
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಉಡುಪಿ ತಾಲೂಕಿನ ಮಣಿಪಾಲ ವಲಯದ ಮಂಚಿಕುಮೇರಿಯ ಮಾಶಾಸನ ಫಲಾನುಭವಿಯಾದ ಶ್ರೀಮತಿ ಪ್ರಮೀಳಾರವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ನಡೆಸಲಾಯಿತು
ಈ ಕಾರ್ಯಕ್ರಮದಲ್ಲಿ ಉಡುಪಿ ನಗರ ಸಭೆಯ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿಯವರು ಮನೆ ಹಸ್ತಾಂತರ ಮಾಡಿ ಶುಭ ಹಾರೈಸಿದರು.ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಸುಂದರ್ ಕಲ್ಮಾಡಿ, ಉಡುಪಿ ನಗರ ಸಭೆಯ ಸದಸ್ಯರಾದ ಶ್ರೀ ಅಶೋಕ್ ನಾಯ್ಕ, ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಸತ್ಯಾನಂದ ನಾಯಕ್, ತಾಲೂಕು ಯೋಜನಾಧಿಕಾರಿಗಳಾದ ಶ್ರೀ ರಾಮ.ಎಮ್ ಜನಜಾಗೃತಿ ವೇದಿಕೆಯ ಸದಸ್ಯರಾದ ಕುಶಲ್ ಶೆಟ್ಟಿಯವರು ಶುಭ ಹಾರೈಸಿದರು, ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಕ್ಯಾಪ್ಟನ್ ಶ್ರೀ ಹರೀಶ್,ಮಣಿಪಾಲ ವಲಯದ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಿ,ಹೆರ್ಗ.ಬಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸುಮಲತಾ, ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಮಣಿಪಾಲ ವಲಯದ ಸದಸ್ಯರು, ಒಕ್ಕೂಟದ ಸಂಘಗಳ ಸದಸ್ಯರು, ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು,ವಲಯ ಮೇಲ್ವಿಚಾರಕರಾದ ಶ್ರೀ ಬಾಲಚಂದ್ರರವರು ಕಾರ್ಯಕ್ರಮ ನಿರೂಪಿಸಿದರು, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಕವಿತಾ ಸ್ವಾಗತಿಸಿದರು,ಹೆರ್ಗ.ಬಿ ಸೇವಾ ಪ್ರತಿನಿಧಿ ಶ್ರೀಮತಿ ಚಂದ್ರಕಲಾ ವಂದಿಸಿದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























