
ಉಡುಪಿ: ಎಪಿಸಿಆರ್ ಕರ್ನಾಟಕದ ವತಿಯಿಂದ ಏರ್ಮಾಳಿನ ರಾಜೀವ್ ಗಾಂಧಿ ಅಕಾಡೆಮಿಯ ಮೈದಾನದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐಎಮ್ ಮುಖಂಡರಾದ ಬಾಲಕೃಷ್ಣ ಶೆಟ್ಟಿ ಮಾತನಾಡಿ, “ಕುಂಭ ಮೇಳದಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕೆಂಬ ಅಂಗೀಕಾರ ಮಾಡುತ್ತಿದ್ದಾರೆ. ನಾವು ಗಂಡಾಂತರದ ಪರಿಸ್ಥಿತಿಯಲ್ಲಿ ನಿಂತಿದ್ದೇವೆ. ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಒಂದು ಧರ್ಮದ ಜನ ಹೋರಾಟ ನಡೆಸಿಲ್ಲ.ಎಲ್ಲ ಧರ್ಮದವರು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈ ಐಕ್ಯತೆಯನ್ನು ಒಡೆಯುವ ಪ್ರಯತ್ನಗಳು ಸಾಗುತ್ತಿದೆ. ಆದರೆ ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಈ ಐಕ್ಯತೆಯನ್ನು ಒಡೆಯಲು ಬಿಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಪಿಸಿಆರ್ ಉಪಾಧ್ಯಕ್ಷ ಅಡ್ವೇಕೆಟ್ ಪಿ ಉಸ್ಮಾನ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕಟಪಾಡಿ, ಎಪಿಸಿಆರ್ ರಾಜ್ಯ ಕಾರ್ಯದರ್ಶಿ ಅಡ್ವಕೇಟ್ ನಿಯಾಝ್, ಮುಸ್ಲಿಂ ಒಕ್ಕೂಟ ಕಾರ್ಯದರ್ಶಿ ಟಿ.ಎಮ್ ಜಫ್ರುಲ್ಲಾ, ಪ್ರೊ. ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























