ತಲೆಮರೆಸಿಕೊಂಡಿದ್ದ 56 ವರ್ಷದ ವ್ಯಕ್ತಿ ಬಂಧನ: 10 ಪ್ರಕರಣಗಳಲ್ಲಿ ಆರೋಪಿ ವಿಘ್ನೇಶ್ವರ ಐತಾಳ್

ತಲೆಮರೆಸಿಕೊಂಡಿದ್ದ 56 ವರ್ಷದ ವ್ಯಕ್ತಿ ಬಂಧನ: 10 ಪ್ರಕರಣಗಳಲ್ಲಿ ಆರೋಪಿ ವಿಘ್ನೇಶ್ವರ ಐತಾಳ್

0Shares

ಉಡುಪಿ ನಗರ ಠಾಣಾ ಪ್ರಕರಣಗಳಾದ 1) 227/2011 ಕಲಂ 420 ಐಪಿಸಿ , 2) 232/2011 ಕಲಂ 420 ಐಪಿಸಿ, 3) 215/2011 ಕಲಂ 420 ಐಪಿಸಿ 4) 213/2011 ಕಲಂ 420 ಐಪಿಸಿ, 5) 233/20 11 ಕಲಂ 420 ಐಪಿಸಿ 6) 220/2011 ಕಲಂ 420 ಐಪಿಸಿ 7) 217/2011 ಕಲಂ 420 ಐಪಿಸಿ 8) 216/2011 ಕಲಂ 420 ಐಪಿಸಿ 9) 218/2011 ಕಲಂ 420 ಐಪಿಸಿ (ಎಲ್ ಪಿಸಿ) ಮತ್ತು 10) 228/2011 ಕಲಂ 420 ಐಪಿಸಿ (ಎಲ್ ಪಿಸಿ) ಪ್ರಕರಣಗಳಲ್ಲಿನ ಆರೋಪಿ ವಿಘ್ನೇಶ್ವರ ಐತಾಳ್, ಪ್ರಾಯ : 56 ವರ್ಷ, ವಾಸ: ಮನೆ ನಂಬ್ರ 1-102 ಶ್ರೀ ಅಣ್ಣ ಹರಂತುಬೆಟ್ಟು, ಕೊರವಾಡಿ ರಸ್ತೆ, ಕುಂಭಾಶಿ, ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಹಾಲಿ ವಾಸ: ಚಂದ್ರಶೇಖರ್ ರವರ ಬಾಡಿಗೆ ಮನೆ ಶನೀಶ್ವರ ದೇವಸ್ಥಾನ ಕಂಪೌಂಡ್ ಆರ್ ಕೆ ಮಠ ಲೇಔಟ್ ಗವಿಪುರ ಪುಟ್ಟಹಳ್ಳಿ ಬೆಂಗಳೂರು ಎಂಬಾತನು ಪ್ರಕರಣ ದಾಖಲಾದ ಬಳಿಕ ಅಂದರೆ 2011 ರಿಂದ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಈ ಮೇಲಿನ ಎಲ್ಲಾ ಪ್ರಕರಣಗಳಲ್ಲಿ ದೋಷರೋಪಣಾ ಪತ್ರ ತಯಾರಿಸಿ ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಲಾಗಿತ್ತು.

ಆರೋಪಿ ವಿಘ್ನೇಶ್ವರ ಐತಾಳ್, ಈತನು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದವನಿಗೆ ಸುಮಾರು 10 ಕ್ಕಿಂತಲೂ ಹೆಚ್ಚು ಬಾರಿ ವಾರೆಂಟ್ ಹೊರಡಿಸಿದ್ದು, ಮಾನ್ಯ ನ್ಯಾಯಾಲಯವು ಆತನ ವಿರುದ್ಧ ತಲೆ ಮರೆಸಿಕೊಂಡ ಆರೋಪಿ ಎಂದು ಘೋಷಿಸಿರುತ್ತದೆ.

ಸದರಿ ಪ್ರಕರಣದ ಆರೋಪಿ ವಿಘ್ನೇಶ್ವರ ಐತಾಳ್, ಈತನನ್ನು ಉಡುಪಿ ನಗರ ಪೊಲೀಸ್ ಠಾಣಾ ಪ್ರಭಾರ ನಿರೀಕ್ಷಕರಾದ ಮಹೇಶ ಪ್ರಸಾದ್ ರವರ ಮಾರ್ಗದರ್ಶನದಲ್ಲಿ , ಉಡುಪಿ ನಗರ ಠಾಣಾ ಪಿಎಸ್ ಐ ಭರತೇಶ ಕಂಕಣವಾಡಿ, ಹೆಚ್ ಸಿ ಪ್ರಸನ್ನ.ಸಿ. ಹೆಚ್ ಸಿ ರಮೇಶ, ಪಿಸಿ ಆನಂದ ರವರ ತಂಡ ದಿನಾಂಕ: 05.03.2026 ರಂದು ಬೆಂಗಳೂರಿನ ತಲಘಟ್ಟಪುರದಲ್ಲಿ ಪತ್ತೆ ಹಚ್ಚಿ, ವಶಕ್ಕೆ ಪಡೆದುಕೊಂಡು ದಿನಾಂಕ:06.03.2026 ರಂದು ವಾರೆಂಟ್‌ನೊಂದಿಗೆ ಮಾನ್ಯ ನ್ಯಾಯಲಯದ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now