ವಿಮಾ ಪಿಂಚಣಿದಾರರ ಸಂಘ, ಉಡುಪಿ ವಿಭಾಗದ ಸದಸ್ಯರಿಂದ ಧರಣಾ ಕಾರ್ಯಕ್ರಮ

ವಿಮಾ ಪಿಂಚಣಿದಾರರ ಸಂಘ, ಉಡುಪಿ ವಿಭಾಗದ ಸದಸ್ಯರಿಂದ ಧರಣಾ ಕಾರ್ಯಕ್ರಮ

0Shares

ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘದ ಕರೆಯಂತೆ ವಿಮಾ ಪಿಂಚಣಿದಾರರ ಸಂಘ, ಉಡುಪಿ ವಿಭಾಗ ಇದರ ಸದಸ್ಯರಿಂದ ತಮ್ಮ ಈ ಕೆಳಗಿನ ಬೇಡಿಕೆಗಳ ಈಡೇರಿಕೆಗಾಗಿ ಇಂದು ಎಲ್.ಐ.ಸಿ ವಿಭಾಗೀಯ ಕಛೇರಿಯ ಆವರಣದಲ್ಲಿ ಧರಣಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು

. ಹೊರರೋಗಿಯಾಗಿ ಪಡೆದುಕೊಳ್ಳುವ ಚಿಕಿತ್ಸೆಗಳಿಗೆ ನಗದು ವೈದ್ಯಕೀಯ ಭತ್ಯೆ ಮತ್ತು ಆರೋಗ್ಯ ತಪಾಸಣೆಗೆ ತಗಲುವ ಖರ್ಚನ್ನು ಭರಿಸುವುದು

  1. 1986 ರ ಪೂರ್ವನಿವೃತ್ತರಿಗೆ ಪರಿಹಾರದಲ್ಲಿ ಗಣನೀಯ ಹೆಚ್ಚಳ ಮಾಡುವುದು
  2. ಆಗಸ್ಟ್ 1986 ರ ಪೂರ್ವ ಪಿಂಚಣಿದಾರರಿಗೆ ಏಕರೂಪದ ಡಿ.ಎ ನ್ಯೂಟ್ರಲೈಸೇಷನ್ ಮಾಡುವುದು
  3. ಮೆಡಿಕ್ಲೈಮ್ ಯೋಜನೆಯಲ್ಲಿ ಸುಧಾರಣೆಗಳು ಮಾಡುವುದು
  4. ನಿವೃತ್ತ ಸೈನಿಕರ ಉದ್ಯೋಗಿಗಳು, ಎಂಜಿನಿಯರ್‍ಗಳು ಮುಂತಾದವರಿಗೆ ಪಿಂಚಣಿ ಯೋಜನೆ 1995 ಗೆ ಸೇರಲು ಮತ್ತೊಂದು ಅವಕಾಶ
  5. ವಯಸ್ಸಿನ ಹೊರತಾಗಿಯೂ ಎಲ್ಲಾ ಪಿಂಚಣಿದಾರರಿಗೆ ಎಕ್ಸ್-ಗ್ರೆಷಿಯಾ ಯೋಜನೆಯನ್ನು ನಿಯಮಿತವಾಗಿ ಮಾಸಿಕವಾಗಿ ಪಾವತಿ ಮಾಡುವುದು
  6. ಸಾಮಾನ್ಯ ಜೀವ ವಿಮಾ ಪಿಂಚಣಿದಾರರ ಕುಟುಂಬ ಪಿಂಚಣಿಯನ್ನು ಶೇಕಡಾ 15 ರಿಂದ 30 ಕ್ಕೆ ಏರಿಸುವುದು.

ಸಂಘದ ಅಧ್ಯಕ್ಷರಾದ ಶ್ರೀ ಎ. ಮಧ್ವರಾಜ ಬಲ್ಲಾಳ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀವಿಠಲ್‍ಮೂರ್ತಿ ಆಚಾರ್ಯ ಇವರು ಬೇಡಿಕೆಗಳ ಪಟ್ಟಿಯನ್ನು ಮಂಡಿಸಿದರು. ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಕೆ. ವಿಶ್ವನಾಥ ಮತ್ತು ಉಪಾಧ್ಯಕ್ಷರಾದ ಶ್ರೀ ಡೆರಿಕ್ ಎ ರೆಬೆಲ್ಲೋ ಬೇಡಿಕೆಗಳ ಔಚಿತ್ಯವನ್ನು ಸಮರ್ಥಿಸಿ ಅವುಗಳ ಈಡೇರಿಕೆಗೆ ಹೋರಾಟ ಅನಿವಾರ್ಯ ಎಂದು ತಿಳಿಸಿದರು. ಧರಣಾ ಕಾರ್ಯಕ್ರಮದಲ್ಲಿ ಸುಮಾರು 75 ಸದಸ್ಯರು ಭಾಗವಹಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now