
ಉಡುಪಿ ನಗರಸಭೆಯ ಕೊಡಂಕೂರು ವಾರ್ಡಿನ ನೆರೆಪೀಡಿತ ತಾರಕಟ್ಟ ಪ್ರದೇಶದಲ್ಲಿ ಸುಮಾರು ₹ 2.50 ಕೋಟಿ ವೆಚ್ಚದಲ್ಲಿ ಇಂದ್ರಾಣಿ ನದಿಗೆ ನೂತನ ಸೇತುವೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯಶ್ ಪಾಲ್ ಸುವರ್ಣ ಕಳೆದ ಹಲವು ದಶಕಗಳ ಸ್ಥಳೀಯರ ಬೇಡಿಕೆಯಂತೆ ಕರ್ನಾಟಕ ನೀರಾವರಿ ನಿಗಮದ ಮೂಲಕ 2.50 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಿ, ಸಂಪರ್ಕ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಚಾಲನೆ ನೀಡಿದ್ದು, ಮಳೆಗಾಲದಲ್ಲಿ ನೀರು ಸರಾಗ ಹರಿದು ನೆರೆ ಸೃಷ್ಟಿಯಾಗುವ ಸಮಸ್ಯೆ ಪರಿಹಾರವಾಗಲಿದ್ದು ನೂತನ ರಸ್ತೆ ಕೊಡಂಕೂರಿನಿಂದ ಮೂಡಬೆಟ್ಟು ಭಾಗಕ್ಕೆ ನೇರ ಸಂಪರ್ಕ ಕಲ್ಪಿಸಲಿದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ಉಪಾಧ್ಯಕ್ಷರಾದ ಶ್ರೀಮತಿ ರಜನಿ ಹೆಬ್ಬಾರ್, ನಗರಸಭಾ ಸದಸ್ಯರಾದ ಶ್ರೀಮತಿ ಸಂಪಾವತಿ, ಶ್ರೀ ಹರೀಶ್ ಶೆಟ್ಟಿ, ಶ್ರೀ ಟಿ. ಜಿ. ಹೆಗ್ಡೆ, ಶ್ರೀಮತಿ ಸವಿತಾ ಹರೀಶ್ ರಾಮ್, ಪಕ್ಷದ ಪ್ರಮುಖರಾದ ಶ್ರೀ ಹರೀಶ್ ರಾಮ್, ಶ್ರೀ ಸಂದೀಪ್ ಕೋಟ್ಯಾನ್, ಶ್ರೀ ರಾಜೇಶ್, ಶ್ರೀ ಜಯಕರ ಪಾಲನ್, ಶ್ರೀ ಪ್ರಶಾಂತ್ ಪೂಜಾರಿ, ಶ್ರೀ ಶಿವರಾಜ ಕರ್ಕೇರ, ಸ್ಥಳೀಯ ಮುಖಂಡರು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು, ಗುತ್ತಿಗೆದಾರರು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























