ಅಲೆವೂರು : ಕಾಲುಬಾಯಿ ರೋಗ ನಿವಾರಣಾ ಲಸಿಕ ಕಾರ್ಯಕ್ರಮದ ಅಭಿಯಾನ

ಅಲೆವೂರು : ಕಾಲುಬಾಯಿ ರೋಗ ನಿವಾರಣಾ ಲಸಿಕ ಕಾರ್ಯಕ್ರಮದ ಅಭಿಯಾನ

0Shares

ಉಡುಪಿ : ಅಲೆವೂರು ಹಾಲು ಉತ್ಪಾದಕರ ಸಹಕಾರ ಸಂಘ ಪಶುಪಾಲನಾ ಇಲಾಖೆ ಮತ್ತು ದ .ಕ ಹಾಲು ಒಕ್ಕೂಟ ನಿಯಮಿತ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜರಗಿದ ಜಿಲ್ಲಾ ಮಟ್ಟದ ಕಾಲು ಬಾಯಿ ರೋಗ ನಿವಾರಣಾ ಲಸಿಕಾ ಕಾರ್ಯಕ್ರಮದ ಅಭಿಯಾನ ಅಲೆವೂರು ಕರ್ವಾಲಿನ ಸಂಜೀವಿ ನಾಯ್ಕ್ ಅವರ ಮನೆ ವಠಾರದಲ್ಲಿ ಜರಗಿತು. ಅಲೆವೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಅಲೆವೂರು ಹರೀಶ್ ಕಿಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಅಭಿಯಾನವನ್ನು ದ.ಕ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಅವರು ಉದ್ಘಾಟಿಸಿದರು. ಡಾ. ಪ್ರಶಾಂತ್, ಡಾ. ಅರುಣ್ ಕೋರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ ಕಾರ್ಯನಿರ್ವಹಣಾಧಿಕಾರಿ ವಿಜಯಲಕ್ಷ್ಮಿ, ಮರ್ಣೆ -ಕನರಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕರುಣಾಕರ್ ಕರ್ಕೇರ, ಅಲೆವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾದ ಉಮೇಶ್ ಕಾಮತ್, ಸತೀಶ್ ಪೂಜಾರಿ, ಸ್ವಾತಿ ಪ್ರಭು, ಸುನಂದಾ ಶಂಕರ್ ಕೃಷ್ಣ ಅಸ್ಕೇಕಾರ್, ವಿದ್ಯಾ ದೇವೇಂದ್ರ ನಾಯ್ಕ್ ಉಪಸ್ಥಿತರಿದ್ದರು. ಡಾ. ಸಂದೀಪ್ ಸ್ವಾಗತಿಸಿದರೆ, ರಜನೀಶ್ ನಾಯಕ್ ವಂದಿಸಿದರು. ಇದೇ ಸಂದರ್ಭದಲ್ಲಿ ದ.ಕ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಅಲೆವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯಕ್ರಮಕ್ಕೆ ಆಗಮಿಸಿದ ಕೊಡವೂರು ರವಿರಾಜ್ ಹೆಗ್ಡೆ ಅವರನ್ನು ಹಾಲು ಉತ್ಪಾದಕರ ಪರವಾಗಿ ಸನ್ಮಾನಿಸಲಾಯಿತು.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now