ಸೆಂಟ್ರಿಂಗ್ ಶೀಟ್ ಕಳವು ಬಗ್ಗೆ ಪ್ರಕರಣ

ಸೆಂಟ್ರಿಂಗ್ ಶೀಟ್ ಕಳವು ಬಗ್ಗೆ ಪ್ರಕರಣ

0Shares

ಶಿರ್ವ: ಪಿರ್ಯಾದಿ ಶ್ರೀನಿವಾಸ ಆಚಾರ್ಯ(37) ಶಿರ್ವ ಗ್ರಾಮ, ತಾಲೂಕು ಇವರು ರಾಜೇಶ್‌ ನಾಯ್ಕ್‌ ರವರು ಶಿರ್ವ ಗ್ರಾಮದ ಗಾಂಧಿನಗರದ ಬಳಿ ಗುತ್ತಿಗೆ ಪಡೆದಿರುವ ಜಾಗದಲ್ಲಿ ಸೆಂಟ್ರಿಂಗ್‌ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ದಿನಾಂಕ:29.12.2025 ರಂದು ಸಂಜೆ 135 ಕಬ್ಬಿಣದ ಸೆಂಟ್ರಿಂಗ್‌ ಶೀಟ್‌ ಗಳನ್ನು ಸದ್ರಿ ಜಾಗದಲ್ಲಿ ಒಟ್ಟಿಗೆ ಹಾಕಿರುತ್ತಾರೆ. ದಿನಾಂಕ:31.12.2025 ರಂದು ರಾತ್ರಿ 10.00 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಮೂಡುಬೆಳ್ಳೆಯಲ್ಲಿರುವಾಗ ರಾಜೇಶ್‌ ನಾಯ್ಕ್‌ ರವರು ಪೋನ್‌ ಮಾಡಿ ಗಾಂಧಿನಗರದ ಬಳಿ ಗುತ್ತಿಗೆ ಪಡೆದ ಜಾಗದಲ್ಲಿ ಏನೋ ಶಬ್ದ ಬರುತ್ತಿದ್ದು ಅಲ್ಲಿ ಏನಾದರೂ ಕೆಲಸ ಆಗುತ್ತಿದೆಯಾ ಎಂದು ಕೇಳಿದರು ಆಗ ಪಿರ್ಯಾದಿದಾರರು ಇಲ್ಲ ಎಂದು ಹೇಳಿ ಕೂಡಲೇ ಅಲ್ಲಿಂದ ಹೊರಟು 10:20 ಗಂಟೆಗೆ ಗಾಂಧಿನಗರದ ಗುತ್ತಿಗೆ ಸ್ಥಳಕ್ಕೆ ತಲುಪಿದ್ದು ಆಗ ಒಂದು ಆಟೋ ರಿಕ್ಷಾದಲ್ಲಿ ಪಿರ್ಯಾದಿದಾರರು ಇರಿಸಿದ್ದ ಸೆಂಟ್ರಿಂಗ್‌ ಶೀಟ್‌ ಗಳನ್ನು ಯಾರೋ ಇಬ್ಬರು ತುಂಬುತ್ತಿದ್ದು, ಪಿರ್ಯಾದಿದಾರರು ರಿಕ್ಷಾದ ಬಳಿ ಹೋಗುವಾಗ ಆ ರಿಕ್ಷಾ ಚಾಲಕ ಅಲ್ಲಿಂದ ಸೆಂಟ್ರಿಂಗ್‌ ಶೀಟ್‌ ಗಳನ್ನು ತುಂಬಿಕೊಂಡು ಸ್ಥಳದಿಂದ ಓಡಿ ಹೋಗಿರುತ್ತಾನೆ. ಆಗ ರಿಕ್ಷಾ ನಂಬ್ರ ನೋಡಲಾಗಿ KA20AB 6318 ಆಗಿರುತ್ತದೆ. ಕೂಡಲೇ ಪಿರ್ಯಾದಿದಾರರು ಶಿರ್ವ ಪೊಲೀಸ್‌ ಠಾಣೆಗೆ ಕರೆ ಮಾಡಿ ಮಾಹಿತಿಯನ್ನು ತಿಳಿಸಿರುತ್ತಾರೆ. ತಕ್ಷಣ ಕಾರ್ಯ ಪ್ರವೃತ್ತರದ ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದ ಹಾಗೂ ಕ್ರೈಂ ಎಸ್ ಐ ಲೋಹಿತ್ ಕುಮಾರ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಂದು ರಿಕ್ಷಾ ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ ನಂತರ ಪಿರ್ಯಾದಿದಾರರು ಅಲ್ಲಿದ್ದ ಶೀಟ್‌ ಗಳನ್ನು ಲೆಕ್ಕ ಹಾಕಿ ನೋಡಿ ಸುಮಾರು 15 ಕಬ್ಬಿಣದ ಸೆಂಟ್ರಿಂಗ್‌ ಶೀಟ್‌ಗಳನ್ನು ಕಳವು ಆಗಿದ್ದು, ಇದರ ಅಂದಾಜು ಮೌಲ್ಯ 15000/- ಆಗಬಹುದು. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 01/2026 ಕಲಂ: 303(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now