ಉಪ್ಪೂರು ಬೀದಿ ನಾಯಿ ಶೆಲ್ಟರ್ ನಿರ್ಮಾಣದ ವಿರುದ್ಧ ಮೂರು ಗ್ರಾಮದ ಗ್ರಾಮಸ್ಥರಿಂದ ಪ್ರತಿಭಟನೆಗೆ ಕರೆ.

ಉಪ್ಪೂರು ಬೀದಿ ನಾಯಿ ಶೆಲ್ಟರ್ ನಿರ್ಮಾಣದ ವಿರುದ್ಧ ಮೂರು ಗ್ರಾಮದ ಗ್ರಾಮಸ್ಥರಿಂದ ಪ್ರತಿಭಟನೆಗೆ ಕರೆ.

0Shares

*ಉಪ್ಪೂರು ಬೀದಿ ನಾಯಿ ಶೆಲ್ಟರ್ ನಿರ್ಮಾಣದ ವಿರುದ್ಧ ಹೋರಾಟಕ್ಕೆ ಸಜ್ಜಾದ ಉಪ್ಪೂರು, ಹಾವಂಜೆ ಮತ್ತು ಆರೂರು ಗ್ರಾಮಸ್ಥರ ಬೃಹತ್ ಪ್ರತಿಭಟನೆಗಾಗಿ ಪೂರ್ವಭಾವಿ ಸಭೆಯು ಜರುಗಿತು.
ಉಪ್ಪೂರು ಗ್ರಾಮದ
ಬಹುದೊಡ್ಡ ಸಂಕಷ್ಟವೊಂದು ಬೀದಿ ನಾಯಿಗಳ ಶೆಲ್ಟರ್ ರೂಪದಲ್ಲಿ ಗ್ರಾಮದ ಮುಂದೆ ನಿರ್ಮಾಣವಾಗಲಿದ್ದು *ಸರಕಾರಿ ಮೆಡಿಕಲ್ ಕಾಲೇಜು, ತಾಲ್ಲೂಕು ಕ್ರೀಡಾಂಗಣ, ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಸತಿ ರಹಿತರಿಗೆ ನಿವೇಶನ ವ್ಯವಸ್ಥೆ* ಸೇರಿದಂತೆ ಯಾವುದೇ ಜನೋಪಯೋಗಿ ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿರುವ, ಉಡುಪಿ ಜಿಲ್ಲಾ ಕೇಂದ್ರಕ್ಕೆ ಹಾಗೂ ಬ್ರಹ್ಮಾವರ ತಾಲ್ಲೂಕು ಕೇಂದ್ರಕ್ಕೆ ಅತಿ ಸನಿಹದಲ್ಲಿದ್ದು ಸುತ್ತಮುತ್ತ ಜನವಸತಿ ಇರುವ ಸುಮಾರು 9 ಎಕರೆ ಪ್ರದೇಶದಲ್ಲಿ ಬೀದಿ ನಾಯಿಗಳ ಶೆಲ್ಟರ್ ನಿರ್ಮಿಸುವ ವಿವೇಚನಾರಹಿತ ನಿರ್ಧಾರದ ವಿರುದ್ಧ ಹಲವು ರೀತಿಯ ಹೋರಾಟದ ತೀರ್ಮಾನ ಕೈಗೊಳ್ಳಲಾಯಿತು. ಅರ್ಥವಿಲ್ಲದ ಬೀದಿನಾಯಿ ಶೆಲ್ಟರ್ ನಿರ್ಮಿಸಿ ಅಂದಾಜು 17,000 ದಿಂದ 18,000 ಬೀದಿ ನಾಯಿಗಳನ್ನು ತಂದು, ನೆಮ್ಮದಿಯಿಂದ ಬದುಕು ಸಾಗಿಸುತ್ತಿರುವ ಜನ ಸಮುದಾಯದ ನಡುವೆ ಬಿಡುವ ಮೂಲಕ ಈ ಭಾಗದಲ್ಲಿ ಜೀವಿಸುವ ಮನುಕುಲದ ಒಂದು ಪೀಳಿಗೆಯನ್ನೇ ನರಕದ ಕೂಪಕ್ಕೆ ತಳ್ಳುವ ಪ್ರಯತ್ನದ ಹಿಂದೆ ಬಹುದೊಡ್ಡ ಹುನ್ನಾರದ ಸ್ಪಷ್ಟ ಸುಳಿವು ದೊರಕಿರುವುದು ಉಪ್ಪೂರು, ಹಾವಂಜೆ ಮತ್ತು ಆರೂರು ಗ್ರಾಮದ ಜನರ ನಾಗರಿಕ ಪ್ರಜ್ಞೆಗೆ ಸವಾಲಾಗಿದೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದರು.
ಉಪ್ಪೂರು ಜನತೆಯ ಮೌನ ದೌರ್ಬಲ್ಯವಲ್ಲ ಎಂಬುದನ್ನು ಸಂಬಂಧಿಸಿದವರಿಗೆ ಅರ್ಥ ಮಾಡಿಸಬೇಕಾಗಿದೆ ಎಂದು ಹಲವಾರು ಗಣ್ಯರು ತಮ್ಮ ಮಾತಿನಲ್ಲಿ ತಿಳಿಸಿದರು. ಬೀದಿ ನಾಯಿಗಳ ಶೆಲ್ಟರ್ ನಿರ್ಮಾಣದಿಂದ ಉದ್ಬವವಾಗಬಹುದಾದ ಸಮಸ್ಯೆಗಳ ಅರಿವು ಇಲ್ಲಿನ ಪ್ರಜ್ಞಾವಂತರಿಗಿದೆ. ಈ ಕುರಿತಾಗಿ ಚರ್ಚಿಸಲು ಮತ್ತು ಒಮ್ಮತದ ಪ್ರತಿಭಟನಾ ನಿರ್ಣಯ ಕೈಗೊಳ್ಳುವ ಅವಶ್ಯಕತೆ ಬಂದೊದಗಿದೆ ಎಂದು ವಂದನೀಯ ಧರ್ಮ ಗುರುಗಳು ಸಭೆಯಲ್ಲಿ ತಿಳಿಸಿದರು.
ಉಡುಪಿ ಜಿಲ್ಲೆಯ ಅಂದಾಜು 18000 ಬೀದಿ ನಾಯಿಗಳನ್ನು ನಮ್ಮ ಉಪ್ಪೂರಿನ ಚಕ್ಕುಲಿ ಕಟ್ಟೆ ಹತ್ತಿರ 9.9 ಎಕರೆ ಜಾಗದಲ್ಲಿ ಆಶ್ರಯ ತಾಣವನ್ನು ಮಾಡುವುದೆಂದು ಜಾಗದ ಸರ್ವೆ ಆಗಿದ್ದು, ಮುಂದಿನ ದಿನಗಳಲ್ಲಿ ಈ ಆಶ್ರಯ ತಾಣ ಆಯಿತು ಎಂದಾದರೆ ಸುತ್ತಮುತ್ತಲಿನ ಜಾಗದವರಿಗೂ ಬೆಳ್ಮಾರಿನ ಎಲ್ಲಾ ಜನತೆಗೂ ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎಂದು ಬಾಧಕಗಳ ಪಟ್ಟಿಮಾಡಿ ಸಭೆಯಲ್ಲಿ ವಾಚಿಸಲಾಯಿತು.

  1. ಇದೇ ಸರ್ವೆ ನಂಬರಿನ ಸುತ್ತಮುತ್ತಲಿನ ಭಾಗಕ್ಕೆ ಸುಮಾರು 200 ಜನವಸತಿಯ ಮನೆಗಳಿಗೆ ಹಕ್ಕುಪತ್ರ ಬಾಕಿ ಇದೆ.
    2, ಉಪ್ಪೂರು ಹಾವಂಜೆ ಆರೂರು ಈ ಮೂರು ಪಂಚಾಯಿತಿಗೆ ಒಂದು ಆಟದ ಮೈದಾನವೇ ಇಲ್ಲ ಇದಕ್ಕೆ ಯಾವುದೇ ಸರಕಾರ ಸ್ಥಳವನ್ನು ಮಂಜೂರು ಮಾಡಲಿಲ್ಲ . 3. ನಾಯಿ ಸಾಕಲು ಗುರುತು ಮಾಡಿದ ಸ್ಥಳದಿಂದ , ರಾಷ್ಟ್ರೀಯ ಹೆದ್ದಾರಿ ಕೇವಲ 3 ಕಿಲೋಮೀಟರ್ ಮಣಿಪಾಲ ಭಾಗಕ್ಕೆ ಕೇವಲ 5 ಕಿ.ಮೀ ಉಡುಪಿ ಹೃದಯ ಭಾಗಕ್ಕೆ ಕೇವಲ 10 ಕಿ.ಮೀ ದೂರದಲ್ಲಿರುವ ಸರಕಾರ ಜಾಗ ಇದೆ ಮುಂದಿನ ದಿನದಲ್ಲಿ ಒಳ್ಳೆಯ ಯೋಜನೆಯನ್ನು ಈ ಭಾಗದಲ್ಲಿ ತರಬಹುದು.
  2. ಮೂರು ಗ್ರಾಮದ ಈ ಸ್ಥಳಕ್ಕೆ ಸುತ್ತಲೂ ಆವರಿಸಿರುವ ಜಾಗ.
    5.ಈ ಜಾಗಕ್ಕೆ ಸುತ್ತಲೂ ಜನ ವಸತಿ ಇರುವ ಸ್ಥಳ ಆಗಿರುತ್ತದೆ. 6, ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ sc. St ಸಮುದಾಯದ ಇರುವ ವಾಸ್ತವ್ಯ ಜಾಗ ಇದಾಗಿರುತ್ತದೆ.
    7.ಉಪ್ಪೂರುಗ್ರಾಮದಲ್ಲಿ ಈಗಾಗಲೇ 10 ಎಕರೆ ಜಾಗಕ್ಕೆ ನಿವೇಶನವನ್ನು ಕಾದಿರಿಸಿದ ಜಾಗ. ,
  3. ನಾಯಿಗಳ ಚೀರಾಟದಿಂದ ಮನಶಾಂತಿ ಇರುವುದಿಲ್ಲ.
  4. ನಾಯಿಗಳ ಮಲಮೂತ್ರ ವಿಸರ್ಜನೆಯ ನೀರು ನಮ್ಮೂರಿನ ಬೆಳ್ಮಾರಿನ ತೋಡಿನಲ್ಲಿ ಹೋಗಿ ಹೊಳೆಗೆ ಸೇರುತ್ತದೆ ಇದರಿಂದ ಬೆಳ್ಮಾರಿನ ಜನರಿಗೆ ಅನಾರೋಗ್ಯ ತಪ್ಪಿದ್ದಲ್ಲ.
    1. ಬಾವಿಯ ನೀರು ಕಲುಷಿತವಾಗುತ್ತದೆ.
  5. ಚರ್ಮ ಕಾಯಿಲೆಯ ಭೀತಿ ಎದುರಾಗಬಹುದು.
  6. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತದೆ.
  7. ಇಡೀ ಜಿಲ್ಲೆಗೆ ಹಾಲು ಉತ್ಪಾದನೆ ಮಾಡುವ ನಂದಿನಿ ಹಾಲಿನ ಫ್ಯಾಕ್ಟರಿ ಕೇವಲ ಅರ್ಧ ಕಿಲೋಮೀಟರ್ ಅಷ್ಟು ದೂರ ಇರುವ ಸ್ಥಳ ಆಗಿರುತ್ತದೆ
    ಹಾಗೂ ಇನ್ನಿತರ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಕೋಪಗೊಂಡು ಕೂಡಲೇ 2,000ಕ್ಕೂ ಮಿಕ್ಕಿ ಪ್ರತಿಭಟನೆ ನಡೆಸುವುದೆಂದು ಈ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಮೂರು ಗ್ರಾಮಗಳ ಪಂಚಾಯತ್ ಪ್ರತಿನಿಧಿಗಳು, ಗ್ರಾಮದ ಸಮಾಜಸೇವಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪರಿಸರ ಪ್ರೇಮಿಗಳು, ಸಮಾನ ಮನಸ್ಕರಾದ ಹಿರಿಯರು ಹಿರಿಯರು ಯುವಕರು ಗರಿಷ್ಠ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now