ಅಲಯನ್ಸ್ ಕ್ಲಬ್ ಜಿಲ್ಲೆ 275 S ಇದರ ಕ್ಯಾಬಿನೆಟ್ ಸೆಕ್ರೆಟರಿಯಾಗಿ ಕಬ್ಬಿನಾಲೆ ರಾಮಚಂದ್ರ ಭಟ್.

ಅಲಯನ್ಸ್ ಕ್ಲಬ್ ಜಿಲ್ಲೆ 275 S ಇದರ ಕ್ಯಾಬಿನೆಟ್ ಸೆಕ್ರೆಟರಿಯಾಗಿ ಕಬ್ಬಿನಾಲೆ ರಾಮಚಂದ್ರ ಭಟ್.

0Shares

ಹೆಬ್ರಿ : ಅಲಯನ್ಸ್ ಜಿಲ್ಲೆ 275 S ಇದರ 2026-27 ನೇ ಸಾಲಿನ ಜಿಲ್ಲಾ ಗವರ್ನರ್ ಆದ ಅಲೈ ಸುನಿಲ್ ಕುಮಾರ್ ಶೆಟ್ಟಿ ಇವರ ಜಿಲ್ಲಾ ಸಂಪುಟದಲ್ಲಿ ಕ್ಯಾಬಿನೆಟ್ ಸೆಕ್ರೆಟರಿಯಾಗಿ ಅಲೈ ಕಬ್ಬಿನಾಲೆ ರಾಮಚಂದ್ರ ಭಟ್ ಇವರು ಆಯ್ಕೆಯಾಗಿದ್ದಾರೆ.
ರಾಮಚಂದ್ರ ಭಟ್ ಇವರು ಹೆಬ್ರಿ ಲಯನ್ಸ್ ಕ್ಲಬ್ ನ ಪದಾಧಿಕಾರಿಯಾಗಿ, ಲಯನ್ಸ್ ಜಿಲ್ಲಾ ವಲಯ ಕಾರ್ಯದರ್ಶಿಯಾಗಿ, GST ಕೋಆರ್ಡಿನೇಟರ್ ಆಗಿ, ಜಿಲ್ಲೆ ಹಾಗೂ ಮಲ್ಟಿಪಲ್ level ಗಳಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದ ಇವರು, ಸುಮಾರು 13 ವರ್ಷಗಳಿಂದ ಹೆಬ್ರಿಯಲ್ಲಿ ತಮ್ಮದೇ ಆದ ಮೈಸ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
ಸದಾ ಸಾರ್ವಜನಿಕ ಸೇವೆಯಲ್ಲೇ ನಿರತರಾಗಿರುವ ಇವರು ಕಂಪ್ಯೂಟರ್ ಟ್ರೈನಿಂಗ್ ಅಸೋಸಿಯೇಷನ್ ನ ರಾಜ್ಯ ಉಪಾಧ್ಯಕ್ಷರಾಗಿ, ಕಬ್ಬಿನಾಲೆ ಮೇಲ್ಮಠ ಗಣೇಶೋತ್ಸವ ಸಮಿತಿ ಸದಸ್ಯರಾಗಿ, ಮುನಿಯಾಲು ಮಾತಿಬೆಟ್ಟು ಯುವಕ ಮಂಡಲದ ಅಧ್ಯಕ್ಷರಾಗಿ, ಅಲಯನ್ಸ್ ಕ್ಲಬ್ ಹೆಬ್ರಿ ಇದರ ಸ್ಥಾಪಕ ಅಧ್ಯಕ್ಷರಾಗಿ ಹತ್ತು ಹಲವಾರು ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ನಡೆಸಿರುತ್ತಾರೆ. ಅಲ್ಲದೆ ಸ್ಥಳೀಯ ದೇವಾಲಯಗಳಲ್ಲಿ ಬ್ರಹ್ಮವಾಹಕರಾಗಿಯೂ ಧಾರ್ಮಿಕ ಸೇವೆ ಸಲ್ಲಿಸಿರುತ್ತಾರೆ.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now