
ಸಮಗ್ರ ಕರ್ನಾಟಕದ ಐವತ್ತು ವರ್ಷಗಳ ಇತಿಹಾಸವನ್ನು ತಿಳಿಸುವಂತಹ ಮತ್ತು ಸಮಸ್ತ ಕನ್ನಡಿಗರಿಗೆ ನ್ಯಾಯ ದೊರಕಿಸಿ ಕೊಡುವಂತಹ ಸಂಗ್ರಹ ಯೋಗ್ಯ ಪುಸ್ತಕ ಈ ದಿನ ಡಾಮ್ ಕಾಮ್ ತಂಡ ಹೊರತಂದಿದೆ ಕರ್ನಾಟಕದ ಇತಿಹಾಸಕ್ಕೆ ಸಂಬಂಧಿಸಿದ ಕೆಲವೊಂದು ಲೇಖನಗಳು ಪ್ರಕಟವಾಗಿರಬಹುದು ಆದರೆ ಸಮಗ್ರ ಕರ್ನಾಟಕದ ಆಗುಹೋಗುಗಳ ಬಗ್ಗೆ ಈ ಪುಸ್ತಕದಲ್ಲಿ ಸಂಪೂರ್ಣ ಮಾಹಿತಿ ಲಭ್ಯವಿದೆ, ಕರ್ನಾಟಕ ಕಳೆದ ಐವತ್ತು ವರ್ಷಗಳ ಆರ್ಥಿಕ ಕ್ಷೇತ್ರ, ರಾಜಕೀಯ, ಸಾಮಾಜಿಕ, ಚಳುವಳಿಗಳು ಹೀಗೆ ಎಲ್ಲಾ ರಂಗದ ಲೇಖನಗಳು ಇದರಲ್ಲಿದೆ ಎಂದು ಕರ್ನಾಟಕ ಸರಕಾರದ ನಿವೃತ್ತ ಜಂಟೀ ಕಾರ್ಯದರ್ಶಿ ಹಾಗೂ ಉಡುಪಿಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಗೌರವ ಕಾರ್ಯದರ್ಶಿಯಾದ ಡಾ ಗಣನಾಥ ಶೆಟ್ಟಿ ಎಕ್ಕಾರು ಹೇಳಿದರು.
ಅವರು ಉಡುಪಿಯ ಅವೇ ಮರಿಯಾ ಹಾಲ್ ನಲ್ಲಿ ನಡೆದ ಈದಿನ.ಕಾಮ್ ವತಿಯಿಂದ ಹೊರತಂದ ನಮ್ಮ ಕರ್ನಾಟಕ ನಡೆದ 50 ಹೆಜ್ಜೆ: ಮುಂದಿನ ನಡೆ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ನಾನು ಈದಿನ ನ್ಯೂಸ್ ಓದುಗರಲ್ಲಿ ಒಬ್ಬ ಅದರಲ್ಲಿ ಬರುವ ವಿಮರ್ಶಾತ್ಮಕ ಲೇಖನಗಳು, ವರದಿಗಳು, ವೀಡಿಯೋ ಬಹಳಷ್ಟು ಅರ್ಥಗರ್ಭಿತವಾಗಿ ಬರುತ್ತಿದೆ ಎರಡು ವರ್ಷ ಪೂರೈಸಿದ ಈದಿ.ಕಾಮ್ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಈದಿನ.ಕಾಮ್ ಹೊರತಂದ ನ್ಯೂಸ್ ಆಫ್ ಮತ್ತು ಸಹಯ ವಾಣಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಉಡುಪಿ ಜಿಲ್ಲಾಧ್ಯಕ್ಷರಾದ ರಾಜೇಶ್ ಶೆಟ್ಟಿ ಅಲೆವೂರು ಪತ್ರಕರ್ತರು ಸಮಾಜದಲ್ಲಿ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಸಮಾಜದ ಶೋಷಿತರ, ಮರ್ದಿತರ ಪರ ಧ್ವನಿ ಎತ್ತಿ ಅವರಿಗೆ ನ್ಯಾಯವನ್ನು ಒದಗಿಸುವ ಕೆಲಸಗಳು ಪತ್ರಿಕೆಗಳು ಮಾಡುತ್ತಿದ್ದೆ ಕೆಲವೊಂದು ಪತ್ರಕರ್ತರಿಗೆ ಅವರದೇ ಆದ ಚೌಕಟ್ಟಿರುತ್ತದೆ ಅದನ್ನು ಮೀರಲು ಸಾಧ್ಯವಾಗುವುದಿಲ್ಲ ಸ್ವಾತಂತ್ರ್ಯ ಪತ್ರಿಕೋದ್ಯಮ ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಹಬಾಳ್ವೆ ಉಡುಪಿ ಸಂಚಾಲಕ ಪ್ರೊ ಪಣಿರಾಜ್ ಈದಿನ ಮಾಧ್ಯಮ ಇದೊಂದು ಆಂದೋಲನವಾಗಿ ಕಳೆದ ಎರಡು ವರ್ಷಗಳಿಂದ ಸ್ವತಂತ್ರವಾಗಿ ನೈಜ ಪತ್ರಿಕಾ ಧರ್ಮವನ್ನು ಪಾಲುಸುತ್ತಾ ಬಂದಿದೆ. ಇನ್ನೂ ಸಾವಿರಾರು ಹೆಜ್ಜೆಗಳು ಬಾಕಿ ಇವೆ ಎಲ್ಲಾ ಸಮಸ್ಯೆಗಳಿಗೆ ಕೈಲಾದಷ್ಟು ಪರಿಹಾರ ನೀಡುವ ಜೊತೆಗೆ ಪತ್ರಿಕೋದ್ಯಮ ಮಾಡದೆ ನೈಜ ಪತ್ರಿಕಾ ಧರ್ಮವನ್ನು ಪಾಲಿಸುತ್ತಿದೆ ಇದು ಜನಸಾಮಾನ್ಯರ ಮಾಧ್ಯಮ ಇಲ್ಲಿ ಓದುಗರೇ ನಮ್ಮ ಬೆಂಬಲಿಗರು ಎಂದು ಹೇಳಿದರು
ರಾಷ್ಟ್ರ ಕವಿ ಕುವೆಂಪುರವರ ಜನ್ಮದಿನದ ಪ್ರಯುಕ್ತ ನಾಡ ಗೀತೆ ಹಾಡುವ ಮೂಲಕ ಕಾರ್ಯಕ್ರಮ ಪಾರಂಭ ಮಾಡಲಾಯಿತು
ಈದಿನ.ಕಾಮ್ ಉಡುಪಿ ಜಿಲ್ಲಾ ಸಂಯೋಜಕರಾದ ಶಾರೂಕ್ ತೀರ್ಥಹಳ್ಳಿ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಯೋಜಕರಾದ ಸುಂದರ್ ಮಾಸ್ಟರ್, ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಹುಮೈರಾ ಕಾರ್ಕಳ, ಈದಿನ.ಕಾಮ್ ಸೆಂಟರ್ ಕೋ ಆರ್ಡಿನೇಟರ್ ಸಂತೋಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜ ಸೇವಕರಾದ ನಾಗೇಶ್ ಉದ್ಯಾವರ್, ಪೀರು ಸಾಹೇಬ್, ರಾಬರ್ಟ್ ಮೆನೇಜಸ್ ರವರಿಗೆ ಗೌರವ ಸಂಚಿಕೆಯನ್ನು ನೀಡಲಾಯಿತು.
ಡಾ ಜಿ ಶಂಕರ್ ಮಹಿಳಾ ಕಾಲೇಜಿನ ಪಾಂಶುಪಾಲರಾದ ಡಾ ನಿಕೇತನ, ಪ್ರೊ ಶಾರದ, ವಕೀಲರಾದ ಅಸದ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಮಾಂಜಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























