ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ಜಿಲ್ಲೆ 275 S ವತಿಯಿಂದ ತರಬೇತಿ ಕಾರ್ಯಾಗಾರ

ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ಜಿಲ್ಲೆ 275 S ವತಿಯಿಂದ ತರಬೇತಿ ಕಾರ್ಯಾಗಾರ
0Shares

ಉಡುಪಿ : ಉಡುಪಿ ಜಿಲ್ಲಾ ಮಟ್ಟದ ಅಲಯನ್ಸ್ ಕ್ಲಬ್ ಗಳ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಉಪಾಧ್ಯಕ್ಷರು ಮತ್ತು ಜಿಲ್ಲಾ ಸಂಪುಟದ ಪದಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉಡುಪಿ ಕಡಿಯಾಳಿ ಓಶಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಮೇ 31 ರಂದು ನಡೆಯಿತು.
ನಮ್ಮ ಅಲಯನ್ಸ್ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 50 ಕ್ಲಬ್ ಮತ್ತು 1000 ಸದಸ್ಯರನ್ನು ಮಾಡುವ ಗುರಿಯನ್ನು ಹೊಂದಿರುವುದಾಗಿ ಜಿಲ್ಲಾ ಗವರ್ನರ್ ಸುನಿಲ್ ಕುಮಾರ್ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಲಯನ್ಸ್ ಜಿಲ್ಲೆಯ ಪ್ರಥಮ ಉಪ ಜಿಲ್ಲಾ ಗವರ್ನರ್ ಕೆ ಸುಧಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ವಿಶ್ವದ ಸುಮಾರು 22 ದೇಶಗಳಲ್ಲಿ ಅಲಯನ್ಸ್ ಕ್ಲಬ್ ವ್ಯಾಪಿಸಿರುವುದಾಗಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಇಂಟರ್ನ್ಯಾಷನಲ್ ಸೆಕ್ರೆಟರಿ ಡಾ. ನಾಗರಾಜ್ ವಿ. ಬಾಯಿರಿ ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎ ಎಫ್ ಇ ಐ ಇನ್ಸ್ಟಿಟ್ಯೂಟ್ ಇದರ ಸಿ. ಮಹೇಶ್ ಕುಮಾರ್, ಎ ಜಿ ಎ. ಚೀಫ್ ಅಡಿಟರ್ ಶಂಕರ್ ಸೆಲ್ವರಾಜ್ ರವರು ತರಬೇತಿ ನೀಡಿದರು. ಇವರನ್ನು ಅಲಯನ್ಸ್ ಜಿಲ್ಲೆಯ ವತಿಯಿಂದ ಸನ್ಮಾನಿಸಲಾಯಿತು.

ಇಂಟರ್ನ್ಯಾಷನಲ್ ಕಮಿಟಿ ಚೈರ್ ಪರ್ಸನ್ ಡಾ. ತಲ್ಲೂರು ಶಿವರಾಮ ಶೆಟ್ಟಿ , ಇಂಟರ್ನ್ಯಾಷನಲ್ ಡೈರೆಕ್ಟರ್ ಡಿ. ಶ್ರೀಧರ ಶೇನವ, ನಿಕಟಪೂರ್ವ ಜಿಲ್ಲಾ ಗವರ್ನರ್ ಸುನಿಲ್ ಸಾಲ್ಯಾನ್, ದ್ವೀತೀಯ ಉಪ ಜಿಲ್ಲಾ ಗವರ್ನರ್ ಅಲೈ ಡಾ. ಅಶೋಕ್ ಕುಮಾರ್ ವೈ. ಜಿ., ಪ್ರಾಂತೀಯ ಅಧ್ಯಕ್ಷರುಗಳಾದ ಮೋಹನ್ ಎಂಪಿ., ಡಾ.ಸಂತೋಷ ಕುಮಾರ್ ಬೈಲೂರು, ಜಿಲ್ಲಾ ಸಂಪುಟ ಕಾರ್ಯದರ್ಶಿ ಕಬ್ಬಿನಾಲೆ ರಾಮಚಂದ್ರ ಭಟ್, ಸಂಪುಟ ಕೋಶಾಧಿಕಾರಿ ಎಮ್ ಕೃಷ್ಣ ಆಳ್ವ, ಪಿಆರ್ ಓ ಡಾ. ಜಗದೀಶ್ ಹೊಳ್ಳ, ಕೋಓರ್ಡಿನೇಟರ್ ವಿ.ಎಸ್.ಉಮರ್, ಸುದರ್ಶನ್ ಹೆಗ್ಡೆ, ವಲಯಾಧ್ಯಕ್ಷರಾದ ಜಯಾನಂದ ಕೊಡವೂರು, ರಮೇಶ ಶೆಟ್ಟಿ. ಕೆ, ಡಾ. ಗಾಯತ್ರಿ ಸಂತೋಷ್, ಸುದರ್ಶನ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಥಮ ಉಪ ಜಿಲ್ಲಾ ಗವರ್ನರ್ ಸುಧಾಕರ ಹೆಗ್ಡೆ ಸ್ವಾಗತಿಸಿದರು.
ಪ್ರತಾಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಸಂಪುಟ ಕಾರ್ಯದರ್ಶಿ ರಾಮಚಂದ್ರ ಭಟ್ ವಂದಿಸಿದರು.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now