
ನುಡಿದಂತೆ ನಡೆಯುತ್ತಿರುವ ಉಪ್ಪೂರು 1ನೇ ವಾರ್ಡ್ ಅಭಿವೃದ್ಧಿ ಸಮಿತಿ…
ಈಗಾಗಲೇ ಅಶಕ್ತರಿಗೆ ನೆರವು ಕಾರ್ಯಕ್ರಮದಡಿ ಹಲವು ಅರ್ಹರಿಗೆ ನೆರವು ನೀಡಿರುವ ಉಪ್ಪೂರು 1 ನೇ ವಾರ್ಡ್ ಅಭಿವೃದ್ಧಿ ಸಮಿತಿಯವರು ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಘೋಷಿಸಿದಂತೆ ರಜತ ಸಂಭ್ರಮದಲ್ಲಿರುವ ಕೊಳಲಗಿರಿ ಯುವವಿಚಾರ ವೇದಿಕೆಯ ಜಂಟಿ ಸಹಭಾಗಿತ್ವದೊಂದಿಗೆ ಉಪ್ಪೂರು ಸಾಲ್ಮರದ ಗುಡಿಸಲೊಂದರಲ್ಲಿ ವಾಸಿಸುತ್ತಿರುವ ಗೋದು ಪೂಜಾರ್ತಿಯವರಿಗೆ ದಾನಿಗಳ ನೆರವು ಪಡೆದು ಮನೆಯೊಂದನ್ನು ನಿರ್ಮಿಸಿಕೊಡುವ ಪುಣ್ಯಕಾರ್ಯಕ್ಕೆ ನಿನ್ನೆ ಚಾಲನೆ ನೀಡಿದ್ದಾರೆ. ಗೋದು ಪೂಜಾರ್ತಿಯವರ ಮನೆ ನಿರ್ಮಾಣಕ್ಕೆ ಕೆಸರುಕಲ್ಲು ಹಾಕುವ (ಶಿಲಾನ್ಯಾಸ) ಕಾರ್ಯ ಇಂದು ನೆರವೇರಿದ್ದು ಗಣ್ಯರು, ದಾನಿಗಳ ಜೊತೆಗೆ ಈ ಶುಭಘಳಿಗೆಯಲ್ಲಿ ನಾನೂ ಉಪಸ್ಥಿತನಿರುವ ಅವಕಾಶ ನೀಡಿದ ಸಮಿತಿ ಹಾಗೂ ಯುವವಿಚಾರ ವೇದಿಕೆಯ ಸರ್ವರಿಗೂ ಧನ್ಯವಾದ
(ರಮೇಶ ಕರ್ಕೇರ)



Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now