ವಿಶ್ವಶಾಂತಿ ದಿನ ಮತ್ತು ಯುವಜನೋತ್ಸವ

ವಿಶ್ವಶಾಂತಿ ದಿನ ಮತ್ತು ಯುವಜನೋತ್ಸವ

0Shares

ಉಡುಪಿ, ಸೆಪ್ಟೆಂಬರ್ 23: ರೆಡ್ ಕ್ರಾಸ್, ಮಂಗಳೂರು ವಿವಿ, ಯುವ ರೆಡ್ ಕ್ರಾಸ್ ಘಟಕ, ಕ್ರೀಡಾ ಇಲಾಖೆ, ಯುವ ಸಬಲೀಕರಣ, ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್ ಮತ್ತು ಲಯನ್ಸ್ ಕ್ಲಬ್ ಉಡುಪಿ ಆಶ್ರಯದಲ್ಲಿ ಅಂತರಾಷ್ಟ್ರೀಯ ವಿಶ್ವ ಶಾಂತಿ ದಿನದ ಅಂಗವಾಗಿ ವಿಶ್ವಶಾಂತಿಗಾಗಿ ಮಾನವೀಯತೆಯ ಜಾಥಾ 21 ಸೆಪ್ಟೆಂಬರ್ 2024 ರಂದು ನಡೆಯಿತು. ಜಾಥಾವು ಸಂತೆಕಟ್ಟೆ ಬಸ್ ನಿಲ್ದಾಣದಿಂದ ಹೊರಟು ಅಂಬಾಗಿಲು ಮೂಲಕ ಅಮೃತ್ ಗಾರ್ಡನ್ ನಲ್ಲಿ ಸಮಾವೇಶ ಗೊಂಡಿತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಆಡಳಿತ ಮಂಡಳಿ ಸದಸ್ಯ ವಿಜಿ ಶೆಟ್ಟಿ ಜಾಥಾಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ, ಜಿ. ಪಂ ಸಿ ಇ ಓ ಪ್ರತೀಕ್ ಬಾಯಲ್ ಅವರು ಸಂದೇಶ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಡಾ. ಕೆ. ವಿದ್ಯಾ ಕುಮಾರಿ ಅವರು ವಹಿಸಿದರು.

ಯುವ ಜನತೆ ಅನಗತ್ಯ ವಿಚಾರಗಳಲ್ಲಿ ಸಮಯ ವ್ಯರ್ಥ ಮಾಡದೇ, ಶೈಕ್ಷಣಿಕ ಬೆಳವಣಿಗೆಯ ಕಡೆ ಗಮನಹರಿಸುವ ಮೂಲಕ ತಮ್ಮ ಬದುಕು ರೂಪಿಸಲು ಈಗಿನಿಂದಲೇ ದೃಢ ನಿರ್ಧಾರ ಕೈಗೊಂಡು ಉತ್ತಮ ಭವಿಷ್ಯದ ನಿರ್ಮಾಣದತ್ತ ಹೆಜ್ಜೆ ಹಾಕಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಅವರು ಕಿವಿಮಾತು ಹೇಳಿದರು.

ಯುವ ಜನೋತ್ಸವವು ರಾಷ್ಟ್ರೀಯ ಏಕೀಕರಣದ ಪರಿಕಲ್ಪನೆ, ಕೋಮು ಸೌಹಾರ್ದತೆ ಮನೋಭಾವ, ಸಹೋದರತ್ವ ಧೈರ್ಯ ಮತ್ತು ಸಾಹಸ ಪ್ರದರ್ಶಿಸುವ ವೇದಿಕೆ. ಇದನ್ನು ಯುವಜನರು ಸಮರ್ಪಕ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿ.ಪಂ. ಸಿಇಒ ಪ್ರತೀಕ್ ಬಾಯಲ್ ಮಾತನಾಡಿದರು.

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ ರೋಷನ್ ಕುಮಾರ್ ಶೆಟ್ಟಿ ಸ್ವಾಗತಿಸಿ ವಂದಿಸಿ ನಿರೂಪಿಸಿದರು.

Video:

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now