ಯು.ಎಫ್.ಸಿ ಸದಸ್ಯ, ಕ್ರಿಕೆಟಿಗ ಸಮೀರ್ ಶರೀಫ್ ನುಡಿ ನಮನ*

ಯು.ಎಫ್.ಸಿ ಸದಸ್ಯ, ಕ್ರಿಕೆಟಿಗ ಸಮೀರ್ ಶರೀಫ್ ನುಡಿ ನಮನ*

0Shares

ನಾವು ಎಷ್ಟು ದಿನ ಬದುಕುತ್ತೇವೆ ಅನ್ನೋದು ಮುಖ್ಯವಲ್ಲ . ನಾವು ಹೇಗೆ ಬದುಕಿದ್ದೇವೆ ಎಂಬುದು ಮುಖ್ಯ ಜನ ಮೆಚ್ಚವ, ನೆನಪಿಸುವ ಬದುಕು ಬದುಕಿದವರು ಮಾತ್ರ ಸತ್ತ ನಂತರವೂ ಬದುಕುತ್ತಾರೆ. ಹಾಗೆ ಬದುಕಿದವರು ಸಮೀರ್ , 43 ಕಿರಿಯ ವಯಸ್ಸಿನಲ್ಲೇ ತನ್ನ ವರ್ತನೆಯಿಂದ ಎಲ್ಲರ ಹೃದಯದಲ್ಲಿ ಮನೆ ಮಾಡಿದ್ದಾರೆ. ಊರಲ್ಲಾಗಲಿ ತಾವು ಉದ್ಯೋಗ ಮಾಡುವ ಕೊಲ್ಲಿ ರಾಷ್ಟ್ರದಲ್ಲಾಗಲಿ ಸಾಮಾಜಿಕ ಕೆಲಸ ಕಾರ್ಯಕ್ರಗಳಲ್ಲಿ ತನ್ನನ್ನು ತೊಡಗಿಸಿ ಕೊಂಡಿದ್ದಾರೆ. ಅಲ್ಲದೇ ಕ್ರಿಕೆಟಲ್ಲಿ ಅತೀವ ಅಸಕ್ತಿ ಇರುವ ಆಟಗಾರರಿವರು .ಇಂತವರನ್ನು ಅಕಾಲದಲ್ಲಿ ಕಳೆದು ಕೊಂಡದ್ದು ನಮ್ಮೆಲ್ಲರ ದೌರ್ಭಾಗ್ಯ ಎಂದು ಯು.ಎಫ್.ಸಿ.ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಅವರು ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಜರಗಿದ , ಇತ್ತೀಚಿಗೆ ನಿಧನರಾದ ಸಂಸ್ಥೆಯ ಸಕ್ರಿಯ ಸದಸ್ಯ ಮಹಮ್ಮದ್ ಸಮೀರ್ ಶರೀಫ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು .

ಅವರು ಮುಂದುವರಿಯುತ್ತಾ ಸ್ಪಷ್ಟ ಜ್ಯಾತ್ಯಾತೀತೆಯ ನಿಲುವನ್ನು ಹೊಂದಿದ , ಪ್ರತಿಭಾವಂತ ಕ್ರಿಕೆಟ್ ಆಟಗಾರ ಸಮೀರ್ ಅವರನ್ನು ಕಳಕೊಂಡದ್ದು ಸಂಸ್ಥೆಗೆ ಭರಿಸಲಾರದ ನಷ್ಟ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಮನೆಯವರಿಗೆ ಬರಲಿ ಎಂದು ಹಾರೈಸಿದರು .

ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಿಯಾಝ್ ಪಳ್ಳಿ ಅವರು ತನ್ನ ಮತ್ತು ಸಮೀರ್ ಅವರ ಸಂಬಂಧವನ್ನು ನೆನಪಿಸಿ ಕೊಂಡರು .

ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಗುಡ್ಡೆಯಂಗಡಿಯವರ ನೇತ್ರತ್ವದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತ್ತುಲ್ಲ , ಕೋಶಾಧಿಕಾರಿ ಸತೀಶ್ ಡಿ.ಸಾಲ್ಯಾನ್ , ನಿರ್ದೇಶಕರಾದ ಯು.ಪದ್ಮನಾಭ ಕಾಮತ್ , ಶರತ್ ಕುಮಾರ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಅಜಿತ್ ಮೆಂಡನ್ , ತಿಲಕ್ ರಾಜ್ ಸಾಲ್ಯಾನ್ , ಆಶಾವಾಸು, ಆಶಾ ಸುರೇಶ್ ,ಲೋಕನಾಥ್ ಬೊಳ್ಜೆ ,ಶ್ರೀಧರ್ ಗಣೇಶ ನಗರ , ನಾಗೇಶ್ ಪಾಲನ್ , ಸೋಮಶೇಖರ ಸುರತ್ಕಲ್, ಮಹಮ್ಮದ್ ಅನ್ಸರ್ ಸತ್ತಾರ್ , ಇಸ್ಮಾಯಿಲ್ ಪಾಂದೆ, ಮಹಮ್ಮದ್ ಆಲಿ , ಹನುಮಂತ ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷ ಅನೂಪ್ ಕುಮಾರ್ ರವರು ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ ಉದ್ಯಾವರ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now