
ಉದ್ಯಾವರ : ಅಂತರಾಷ್ಟ್ರೀಯ ವೈದ್ಯರ ದಿನಾಚರಣೆಯ ಪ್ರಯುಕ್ತ, ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ನೇತ್ರತ್ವದಲ್ಲಿ ಇಬ್ಬರು ಯುವ ವೈದ್ಯರನ್ನು ಸನ್ಮಾನಿಸಿ, ವೈದ್ಯ ದಿನಾಚರಣೆ ಆಚರಿಸಲಾಯಿತು.
ಉದ್ಯಾವರ ಬಲಾಯ್ ಪಾದೆಯ ನಿತ್ಯಾನಂದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯುರ್ವೇದಿಕ್ ವೈದ್ಯೆ ಡಾ. ಸಿಲ್ವಿನಿಯಾ ಫೆರ್ನಾಂಡಿಸ್ ಲೋಬೊ ಮತ್ತು ಮೈಸೂರು ವಿಶ್ವವಿದ್ಯಾಲಯದ ಎಂ.ಸ್. ಇ.ನ್.ಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಪಡೆದ ಡಾ. ಆನೆಟ್ ಡಿಸೋಜರವರನ್ನು, ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಲಯ ಎರಡರ ವಲಯ ಅಧ್ಯಕ್ಷ ಲ. ಲೂವಿಸ್ ಲೋಬೊ, ವೈದ್ಯರು ಹೇಳಿದಂತೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಸಮಾಜದಲ್ಲಿ ಯಾವುದಕ್ಕೂ ಕಡಿವಾಣ ಹಾಕಲು ಸಾಧ್ಯವಾಗದೇ ಇದ್ದರೂ, ನಮ್ಮ ಆರೋಗ್ಯದ ಮೇಲೆ ಹಿಡಿತವನ್ನು ಸಾಧಿಸಬೇಕು. ವೈದ್ಯರು ಹೇಳಿದಂತೆ ನಮ್ಮ ಜೀವನ ಶೈಲಿಯನ್ನು ನಾವು ಬದಲಾಯಿಸಬೇಕು. ಬಹಳಷ್ಟು ವೈದ್ಯರು ಮಾನವೀಯ ನೆಲೆಯಲ್ಲಿ ಕಷ್ಟದಲ್ಲಿರುವವರಿಗೆ ಸ್ಪಂದಿಸಿದ್ದು ಇದೆ. ಇಂತಹ ವೈದ್ಯರು ಎಲ್ಲರಿಗೂ ಮಾದರಿ ಎಂದರು.
ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಲ. ಜೆರಾಲ್ಡ್ ಪಿರೇರಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಲ. ರೊನಾಲ್ಡ್ ರೆಬೆಲ್ಲೊ ಉಪಸ್ಥಿತರಿದ್ದರು.
ಕಾರ್ಯದರ್ಶಿ ಲ. ಎಡ್ವಿನ್ ಲುವಿಸ್ ಸ್ವಾಗತಿಸಿದರೆ, ಕೋಶಾಧಿಕಾರಿ ಲ. ಆಲ್ವಿನ್ ಡಿಸೋಜಾ ಧನ್ಯವಾದ ಸಮರ್ಪಿಸಿದರು. ಲ. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























