
ಉಡುಪಿ , ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳು ತೀರಾ ಮಾನಸಿಕ ಅಸ್ವಸ್ಥೆಯಾಗಿ ಊರಿಡಿ ತಿರುಗಾಡುತ್ತಾ ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದು, ಪ್ರಕರಣದ ಗಂಭೀರತೆಯನ್ನು ಅರಿತ ವೇಣೂರು ಪೊಲೀಸರು ವಿಶು ಶೆಟ್ಟಿಯವರಿಗೆ ಮಾಹಿತಿ ನೀಡಿದ್ದು, ವಿಶು ಶೆಟ್ಟಿಯವರು ಪೊಲೀಸ್ ಹಾಗೂ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸುಭಾಸ್ ಕುಲಾಲ್ ಸಹಾಯದಿಂದ ರಕ್ಷಿಸಿ ಚಿಕಿತ್ಸೆಗಾಗಿ ಬಾಳಿಗಾ ಆಸ್ಪತ್ರೆಗೆ ಬುಧವಾರ ರಾತ್ರಿ ದಾಖಲಿಸಿದ್ದಾರೆ.
ಯುವತಿಯ ಹೆಸರು ರೇಖಾ ಪೂಜಾರಿ(28ವರ್ಷ) ಎಂಬ ಮಾಹಿತಿ ಲಭಿಸಿದ್ದು, ದಾಖಲಾತಿಯ ಸಮಯದಲ್ಲಿ ಸಂಬಂಧಿಕರು ಇಲ್ಲದೇ ಇದ್ದ ಕಾರಣ, ವೇಣೂರು ಪೊಲೀಸ್ ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ನಡೆಸಲಾಗಿದೆ. ಸಂಬಂಧಿಕರು ಅಥವಾ ಸ್ಪಂದಿಸುವವರು ಬಾಳಿಗಾ ಆಸ್ಪತ್ರೆ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.
***
ಯುವತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದರಿಂದ ದಾರಿಯಲ್ಲಿ ಸಿಕ್ಕಿದ ವಾಹನಗಳಲ್ಲಿ ಊರಿಂದ ಊರಿಗೆ ಹೋಗುವುದು, ರಸ್ತೆಯಲ್ಲಿ ಕಿರುಚಾಡುತ್ತಾ ಅಡ್ಡಾದಿಡ್ಡಿ ಚಲಿಸುತ್ತಿರುವುದು. ಇಂತಹ ಪ್ರಕರಣಗಳಲ್ಲಿ ರಕ್ಷಣೆ ಹಾಗೂ ಸ್ಪಂದನೆ ನೀಡದೇ ಇದ್ದಲ್ಲಿ ಸಂತ್ರಸ್ಧೆಯು ಘೋರ ಖಾಯಿಲೆಗಳಿಗೆ ಹಾಗೂ ದೌರ್ಜನ್ಯಕ್ಕೆ ಬಲಿಯಾಗುವುದು ಖಚಿತ. ಸಾರ್ವಜನಿಕರು ಹಾಗು ಇಲಾಖೆ ಎಚ್ಚೆತ್ತಲ್ಲಿ ಸಂಭಾವ್ಯ ದುರಂತವನ್ನು ತಪ್ಪಿಸಬಹುದು. ಈ ಪ್ರಕರಣದಲ್ಲಿ ಯುವತಿಯ ಸಂಬಂಧಿಕರು ಸ್ಪಂದನೆ ನೀಡದಿದ್ದರೂ ಸಾಮಾಜಿಕ *ಕಾರ್ಯಕರ್ತರು ಹಾಗು ಪೋಲೀಸರ ಸ್ಪಂದನೆ ಶ್ಲಾಘನೀಯ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























