
ಉಡುಪಿ ನಗರಸಭೆಯ ಗೋಪಾಲಪುರ ವಾರ್ಡಿನ ನಯಂಪಳ್ಳಿ ಪ್ರದೇಶದಲ್ಲಿ 4 ದಶಕಗಳಿಂದ ಕುಡಿಯುವ ನೀರಿನ ಸಂಪರ್ಕ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದ ಕುಟುಂಬಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ನಗರಸಭೆಯ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಮೂಲಕ ಹಲವು ದಶಕಗಳ ಕನಸು ಸಾಕಾರಗೊಂಡಿದೆ.
ಸ್ಥಳಕ್ಕೆ ಭೇಟಿ ನೀಡಿ ನೀರಿನ ಸಂಪರ್ಕವನ್ನು ಉದ್ಘಾಟಿಸಿದ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ ಈ ಭಾಗದ ಸುಮಾರು 50 ಮನೆಗಳಿಗೆ ಹಲವು ದಶಕಗಳಿಂದ ಕುಡಿಯುವ ನೀರು ಸಂಪರ್ಕ ಇಲ್ಲದೆ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ನನ್ನ ಮನವಿಯ ಮೇರೆಗೆ ಸ್ಥಳೀಯ ಮುಖಂಡರಾದ ಶ್ರೀ ಉಮೇಶ್ ಶೆಟ್ಟಿ ಹಾಗೂ ಶ್ರೀ ಸುದೀಶ್ ಕುಮಾರ್ ಯವರು ತಮ್ಮ ಖಾಸಗಿ ಜಮೀನಿನಲ್ಲಿ ಪೈಪ್ ಲೈನ್ ಅಳವಡಿಸಲು ಅವಕಾಶ ನೀಡಿ ಮನೆಗಳಿಗೆ ನೀರಿನ ಸಂಪರ್ಕ ನೀಡಲು ವಿಶೇಷ ಸಹಕಾರ ನೀಡಿದ್ದು ಉಡುಪಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಶ್ರೀ ಹರೀಶ್ ಶೆಟ್ಟಿ, ಶ್ರೀ ಗಿರಿಧರ ಆಚಾರ್ಯ ಶ್ರೀಮತಿ ಮಂಜುಳಾ ನಾಯಕ್ ರವರ ವಿಶೇಷ ಮುತುವರ್ಜಿಯಿಂದ ಈ ಭಾಗದ ಜನತೆಯ ಸಮಸ್ಯೆಗೆ ಪರಿಹಾರ ಒದಗಿಸಲಾಗಿದೆ ಎಂದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now