ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ವಾರ್ಷಿಕ ಮಹಾಸಭೆ

ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ವಾರ್ಷಿಕ ಮಹಾಸಭೆ

0Shares

ವಾರ್ಷಿಕ ಮಹಾಸಭೆ : ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಸಂಘದ 2024/2025 ನೇ ವಾರ್ಷಿಕ ಮಹಾಸಭೆಯು ದಿನಾಂಕ 06-09-2025 ರಂದು “ಸೌಹಾರ್ಧ ಸಭಾಂಗಣ” ಕೊಳಲಾಗಿರಿ ಸಂಘದ ಅಧ್ಯಕ್ಷರಾದ ಎನ್. ರಮೇಶ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ಮಹಾಸಭೆ ಜರಗಿತು. ಮಹಾಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಸಂದೀಪ ಶೆಟ್ಟಿ ರವರು 2024/2025 ನೇ ಸಾಲಿನ ವರದಿ ಮಂಡಿಸಿದರು. ಸಂಘವು ವರದಿ ಸಾಲಿನಲ್ಲಿ 280 ಕೋಟಿ ವ್ಯವಹಾರ ನಡೆಸಿ, ಉತ್ತಮ ಪ್ರಗತಿ ಸಾಧಿಸಿದೆ. ಠೇವಣಾತಿಯು 86 ಕೋಟಿ 14 ಲಕ್ಷ ದಾಟಿದ್ದು, 64 ಕೋಟಿ 80 ಲಕ್ಷ ಸಾಲ ಹೊರ ಬಾಕಿ ಇರುತ್ತದೆ. ವರದಿ ಸಾಲಿನಲ್ಲಿ ಶೇಕಡಾ 96% ರಷ್ಟು ಸಾಲ ವಸೂಲಾಗಿದ್ದು ಶೇಕಡಾ 4% ರಷ್ಟು ಸುಸ್ತಿ ಸಾಲ ಬಾಕಿ ಇರುತ್ತದೆ. ವರದಿ ಸಾಲಿನಲ್ಲಿ 1 ಕೋಟಿ 3 ಲಕ್ಷ ಲಾಭ ಗಳಿಸಿದ್ದು, ಸತತವಾಗಿ 26 ವರ್ಷಗಳಿಂದ ‘ಎ” ಶ್ರೇಣಿಯಲ್ಲಿ ಮುಂದುವರಿಯುತ್ತಿದೆ. ಸುಮಾರು 32 ಕೋಟಿ ಹಣವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ವಿವಿಧ ರೀತಿಯ ಠೇವಣಾತಿ ರೂಪದಲ್ಲಿ ವಿನಿಯೋಗ ಮಾಡಿರುತ್ತೇವೆ ಎಂದು ವರದಿಯಲ್ಲಿ ವಿವರಿಸಿದರು. 2024/25 ನೇ ಸಾಲಿನ ವರದಿ ಮತ್ತು ಆರ್ಥಿಕ ತಃಖ್ತೆ, ಲಾಭ ವಿಂಗಡಣೆ, ಮುಂದಿನ ಸಾಲಿನ 2025/26 ರ ಬಜೆಟ್ ಮಂಜೂರಾತಿಗೆ ಅನುಮೋದನೆ ಪಡೆಯಲಾಯಿತು. ಅಧ್ಯಕ್ಷರ ಭಾಷಣದಲ್ಲಿ ಎನ್. ರಮೇಶ ಶೆಟ್ಟಿರವರು ಸಂಸ್ಥೆಗೆ ಸಾಧನೆಯ ನೆಲೆಯಲ್ಲಿ ಈ ವರೆಗೆ ಸತತವಾಗಿ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ದೊರಕುತಿದ್ದು ಪ್ರಸ್ತುತ ಸಾಲಿನಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ತೃತೀಯ ಪ್ರಶಸ್ತಿ ದೊರಕಿರುವ ಸಂತಸಕ್ಕೆ ಗ್ರಾಹಕರೆಲ್ಲರಿಗೂ ಮೆಚ್ಚುಗೆ ವ್ಯಕ್ತಪಡಿಸಿದರು. ಉಪ್ಪೂರು ಮತ್ತು ಹಾವಂಜೆ ಕೇವಲ 2 ಗ್ರಾಮದ ಕಾರ್ಯವ್ಯಾಪ್ತಿಗೆ ಒಳಪಟ್ಟು ವ್ಯವಹಾರ ನಡೆಸಿ ಮುನ್ನಡೆಯುತ್ತಿರುವ ಸಂಘದ ಪ್ರಗತಿಯಲ್ಲಿ ಠೇವಣಾತಿ ಸಂಗ್ರಹಣೆ, ಸಾಲ ವಸೂಲಾತಿ, ಸಂಘದ ನಿರ್ವಹಣೆಗೆ ಸಹಕಾರ ನೀಡಿದ ಎಲ್ಲಾ ಸದಸ್ಯರಿಗೂ, ಗ್ರಾಹಕರಿಗೂ, ಠೇವಣಾತಿದಾರರಿಗೂ, ಸಾಲಗಾರ ಸದಸ್ಯರಿಗೂ, ಸಿಬ್ಬಂದಿ ವರ್ಗದವರಿಗೂ ಅಭಿನಂದನೆ ಸಲ್ಲಿಸಿದರು. ಸಂಘವು ಗಳಿಸಿದ ಲಾಭದಂತೆ ಸದಸ್ಯರಿಗೆ ಶೇಕಡಾ 15% ಡಿವಿಡೆಂಡು ಘೋಷಣೆ ಮಾಡಿದರು. ಸಂಘದ ಸದಸ್ಯರಲ್ಲಿ ಉತ್ತಮ ಭತ್ತದ ಕೃಷಿ ಮಾಡಿರುವ ರೈತ ಸದಸ್ಯರಾದ ದಿನೇಶ್ ಶೆಟ್ಟಿ ಅಮ್ಮುಂಜೆ ಹಾಗೂ ಶ್ರೀಕಾಂತ್ ಶೆಟ್ಟಿ ಮುಗ್ಗೇರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನಿವೃತ್ತ ಶಿಕ್ಷಕರು ಸಖಾರಾಮ್ ಪಾಣ ಗೋಳಿಕಟ್ಟೆ, ಗ್ರಾಮ ಪಂಚಾಯತ್‌ನ ನಿವೃತ್ತರಾದ ಉಷಾ ಜೆ ಶೆಟ್ಟಿ ಮುಗ್ಗೇರಿ, ಬಸವ ಕೊಳಲಗಿರಿ ರವರನ್ನು ಸನ್ಮಾನಿಸಲಾಯಿತು. ಸಿಎ ಉತ್ತೀರ್ಣರಾದ ಪಡಿವಾಳರ ಮನೆ ಆಕಾಶ್ ಆರ್ ಶೆಟ್ಟಿ, ಪೂರ್ವಿ ದಯಾನಂದ ಶೆಟ್ಟಿ ಮುಗ್ಗೇರಿ, ಶೈಕ್ಷಣಿಕ ಕ್ಷೇತ್ರದ ಪದವಿಯಲ್ಲಿ ರಾಂಕ್ ಪಡೆದ ಪ್ರಜ್ವಲ್ ರಮೇಶ್ ನಾಯಕ್ ಹಾವಂಜೆ ಇವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರ ಮಕ್ಕಳಿಗೆ ನೀಡುವ ಸ್ಕಾಲರ್‌ಶಿಪ್ ಬಗ್ಗೆ ಪ್ರತಿಭಾನ್ವಿತ 45 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಆಕಸ್ಮಿಕ ಅಪಘಾತದಿಂದ ಮೃತಪಟ್ಟ ಸದಸ್ಯರ ಕುಟುಂಬಕ್ಕೆ ಆರ್ಥಿಕ ನೆರವು. ಅನಾರೋಗ್ಯದಲ್ಲಿರುವ ಸದಸ್ಯರ ವೈದ್ಯಕೀಯ ಆರೋಗ್ಯ ಚಿಕಿತ್ಸೆಗೆ ಆರ್ಥಿಕ ನೆರವಿನ ಚಕ್ಕನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷರಾದ ಎನ್. ರಮೇಶ್ ಶೆಟ್ಟಿ, ಉಪಾಧ್ಯಕ್ಷರಾದ ಯು. ಕೃಷ್ಣಪ್ಪ ಪೂಜಾರಿ, ನಿರ್ದೇಶಕರಾದ ಯು. ಹೂವಯ್ಯ ಸೇರ್ವೆಗಾರ್, ಪ್ರಪುಲ್ಲಚಂದ್ರ, ದೋಗು ಪೂಜಾರಿ ಸುರೇಶ್ ಸುವರ್ಣ, ಪರಮೇಶ್ವರ ಯು,, ಪ್ರೇಮಾ ಲೂವಿಸ್, ವಿದ್ಯಾ ಜಯರಾಮ ಶೆಟ್ಟಿ, ರಮೇಶ್ ಕರ್ಕೆರಾ, ಜಯಕರ ಆಚಾರ್, ಗುಣಾಕರ ನಾಯ್ಕ, ಕರುಣಾಕರ ಪೂಜಾರಿ, ಶಂಕರ ಶೆಟ್ಟಿ, ವಲಯ ಮೇಲ್ವಿಚಾರಕರಾದ ಕೆ. ರಾಜಾರಾಮ್ ಶೆಟ್ಟಿ ಉಪಸ್ಥಿತರಿದ್ದರು. ಸದಸ್ಯರಾದ ವನಿತಾ ಆಚಾರ್ ಪ್ರಾರ್ಥನೆ ಮಾಡಿ, ನಿರ್ದೇಶಕರಾದ ಪ್ರೇಮಾ ಲೂವಿಸ್ ರವರು ಸ್ವಾಗತಿಸಿ, ನಿರ್ದೇಶಕರಾದ ರಮೇಶ್ ಕರ್ಕೆರಾರವರು ಸಂಘದ ಸದಸ್ಯರು ಸಭೆಗೆ ಭಾಗವಹಿಸಿ ಯಶಸ್ವೀ ನಿರ್ವಹಣೆಗೊಳಿಸಿದ ಸರ್ವ ಸದಸ್ಯರನ್ನು ಅಭಿನಂದಿಸಿ ವಂದನಾರ್ಪಣೆ ಗೈದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now