ಮಣಿಪಾಲದಲ್ಲಿ ನಿರ್ವಹಣಾ ಕಾಮಗಾರಿ: ಹಲವೆಡೆ ವಿದ್ಯುತ್ ವ್ಯತ್ಯಯ

ಮಣಿಪಾಲದಲ್ಲಿ ನಿರ್ವಹಣಾ ಕಾಮಗಾರಿ: ಹಲವೆಡೆ ವಿದ್ಯುತ್ ವ್ಯತ್ಯಯ

0Shares

ದಿನಾಂಕ 26.02.2026 ರಂದು 110/33/11ಕೆವಿ ವಿದ್ಯುತ್ ಸ್ಥಾವರ ಮಣಿಪಾಲದಲ್ಲಿ 20 ಎಂ.ವಿ.ಎ ಪರಿವರ್ತಕ-4 ರಲ್ಲಿ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2.00 ಘಂಟೆಯವರೆಗೆ 33/11ಕೆವಿ ಶಿರ್ವ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಬಂಟಕಲ್ಲು, ಶಂಕರಪುರ, ಶಿರ್ವ ಹಾಗೂ ಮುದರಂಗಡಿ, ಕಾಪು, ಕಳತ್ತೂರು, ಕುರ್ಕಾಲು, ಮಟ್ಟಾರು ಫೀಡರ್ ಮಾರ್ಗದ ಪಾಂಗಳ, ಮೂಡಬೆಟ್ಟು, ಬಂಟಕಲ್ಲು, ಶಂಕರಪುರ, ಕುಂಜಾರುಗಿರಿ, ಸಾಲ್ಮರ, ಕುರ್ಕಾಲು, ಪಾಜೈ, ಇನ್ನಂಜೆ, ಪಡುಬೆಳ್ಳೆ, ಶಿರ್ವ, ಮಟ್ಟಾರು, ಪದವು ಪಂಜಿಮಾರು, ಪಿಲಾರುಖಾನ, ಪೆರ್ನಾಲು, ಕುತ್ಯಾರು, ಪುಂಚಲಕಾಡು, ಕಳತ್ತೂರು, ಚಂದ್ರನಗರ, ಕಲ್ಯ ಪದವು, ಅಬ್ಬೆಟ್ಟು, ಹೇರೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.
ಗ್ರಾಹಕರು ಇದನ್ನು ಗಮನಿಸಿ ಮ.ವಿ.ಸ.ಕಂ.ನೊಂದಿಗೆ ಸಹಕರಿಸುವಂತೆ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಕಾರ್ಯ ಮತ್ತು ಪಾಲನೆ ವಿಭಾಗ, ಮ.ವಿ.ಸ.ಕಂ., ಉಡುಪಿ ಅವರು ಪ್ರಕಟಣೆ ಹೊರಡಿಸಿದ್ದಾರೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now