ಉಡುಪಿ: ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಕೃಷಿ ಇಲಾಖೆ ಯಿಂದ ಜೋಸೆಫ್ ಮಾರ್ಟಿಸ್ ರವರಿಗೆ ಕೃಷಿ ಪ್ರಶಸ್ತಿ ಪ್ರಧಾನ

ಉಡುಪಿ: ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಕೃಷಿ ಇಲಾಖೆ ಯಿಂದ ಜೋಸೆಫ್ ಮಾರ್ಟಿಸ್ ರವರಿಗೆ ಕೃಷಿ ಪ್ರಶಸ್ತಿ ಪ್ರಧಾನ

0Shares

ಉಡುಪಿ 2024-25ನೇ ಸಾಲಿನ ತಾಲೂಕು ಮಟ್ಟದ ವಿಭಾಗದ ಭತ್ತದ ಬೆಳೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪ್ರಶಸ್ತಿ ಪಡೆದಿರುತ್ತಾರೆ. ಮಾರ್ಚ್ 17-2026 ಮಂಗಳವಾರದಂದು ನಡೆದ ಜಿಲ್ಲಾಮಟ್ಟದ ಸಿರಿಧಾನ್ಯ ಹಬ್ಬದ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ರಜತಾದ್ರಿ, ಮಣಿಪಾಲ ದಲ್ಲಿ ನಡೆದ ಕೃಷಿ ಸ್ಪರ್ಧೆಯಲ್ಲಿ ಕಾಪು ತಾಲೂಕು ಮಟ್ಟದಲ್ಲಿ 5 ಕೃಷಿಕರನ್ನು ಸನ್ಮಾನಿಸಲಾಯಿತು ಮೂಡುಬೆಳ್ಳೆಯ ಜೋಸೆಫ್ ಮಾರ್ಟಿಸ್ ರವರನ್ನು ಹೆಕ್ಟೇರ್ 67.69 ಕ್ವಿಂಟಲ್ ಇಳುವರಿ ಪಡೆದು ತಾಲೂಕು ಮಟ್ಟದಲ್ಲಿ ಬತ್ತದ ಬೆಳೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ನೀಡಿ ಚಂದ್ರಶೇಖರ್ ನಾಯಕ್( ಕೃಷಿ ನಿರ್ದೇಶಕರು) ಪೂರ್ಣಿಮಾ ಜೆ. ಸಿ (ಜಂಟಿ ಕೃಷಿ ನಿರ್ದೇಶಕರು) ಗಣ್ಯರು ಸನ್ಮಾನಿಸಿದರು
ಜೋಸೆಫ್ ಮಾರ್ಟಿಸ್ ರವರು ಮೂಡು ಬೆಳ್ಳೆಯ ಕಟ್ಟೆಂಗೇರಿಯಲ್ಲಿ ವಾಸವಾಗಿದ್ದು ಧರ್ಮಪತ್ನಿ ಜಸಿಂತ ಮಾರ್ಟಿಸ್ ಮಕ್ಕಳು ಇವಾ ಜೆನಿಫರ್, ಈತನ್ ಇವರೊಂದಿಗೆ ಜೀವನ ನಡೆಸುತ್ತಿದ್ದಾರೆ.ಕೃಷಿ ಕುಟುಂಬದಿಂದ ಬಂದಿರುವ ಇವರು ತನ್ನ 90 ವರ್ಷ ಪ್ರಾಯದ ಅತ್ತೆಯವರೊಂದಿಗೆ ವಾಸವಾಗಿದ್ದಾರೆ
16 ವರ್ಷ ಗಲ್ಫ್ ರಾಷ್ಟ್ರದಲ್ಲಿ ಕೆಲಸ ಮಾಡಿ 2016 ರಿಂದ ತನ್ನ ಸ್ವಂತ ಊರಿಗೆ ಬಂದು ಕೃಷಿ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು, 350 ಅಡಿಕೆ ಮರ, 60 ತೆಂಗಿನ ಮರ, 1.5 ಎಕರೆಯಲ್ಲಿ ಭತ್ತದ ಕೃಷಿಯನ್ನು ಕುಟುಂಬ ಸಮೇತ ಮಾಡಿಕೊಂಡು ಬಂದಿರುತ್ತಾರೆ ಮೂಡುಬೆಳ್ಳೆ ಲಯನ್ಸ್ ಕ್ಲಬ್ ನಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ, ಮೂಡುಬೆಳ್ಳೆ ಚರ್ಚ್ ಪಾಲನ ಮಂಡಳಿಯ ಸದಸ್ಯರಾಗಿ, ಕೊಡುಗೈ ದಾನಿಯಾಗಿ ಮೂಡುಬೆಳ್ಳೆ ಹಾಗೂ ಆಸುಪಾಸಿನ ಊರಿನಲ್ಲಿ ಜನಪ್ರಿಯ ರಾಗಿದ್ದಾರೆ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now