ನಿರಂತರ್ ಉದ್ಯಾವರ : ಫೆಬ್ರವರಿ 5 ರಿಂದ 8ರವರೆಗೆ ಬಹುಭಾಷಾ ನಿರಂತರ್ ನಾಟಕೋತ್ಸವ

ನಿರಂತರ್ ಉದ್ಯಾವರ : ಫೆಬ್ರವರಿ 5 ರಿಂದ 8ರವರೆಗೆ ಬಹುಭಾಷಾ ನಿರಂತರ್ ನಾಟಕೋತ್ಸವ

0Shares

ಉದ್ಯಾವರ : ನಿರಂತರ್ ಉದ್ಯಾವರ ಸಂಘಟನೆಯ ನೇತೃತ್ವದಲ್ಲಿ 8ನೇ ವರ್ಷದ ಬಹುಭಾಷಾ ‘ನಿರಂತರ್ ನಾಟಕೋತ್ಸವ’ವು ಇದೇ ಫೆಬ್ರವರಿ 5 ರಿಂದ 8 ವರೆಗೆ ಉದ್ಯಾವರದ ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ.

ಉದ್ಯಾವರ ಗ್ರಾಮ ಪಂಚಾಯತ್ ಕಚೇರಿಯ ಹಿಂಭಾಗದಲ್ಲಿರುವ ಕಾಲೇಜಿನ ಮೈದಾನದಲ್ಲಿ ಪ್ರತಿದಿನ ಸಂಜೆ ಗಂಟೆ 6.30ಕ್ಕೆ ಸರಿಯಾಗಿ ನಾಟಕಗಳು ಆರಂಭವಾಗಲಿವೆ. ಫೆಬ್ರವರಿ 5 ರಂದು ಭೂಮಿಗೀತಾ ಸಾಂಸ್ಕೃತಿಕ ವೇದಿಕೆ ಪಟ್ಲ ಇವರಿಂದ ‘ನೆಲ ನೀರ್’ದ ದುನಿಪು’ ಎಂಬ ತುಳು ನಾಟಕ, ಫೆಬ್ರವರಿ 6 ರoದು ರಂಗಾಯಣ ಶಿವಮೊಗ್ಗದ ರೆಪಟರಿ ಕಲಾವಿದರು ಅಭಿನಯಿಸುವ ‘ನಮ್ಮಳಗೊಬ್ಬ ಗಾಂಧಿ’ ಕನ್ನಡ ನಾಟಕ, ಫೆಬ್ರವರಿ 7ರಂದು ಅಸ್ತಿತ್ವ ಮಂಗಳೂರು ಇವರು ನಟಿಸುವ ಕೊಂಕಣಿ ನಾಟಕ ‘ಭಾoಗಾರ್ ಮುನಿಸ್’ ಮತ್ತು ಆದಿತ್ಯವಾರ ಫೆಬ್ರವರಿ 8ರಂದು ಲಿಟಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್ ಕೇರಳ ಇವರಿಂದ ಮಲಯಾಳಂ ನಾಟಕ ‘ಕೂಹೂ’ ಪ್ರದರ್ಶನವಾಗಲಿದೆ. ಇದೇ ಸಂದರ್ಭದಲ್ಲಿ ಫೆಬ್ರವರಿ 7ರಂದು ನಡೆಯುವ ಕೊಂಕಣಿ ನಾಟಕದoದು ಸತತ 800 ಮೀಟರ್ ದೂರವನ್ನು ನಿರಂತರವಾಗಿ ಈಜುತ್ತಾ ಕೊಳಲು ವಾದನ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ವಿಶ್ವದಾಖಲೆ ಸ್ಥಾಪಿಸಿರುವ ಉದ್ಯಾವರ ಮೂಲದ ಸಾಧಕ ರೂಬನ್ ಮಚಾದೊರವರನ್ನು ಸನ್ಮಾನಿಸುವ ಕಾರ್ಯಕ್ರಮವು ಇದೆ ಎಂದು ನಿರಂತರ್ ಉದ್ಯಾವರ ಸಂಘಟನೆಯ ಪ್ರಕಟಣೆ ತಿಳಿಸಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now