
ಉಡುಪಿ, ಜನವರಿ 29 : ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ತಾಂತ್ರಿಕ ಸಲಹೆ ಸೇವಾ ಸಂಸ್ಥೆ ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಮಣಿಪಾಲ ಉಡುಪಿ ಇವರ ಸಹಯೋಗದೊಂದಿಗೆ ಎಂ.ಎಸ್.ಎಂ.ಇ.ಗಳಿಗೆ ಆರ್.ಎ.ಎಂ.ಪಿ ಯೋಜನೆಯಡಿ ಟಿ.ಆರ್.ಇ.ಡಿ.ಎಸ್ ಮತ್ತು ಇ.ಎಸ್.ಎಂ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನಗರದ ಮಣಿಪಾಲದ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದಲ್ಲಿ ನಡೆಯಿತು.
ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಹರೀಶ್ ಕುಂದಾರ್ ಕಾರ್ಯಕ್ರಮ ಉದ್ಘಾಟಿಸಿ, ಟಿ.ಆರ್.ಇ.ಡಿ.ಎಸ್ ಮತ್ತು ಇ.ಎಸ್.ಎಂ ನ ಪ್ರಾಮುಖ್ಯತೆ ಅದನ್ನು ಯಾವ ರೀತಿ ಆಳವಡಿಸಿಕೊಂಡು, ಯಶಸ್ವಿ ಉದ್ಯಮಿಗಳಾಗಬಹುದು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ.ಕೆ ಫಿಶ್ನೆಟ್ ಮಾಲೀಕ ಹಾಗೂ ಕೆ.ಎ.ಎ.ಎಸ್.ಐ.ಎ ಇದರ ಪ್ರತಿನಿಧಿ ಪ್ರಶಾಂತ್ ಬಾಳಿಗ ಮಾತನಾಡಿ, ಸ್ವ-ಉದ್ಯೋಗದಿಂದ ನಾವು ಸ್ವತಂತ್ರರಾಗುವುದಲ್ಲದೇ, ಬೇರೆಯವರಿಗೂ ಉದ್ಯೋಗ ಅವಕಾಶ ಕೊಡಬಹುದು, ಇನ್ನೊಬ್ಬರ ಜೀವನಕ್ಕೆ ಆಧಾರವಾಗಬಹುದು ಎಂದು ತಿಳಿಸಿದರು.
ಜಿಲ್ಲಾ ವ್ಯವಸ್ಥಾಪಕ ಹರೀಶ್ ಮಾತನಾಡಿ, ಕೌಶಲ್ಯ, ಜ್ಞಾನ ಮತ್ತು ತಾಳ್ಮೆಯನ್ನು ನಮ್ಮ ಜೀವನದಲ್ಲಿ ಹೆಚ್ಚಿಸಿಕೊಂಡು, ನಮ್ಮಲ್ಲಿರುವ ಉತ್ತಮ ಗುಣಗಳನ್ನು ಬೆಳೆಸುವುದರ ಮೂಲಕ ನಾವು ಯಶಸ್ವಿ ಉದ್ಯಮಿಗಳಾಗಿ ಈ ಸಮಾಜಕ್ಕೆ ಒಳ್ಳೆಯ ಕೊಡುಗೆಯಾಗಬಹುದು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾದ ಕೃಷ್ಣಮೂರ್ತಿ ಎಚ್.ಎಸ್, ಟಿ.ಆರ್.ಇ.ಡಿ.ಎಸ್ ಮತ್ತು ಇ.ಎಸ್.ಎಂ ಯು ಎಂ.ಎಸ್.ಎಂ.ಇ. ಗಳಿಗೆ ಬಹುಮುಖ್ಯವಾಗಿದೆ ಹಾಗೂ ಅದರ ಪ್ರಯೋಜನಗಳು ಹಾಗೂ ಗುಣಲಕ್ಷಣಗಳು ಹಾಗೆ ಸವಾಲುಗಳನ್ನು ಎದುರಿಸುವ ಬಗ್ಗೆ, ಹಾಗೆ ಉದ್ಯಮವನ್ನು ವಿಕಸಿಸುವುದಕ್ಕೆ ಇರುವಂತಹ ಅವಕಾಶಗಳನ್ನು ಗುರುತಿಸುವುದರ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಣ್ಣ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ಕಾರ್ಯಕ್ರಮದ ಧ್ಯೇಯೋದೇಶಗಳನ್ನು ತಿಳಿಸುವುದರೊಂದಿಗೆ, ತರಬೇತಿಗಳ ಸದುಪಯೋಗವನ್ನು ಅಭ್ಯರ್ಥಿಗಳು ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಣ್ಣ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ್ ಶೆಟ್ಟಿ, ಜಿಲ್ಲಾ ಸಣ್ಣ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ವಾಮನ್ ನಾಯ್ಕ್, ಪವರ್ ಅಧ್ಯಕ್ಷೆ ತನುಜ ಮ್ಯಾಬೆನ್, ಸಚಿನ್ ಆರ್ ಚಂದ್ರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























