ಉಡುಪಿಯ ರಾಜಾಂಗಣದಲ್ಲಿ ಕಲಾಶಿಲ್ಪನಿಧಿ 80ನೇ ಬಡಗುಬೆಟ್ಟು ಈ ತಂಡದ ಕಥೆ ಪನ್ಪೆ ನಾಟಕದ ಪ್ರಥಮ ಪ್ರಯೋಗ ಹಾಗೂ ಲಾಂಛನ ಅನಾವರಣ ಕಾರ್ಯಕ್ರಮ

ಉಡುಪಿಯ ರಾಜಾಂಗಣದಲ್ಲಿ ಕಲಾಶಿಲ್ಪನಿಧಿ 80ನೇ ಬಡಗುಬೆಟ್ಟು ಈ ತಂಡದ ಕಥೆ ಪನ್ಪೆ ನಾಟಕದ ಪ್ರಥಮ ಪ್ರಯೋಗ ಹಾಗೂ ಲಾಂಛನ ಅನಾವರಣ ಕಾರ್ಯಕ್ರಮ

0Shares

ಉಡುಪಿಯ ರಾಜಾಂಗಣದಲ್ಲಿ ಕಲಾಶಿಲ್ಪನಿಧಿ 80ನೇ ಬಡಗುಬೆಟ್ಟು ಈ ತಂಡದ ಕಥೆ ಪನ್ಪೆ ನಾಟಕದ ಪ್ರಥಮ ಪ್ರಯೋಗ ಹಾಗೂ ಲಾಂಛನ ಅನಾವರಣ ಕಾರ್ಯಕ್ರಮ ಜರುಗಿತು..
ಪರ್ಯಾಯ ಪೀಠಾಧಿಪತಿಗಳು ಪುತ್ತಿಗೆ ಶ್ರೀಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರು ಹಾಗೂ ಕಿರಿಯ ಸ್ವಾಮಿಗಳಾದ ಶ್ರೀ ಶ್ರೀ ಸುಶೀಂದ್ರ ತೀರ್ಥ ಶ್ರೀ ಪಾದರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ. ಕೃಷ್ಣನ ಅನುಗ್ರಹದಿಂದ ಕಲಾ ಸಂಸ್ಥೆ ವಿಶ್ವದಾದ್ಯಂತ ಹೆಸರು ಮಾಡಲಿ ಎಂದು ಆಶೀರ್ವಚನ ನೀಡಿದರು..
ಸಂಸ್ಥೆಯ ಲಾಂಛನವನ್ನು ಅನಾವರಣ ಗೊಳಿಸಿದ ನಾಡು ಕಂಡ ಶ್ರೇಷ್ಠ ಸಂಗೀತ ನಿರ್ದೇಶಕ ಗುರುಕಿರಣ್ ಅವರು ಮಾತನಾಡುತ್ತಾ ಗಿಚ್ಚಿಗಿಲಿಗಿಲಿ ಮತ್ತು ಮಜಾಭಾರತದಲ್ಲಿ ಭಾಗವಹಿಸಿದ ಹಾಗೂ ಈ ನಾಟಕ ರಚಿಸಿ ನಿರ್ದೇಶಿಸಿ ಅಭಿನಯಿಸಿದ ನಿತಿನ್ ಪರ್ಕಳ ಅವರ ಅಭಿಮಾನದ ಮೇಲೆ ಅನಿರೀಕ್ಷಿತವಾಗಿ ಆಗಮಿಸಿದ್ದೇನೆ.. ಕಲಾಕ್ಷೇತ್ರದಲ್ಲಿ ಕಲಾವಿದರು ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.. ಇದಕ್ಕೆ ನಿತಿನ್ ಅವರೇ ಉದಾಹರಣೆ.. ಎಂದು ತಿಳಿಸಿದರು..
ಈ ಸಂದರ್ಭದಲ್ಲಿ ಶಾಸಕರಾದ ಯಶಪಾಲ್ ಸುವರ್ಣ, ಮಾಜಿ ಶಾಸಕರಾದ ರಘುಪತಿ ಭಟ್, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಶ್ರೀ ಕ್ಷೇತ್ರ ಮೂಡುಸಗ್ರಿಯ ಧರ್ಮದರ್ಶಿಗಳಾದ ಭಾಸ್ಕರ್ ಗುಂಡಿಬೈಲು, ನಮ್ಮ ಟಿವಿಯ ಮುಖ್ಯಸ್ಥರಾದ ಶಿವಶರಣ್ ಶೆಟ್ಟಿ, ನಗರ ಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಪೆರಂಪಳ್ಳಿ ಯುವಕ ಸಂಘದ ಗೌರವಾಧ್ಯಕ್ಷರಾದ ಹರಿಕೃಷ್ಣ ಶಿವತ್ತಾಯರು, ಅಲೆವೂರು ಪಂಚಾಯತ್ ಅಧ್ಯಕ್ಷರಾದ ಯತೀಶ್ ಕುಮಾರ್, ಉದ್ಯಮಿಗಳಾದ ಸಂದೀಪ್ ಶೆಟ್ಟಿ ಕಲ್ಲಾಪು, ಪ್ರಭಾಕರ್ ಎಸ್ ಪೂಜಾರಿ, ಸುಗುಣ ಕುಮಾರ್, ಹರೀಶ್ ಪಿ.ಕರ್ಕೇರ, ಸಚ್ಚಿದಾನಂದ ನಾಯಕ್, ವಿಜಯ್ ಶೆಟ್ಟಿ, ಸುಕೇಶ್ ಕುಂದರ್, ಸಂತೋಷ್ ಪೂಜಾರಿ, ಶುಭಕರ್ ಶೆಟ್ಟಿ ಹಾಗೂ ತಂಡದ ಸಾರಥ್ಯ ವಹಿಸಿರುವ ಕೆ.ಪ್ರಕಾಶ್ ಶೆಣೈ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಮ್ಮೂರಿನ ಹಿರಿಯ ಕಲಾವಿದರಾದ ಪಾಂಡುರಂಗ ಪ್ರಭು, ಕೆ.ಕೆ.ಸಾಲಿಯಾನ್, ದಿನೇಶ್ ಅಮೀನ್ ಕದಿಕೆ, ವಿಜಯ್ ಆರ್.ನಾಯಕ್ ಮಾರ್ಪಳ್ಳಿ, ಅಶೋಕ್ ಕೆ.ಪಿ. ರಾಜೇಶ್ ಶಿರ್ವ, ಶಂಕರ್ ಪೂಜಾರಿ, ಬಾಬುರಾಯ್ ಆಚಾರ್ಯ, ಚಂದ್ರಕಲಾ ರಾವ್ ಇವರನ್ನು ಸನ್ಮಾನಿಸಲಾಯಿತು ಹಾಗೂ ನಿತಿನ್ ಅವರ ನಾಟಕದ ಪ್ರಥಮ ಪ್ರಯೋಗಕ್ಕೆ ಶುಭಹಾರೈಸಲು ಬೆಂಗಳೂರಿನಿಂದ ಆಗಮಿಸಿದ ಗಿಚ್ಚಿಗಿಲಿಗಿಲಿ ತಂಡದ ಶಿವು, ವಿನೋದ್ ಗೊಬ್ರಗಾಲ, ಮಾನಸ ಮತ್ತು ಕೆಂಡ ಸಂಪಿಗೆ ಧಾರವಾಹಿಯ ಜಾಹ್ನವಿ ಅವರನ್ನು ಗೌರವಿಸಲಾಯಿತು. ಹಾಗೇಯೇ ನಿತಿನ ಅವರ ಮೇಲಿನ ಅಭಿಮಾನದಿಂದ ಅನಿರೀಕ್ಷಿತವಾಗಿ ಆಗಮಿಸಿದ ಗುರುಕಿರಣ್, ಶಿವಶರಣ್ ಶೆಟ್ಟಿ ಮತ್ತು ನವೀನ್ ಶೆಟ್ಟಿ ಎಡ್ಮೇರ್ ಅವರನ್ನು ಸನ್ಮಾನಿಸಲಾಯಿತು..
ಕುಸುಮ ಕಾಮತ್ ಕರ್ವಾಲು ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ರಂಗಕರ್ಮಿ ಶೇಖರ್ ಬೈಕಾಡಿ ಎಲ್ಲರನ್ನು ಸ್ವಾಗತಿಸಿದರು, ರಂಗಕರ್ಮಿಗಳಾದ ಜಗದೀಶ್ ಆಚಾರ್ಯ ಪೆರಂಪಳ್ಳಿ ವಂದನಾರ್ಪಣೆ ಗೈದರು, ಕಾರ್ಯಕ್ರಮವನ್ನು ನಮ್ಮ ಟಿ.ವಿಯ ಹೆಸರಾಂತ ನಿರೂಪಕರಾದ ನವೀನ್ ಶೆಟ್ಟಿ ಎಡ್ಮೇರ್ ಮತ್ತು ಯೋಗೀಶ್ ಕೊಳಲಗಿರಿ ನಿರ್ವಹಿಸಿದರು.. ತದನಂತರ ಪ್ರಥಮ ಪ್ರದರ್ಶನನ ನಾಟಕ ಕಥೆ ಪನ್ಪೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು….

ವಿ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now