
ವಿಟ್ಲ: ಜನಪ್ರಿಯ ಫೌಂಡೇಶನ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಾಸನ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮಂಗಳೂರಿನಲ್ಲಿರುವ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಯು ಈಗಾಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಉತ್ತಮ ಆರೋಗ್ಯ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಇದೀಗ ವಿಟ್ಲದಲ್ಲಿ ಮೊಟ್ಟ ಮೊದಲ ಬಾರಿಗೆ ಜನಪ್ರಿಯ ಹೆಲ್ತ್ ಸೆಂಟರ್ ವಿಟ್ಲದ ಬೊಬ್ಬೆಕೇರಿಯಲ್ಲಿ ಆಗಸ್ಟ್ 24ರ ಭಾನುವಾರ ಉದ್ಘಾಟನೆಗೊಳ್ಳಲಿದೆ ಎಂದು ಮಂಗಳೂರು ಜನಪ್ರಿಯ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯ ಸಿಇಓ ಡಾ.
ಕಿರಾಶ್ ಪರ್ತಿಪ್ಪಾಡಿ ತಿಳಿಸಿದರು.
ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೂಲತಃ ವಿಟ್ಲ ಕಂಬಳಬೆಟ್ಟು ನಿವಾಸಿ ಬದ್ರಿಯಾ ಮನೆತನದ ಡಾ. ವಿ.ಕೆ ಅಬ್ದುಲ್ ಬಶೀರ್ ಅವರ ನೇತೃತ್ವದಲ್ಲಿ 2014 ರಲ್ಲಿ ಹಾಸನದಲ್ಲಿ ಆರಂಭಗೊಂಡ ಆಸ್ಪತ್ರೆಯು 12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಈ ಆಸ್ಪತ್ರೆಯ ಮೂಲಕ ಅದೆಷ್ಟೋ ಬಡ ರೋಗಿಗಳ ಜೀವನವನ್ನು ಹಸನಾಗಿಸಿದೆ.
ಇಲ್ಲಿ ಸಂಪೂರ್ಣವಾಗಿ ಬೇರ್ಪಟ್ಟ ಕೈ ಕಾಲುಗಳ ಜೋಡಣೆಯನ್ನು ಯಶಸ್ವಿಯಾಗಿ ನಡೆಸಿದ ಹಿರಿಮೆ ನಮ್ಮ ಆಸ್ಪತ್ರೆಗಿದೆ.
ಈಗಾಗಲೇ ಒಂದು ವರ್ಷದ ಹಿಂದೆ ಮಂಗಳೂರಿನ ಪಡೀಲ್ ನಲ್ಲಿ ಖ್ಯಾತ ವೈದ್ಯರನ್ನೊಳಗೊಂಡ ಅಸ್ಪತ್ರೆಯು ಕಾರ್ಯನಿರ್ವಹಿಸುತ್ತಿದೆ. ವೈದ್ಯಕೀಯ ಸೇವೆಯ ಜೊತೆಗೆ ಜನಪ್ರಿಯ ಫೌಂಡೇಶನ್ ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ 2021 ರಿಂದ ವಿಟ್ಲದ ಕಂಬಳಬೆಟ್ಟುವಿನಲ್ಲಿ ಜನಪ್ರಿಯ ಸೆಂಟ್ರಲ್ ಸ್ಕೂಲ್ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಗ್ರಾಮೀಣ ಭಾಗದ ಜನತೆಗೆ ಇನ್ನಷ್ಟು ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ವಿಟ್ಲದ ಬೊಬ್ಬೆಕೇರಿ ಪಾಣೆಮಜಲು ಎಂಬಲ್ಲಿರುವ ಹರಿಹರ ಕಾಂಪ್ಲೆಕ್ಸ್ ನಲ್ಲಿ ಸುಸಜ್ಜಿತ ಹಾಗೂ ನುರಿತ ವೈದ್ಯರನ್ನೊಳಗೊಂಡ ಜನಪ್ರಿಯ ಹೆಲ್ತ್ ಸೆಂಟರ್ ಇದರ ಲೋಕಾರ್ಪಣ ಕಾರ್ಯಕ್ರಮವು ನಡೆಯಲಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now