳೆ. ಚೆಲುವಿ ಹಾಗೂ ಆಕೆಯ ಮಗಳು ಪ್ರಿಯಾ ಇಬ್ಬರ ಕುತ್ತಿಗೆಯಲ್ಲಿ ಇರುವ ಗಾಯಗಳನ್ನು ನೋಡಿದಾಗ ಯಾರೋ ದುಷ್ಕರ್ಮಿಗಳು ದಿನಾಂಕ: 08/05/2022 ರಂದು ಸಂಜೆ 5;00 ಗಂಟೆಯಿಂದ ದಿನಾಂಕ: 09/05/2022 ರ ಬೆಳಿಗ್ಗೆ 9:00 ಗಂಟೆಯ ಮದ್ಯಾವಧೀಯಲ್ಲಿ ಯಾವುದೋ ಉದ್ದೇಶಕ್ಕೆ ಕತ್ತು ಹಿಸುಕಿ ಕೊಲೆ ಮಾಡಿರುವುದು ಕಂಡು ಬರುತ್ತಿದ್ದು, ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 25/2022 ಕಲಂ:449 302 392 201 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಕೈಗೊಂಡ ಅಂದಿನ ಬ್ರಹ್ಮಾವರದ ಪೊಲೀಸ್ ವೃತ್ತ ನಿರೀಕ್ಷಕರಾದ ಅನಂತಪದ್ಮನಾಭ ಇವರು ಪ್ರಕರಣದ ಆರೋಪಿತನಾದ ಹರೀಶ್ ಆರ್ @ಗಣೇಶ್(30) ತಂದೆ: ಜಯರಾಮ @ರಾಮು ವಾಸ: ಕುರುಬರ ಬೀದಿ ಜನ್ನಾಪುರ ಭದ್ರಾವತಿ ತಾಲ್ಲೂಕು ಶಿವಮೊಗ್ಗ ಜಿಲ್ಲೆ ಎಂಬಾತನನ್ನು ದಸ್ತಗಿರಿ ಮಾಡಿ, ಆತನ ವಿರುದ್ಧ ಮಾನ್ಯ ನ್ಯಾಯಲಯಕ್ಕೆ ಆರೋಪಣ ಪಟ್ಟಿಯನ್ನು ಸಲ್ಲಿಸಿರುತ್ತಾರೆ.
ಈ ಪ್ರಕರಣದಲ್ಲಿ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ (ಎಸ್ಸಿ ನಂಬ್ರ 47/2022) ಯ ನ್ಯಾಯಾಧೀಶರು, ದಿನಾಂಕ 26/03/2026 ರಂದು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ರೂಪಾಯಿ 20,000/- ದಂಡ ವಿಧಿಸಿರುತ್ತದೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now