ಹೆಬ್ರಿಯಲ್ಲಿ ಹಣದ ವಿವಾದಕ್ಕೆ ಹಲ್ಲೆ, ಜೀವ ಬೆದರಿಕೆ: ಇಬ್ಬರು ಆರೋಪಿಗಳ ಬಂಧನ, SC/ST ದೌರ್ಜನ್ಯ ಪ್ರಕರಣ ದಾಖಲು

ಹೆಬ್ರಿಯಲ್ಲಿ ಹಣದ ವಿವಾದಕ್ಕೆ ಹಲ್ಲೆ, ಜೀವ ಬೆದರಿಕೆ: ಇಬ್ಬರು ಆರೋಪಿಗಳ ಬಂಧನ, SC/ST ದೌರ್ಜನ್ಯ ಪ್ರಕರಣ ದಾಖಲು

0Shares

ದಿನಾಂಕ 27.03.2026 ರಂದು ಸುಜಯ ಎಂಬುವರು ಮಹೇಶ್ ಎಂಬವರೊಂದಿಗೆ ಹೆಬ್ರಿ ತಾಲೂಕು ಮುಟ್ಲಪಾಡಿ ಎಂಬಲ್ಲಿ ಸುಧರ್ಶನ್‌ ರವರಿಗೆ ಸಂಬಂಧಪಟ್ಟ ಕೋಳಿ ಅಂಗಡಿಗೆ ಕೋಳಿ ಖರೀದಿಸಲು ಹೋಗಿದ್ದು, ಆ ಸಂಧರ್ಭದಲ್ಲಿ ಜೊತೆಗಿದ್ದ ಹರೀಶ್ ಪೂಜಾರಿ ಯವರು ಸುಧರ್ಶನ್‌ ರವರಿಂದ ಬರಬೇಕಾಗಿದ್ದ 12,000/- ರೂ ನ್ನು ಪಡೆದುಕೊಳ್ಳಲು ಬಂದಿದ್ದು, ಆ ಸಮಯ ಚರ್ಚೆಗಳು ಆಗುತ್ತಿದ್ದು, ಪಿರ್ಯಾಧಿದಾರರು ಸುಧರ್ಶನ್‌ ರವರೊಂದಿಗೆ ಏನು ವಿಷಯ ಎಂದು ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನಗೆ ಅಧಿಕ ಪ್ರಸಂಗ ಯಾಕೆ ಎಂದು ಹೇಳಿ ಕೆನ್ನೆಗೆ ಹೊಡೆದಿದ್ದು, ಅಲ್ಲಿಯೇ ಇದ್ದ ಉಳಿದ ಆರೋಪಿತರೆಲ್ಲರೂ ಸೇರಿ ಪಿರ್ಯಾಧಿದಾರರಿಗೆ ಮತ್ತು ಮಹೇಶ ಹಾಗೂ ಹರೀಶ ಪೂಜಾರಿಯವರಿಗೆ ಹೊಟ್ಟೆಯ ಭಾಗ, ಎದೆಯ ಭಾಗಕ್ಕೆ ಗುದ್ದಿ, ಕೆಳಗೆ ಬಿಳಿಸಿ ಕಾಲಿನಿಂದ ಒದ್ದಿರುತ್ತಾರೆ. ಅಕ್ಷಯ ಎಂಬಾತನು ಮಕ್ಕಳೆ ಇನ್ನೊಮ್ಮೆ ಹಣವನ್ನು ಕೇಳಿದರೆ ನಿಮ್ಮನ್ನು ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 08/2026 ಕಲಂ: 189(2), 191(2), 115(2), 351(2)(3), 352, r/w 190 BNS-2023 and ಕಲಂ 3(1)(r)(s), 3(2)(va) The SC & ST (Prevention ofAtrocities) Amendment Act 2015ರಂತೆ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದಲ್ಲಿ ಕಾರ್ಕಳ ಪೊಲೀಸ್‌ ಉಪಾಧೀಕ್ಷಕರ ಸೂಚನೆಯಂತೆ ಅಜೆಕಾರು ಪೊಲೀಸ್‌ ಠಾಣಾ ಪಿಎಸ್‌ಐ ರವರು ಸಿಬ್ಬಂದಿಯರೊಂದಿಗೆ ಆರೋಪಿತರಾದೆ ಕಾರ್ಯ ಪ್ರವೃತ್ತರಾಗಿ ಆರೋಪಿಗಳಾದ ಪ್ರಕರಣದಲ್ಲಿ ಕಾರ್ಕಳ ಪೊಲೀಸ್‌ ಉಪಾಧೀಕ್ಷಕರ ಸೂಚನೆಯಂತೆ ಅಜೆಕಾರು ಪೊಲೀಸ್‌ ಠಾಣಾ ಪಿ ಎಸ್‌ ಐ ರವರು ಸಿಬ್ಬಂದಿಯರೊಂದಿಗೆ ಕಾರ್ಯ ಪ್ರವೃತ್ತರಾಗಿ ಆರೋಪಿಗಳಾದ 1) ಸುಧರ್ಶನ್‌ ಶೆಟ್ಟಿ ( 36) ತಂದೆ: ದಿ.ಸುಂದರ ಶೆಟ್ಟಿ ವಾಸ: ಮೇಲ್ಮನೆ ಮುಟ್ಲುಪಾಡಿ ಅಂಡಾರು ಗ್ರಾಮ ಹೆಬ್ರಿ ತಾಲೂಕು ಉಡುಪಿ ಜಿಲ್ಲೆ ಮತ್ತು ೨) ಆಕಾಶ್‌ (21) ತಂದೆ: ಸುರೇಶ್‌ ವಾಸ: ಶಿವಕೃಪಾ ಮೂಡುಕುಡೂರು ವರಂಗ ಗ್ರಾಮ ಹೆಬ್ರಿ ತಾಲೂಕು ಉಡುಪಿ ಜಿಲ್ಲೆ ಇವರುಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now