ಜಬಲಪುರದ ನಿವ್ರತ್ತ ಧರ್ಮಾದ್ಯಕ್ಷರ ಸಹೋದರ ಮಸ್ಕತ್ ನಲ್ಲಿ ನಿಧನ

ಜಬಲಪುರದ ನಿವ್ರತ್ತ ಧರ್ಮಾದ್ಯಕ್ಷರ ಸಹೋದರ ಮಸ್ಕತ್ ನಲ್ಲಿ ನಿಧನ

0Shares

ಉದ್ಯಾವರ : ಮಸ್ಕತ್ ನಲ್ಲಿ ಹಲವು ವರ್ಷಗಳಿಂದ ನೆಟ್ವರ್ಕಿಂಗ್, ಎಲೆಕ್ಟ್ರಿಕಲ್ ಮತ್ತು ಸೆಕ್ಯೂರಿಟಿ ಸಿಸ್ಟಮ್ ಇದರ ಉದ್ಯಮಿಯಾಗಿದ್ದ ಉಡುಪಿ ಮೂಲದ ಉದ್ಯಾವರದ ನಿವಾಸಿ ಹೆನ್ರಿ ಡಿ ಅಲ್ಮೇಡಾ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಇವರು ಜಬಲಪುರ ಧರ್ಮ ಪ್ರಾಂತ್ಯದ ನಿವೃತ್ತ ಧರ್ಮಾದ್ಯಕ್ಷರಾದ ಅತೀ ವo. ಡಾ. ಜೆರಾಲ್ಡ್ ಅಲ್ಮೇಡ ರವರ ಸಹೋದರರಾಗಿದ್ದರು.

ಪರೋಪಕಾರಿ ಮತ್ತು ದಾನಿಯಾಗಿದ್ದ ಇವರು, ಮಸ್ಕತ್ ನಲ್ಲಿ ಕಳೆದ ಹಲವಾರು ವರ್ಷಗಳಿಂದ ಉದ್ಯೋಗ ನಡೆಸುತ್ತಿದ್ದರು. ಕಳೆದ ಗುರುವಾರವಷ್ಟೇ ಮಸ್ಕತ್ ಗೆ ತೆರಳಿ ದಾಖಲೆ ಪತ್ರ, ಲೆಕ್ಕಾಚಾರಗಳನ್ನು ಕ್ಲಿಯರ್ ಮಾಡಿ ಬರುತ್ತೇನೆಂದು ತೆರಳಿದ ಇವರು, ಇಂದು ಜೂನ್ 30 ರoದು ತಾನಿದ್ದ ಕೊಠಡಿಯಲ್ಲಿ ನಿಧನರಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆಯಷ್ಟೇ ಅವರ ಪುತ್ರ ನಿಧನರಾಗಿದ್ದರು.

ಉದ್ಯಾವರ ಚರ್ಚಿನ ಮರಿಯ ಮಾತೆಯ ಗ್ರೊಟ್ಟೊವನ್ನು ಪ್ರಾಯೋಜಕತ್ವವನ್ನು ಮಾಡಿದ್ದ ಇವರು, ಹಲವಾರು ಚರ್ಚುಗಳ ಯೋಜನೆಗಳಿಗೆ ನೆರವನ್ನು ನೀಡಿದ್ದರು. ವಿವಿಧ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದ ಇವರು, ಅವಿಭಾಜಿತ ಜಿಲ್ಲೆಯ ಹಲವಾರು ಯುವಕರಿಗೆ ಉದ್ಯೋಗವನ್ನು ನೀಡಿದ್ದರು.

ಅವರು ಪತ್ನಿ, ಪುತ್ರಿ, ಅಳಿಯ, ಸಹೋದರ, ಸಹೋದರಿ ಮತ್ತು ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯ ವಿಧಿ ವಿಧಾನಗಳು ಉದ್ಯಾವರ ಚರ್ಚಿನಲ್ಲಿ ನಡೆಯಲಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ದೊರಕಬೇಕಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now