ಉಡುಪಿ ವಲಯ ಮಟ್ಟದ ICYM ಯುವಜನರ ಸಮಾವೇಶ – ಮೂಡುಬೆಳ್ಳೆ

ಉಡುಪಿ ವಲಯ ಮಟ್ಟದ ICYM ಯುವಜನರ ಸಮಾವೇಶ – ಮೂಡುಬೆಳ್ಳೆ

0Shares

ಮೂಡುಬೆಳ್ಳೆ : ಉಡುಪಿ ವಲಯ ಮಟ್ಟದ ICYM ಯುವಜನರ ಸಮಾವೇಶ ‘ಯುವ ಸಮಾಗಮ್ 2025’ ಜುಲಾಯ್ 27ರಂದು ಮೂಡುಬೆಳ್ಳೆ ಸಂತ ಲೊರೆನ್ಸ್ ಚರ್ಚ್ ವಠಾರದಲ್ಲಿರುವ ಸಮುದಾಯ ಭವನದಲ್ಲಿ ಜರಗಿತು.

ಮೂಡುಬೆಳ್ಳೆ ಸoತ ಲಾರೆನ್ಸರ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವo. ಜೊರ್ಜ್ ತೋಮಸ್ ಧ್ವಜಾರೋಹಣ ನೆರವೇರಿಸಿದರು. ಯುಪಿಎಸ್ಸಿ ನಾಗರಿಕ ಸೇವಾ ಸಾಧಕ ಶ್ರೇಯಾಂಸ್ ಗೋಮ್ಸ್ ಉಡುಪಿ ವಲಯದ ವಿವಿಧ ಘಟಕಗಳ ಹೆಸರು ಮತ್ತು ಲೋಗೊವನ್ನು ಅನಾವರಣಗೊಳಿಸುವುದರೊಂದಿಗೆ ‘ಯುವ ಸಮಾಗಮ್ 2025’ ಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಸೈಬರ್ ಕ್ರೈಂ ವಿಷಯದ ಬಗ್ಗೆ ಯುವ ವಕೀಲ ರಾಯನ್ ಫೆರ್ನಾಂಡಿಸ್ ರವರು ಮಾಹಿತಿ ಕಾರ್ಯಕ್ರಮ ನಡೆಸಿದರು. ಯುವಜನರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉಡುಪಿ ವಲಯದ ವಿವಿಧ ಘಟಕಗಳ ಐಸಿವೈಎಂ ಸದಸ್ಯರಿಗೆ ಹಮ್ಮಿಕೊಳ್ಳಲಾಗಿತ್ತು. ಇದರ ನಡುವೆ ಉಡುಪಿ ವಲಯದ ಯುವಜನರ ‘ದಿ ಫಸ್ಟ್ ಗೇರ್ ಬ್ಯಾಂಡ್’ ಮನೋರಂಜನೆ ನೀಡಿತು. ಉದ್ಘಾಟನಾ ಸಮಾರಂಭದಲ್ಲಿ ಮೂಡುಬೆಳ್ಳೆ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ CA ಪ್ರಿತೇಶ್ ಡೇಸಾ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ವಲಯದ ಪ್ರಧಾನ ಧರ್ಮಗುರುಗಳಾದ ಆ. ವo. ಚಾರ್ಲ್ಸ್ ಮಿನೆಜಸ್ ಮಾತನಾಡಿ, ಯುವಜನರು ತಪ್ಪು ದಾರಿಗೆ ಹೋಗುವ ಬದಲು ಇಂತಹ ಕಾರ್ಯಕ್ರಮಗಳ ಮೂಲಕ ತಮ್ಮ ನಾಯಕತ್ವವನ್ನು ಸಮಾಜಕ್ಕೆ ನೀಡಬಹುದು. ಇಂದಿನ ಯುವ ಸಮಾವೇಶದ ಯಶಸ್ಸಿಗೆ ನಿಮ್ಮ ಒಗ್ಗಟ್ಟು ಕಾರಣ ಎಂದರು

ಮುಖ್ಯ ಅತಿಥಿಯಾಗಿ ಉಡುಪಿ ಧರ್ಮ ಪ್ರಾಂತ್ಯದ ಐಸಿವೈಎo ನಿರ್ದೇಶಕರಾದ ವಂ. ಸ್ಟೀವನ್ ಫೆರ್ನಾಂಡಿಸ್, ಉಡುಪಿ ವಲಯದ ಐಸಿವೈಎಂ ಮಾಜಿ ಅಧ್ಯಕ್ಷ ಸ್ಟೀವನ್ ಕುಲಾಸೊ, ಉಡುಪಿ ವಲಯದ ಯುವಜನರ ನಿರ್ದೇಶಕರಾದ ವಂ. ರಾಜೇಶ್ ಪಸನ್ನ, ಮೂಡುಬೆಳ್ಳೆ ಸಂತ ಲಾರೆನ್ಸರ ದೇವಾಲಯದ ಸಹಾಯಕ ಧರ್ಮ ಗುರುಗಳಾದ ವo. ರಿಕ್ಸನ್ ಮೊoತೆರೊ, ಐಸಿವೈಎಂ ಮೂಡುಬೆಳ್ಳೆ ಘಟಕ ಅಧ್ಯಕ್ಷ ಆರೋನ್ ಬರ್ಬೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪೆರಂಪಳ್ಳಿ ಘಟಕದ ಐಸಿವೈಎಂ ಸದಸ್ಯರು ಓವರೋಲ್ ಚಾಂಪಿಯನ್ ಪಡೆದರೆ, ಉದ್ಯಾವರ ಘಟಕದ ಐಸಿವೈಎಂ ಸದಸ್ಯರು ರನ್ನರ್ಸ್ ಪಟ್ಟವನ್ನು ತಮ್ಮದಾಗಿಸಿಕೊಂಡರು. ಈ ಸಂದರ್ಭದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಉಡುಪಿ ವಲದ ಐಸಿವೈಎಂ ಕಾರ್ಯದರ್ಶಿ ಶರನ್ ಕ್ರಾಸ್ಟೋ ಸ್ವಾಗತಿಸಿದರೆ, ಅಧ್ಯಕ್ಷ ರೋವಿನ್ ಪಿರೇರಾ ಕಲ್ಮಾಡಿ ಮತ್ತು ಅಶ್ಲಿಟ ಮೆಂಡೊನ್ಸಾ ಧನ್ಯವಾದ ಸಮರ್ಪಿಸಿದರು. ಡೇನ್ ಮೆಂಡೊನ್ಸಾ, ಮೆಲಿಶಾ ಡಿಸೋಜಾ ಮತ್ತು ರೋವಿನಾ ಡೆಸಾ ಕಾರ್ಯಕ್ರಮ ನಿರೂಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now