ಸಮಾಜ ಸೇವಕ, ಕ್ರೀಡಾಪಟು ಸಮೀರ್ ಶರೀಫ್ ನಿಧನ

ಸಮಾಜ ಸೇವಕ, ಕ್ರೀಡಾಪಟು ಸಮೀರ್ ಶರೀಫ್ ನಿಧನ

0Shares

ಕಟಪಾಡಿ: ಉದ್ಯಾವರ ಪಾಂದೆ ನಿವಾಸಿ ಸಮೀರ್ ಶರೀಫ್ (43) ಸೋಮವಾರ ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಅದ್ಭುತ ಕ್ರಿಕೆಟಿಗ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಉದ್ಯಾವರ ಫ್ರೆಂಡ್ಸ್ ಸರ್ಕಲ್ ಇದರ ಸಕ್ರಿಯ ಸದಸ್ಯ, ಉದ್ಯಾವರ ಮೊಹಿಯು ದ್ದೀನ್ ಜುಮ್ಮಾ ಮಸೀದಿ ಜಮಾತಿನ ಸದಸ್ಯ, ಸಮೀರ್ ಶರೀಫ್ ಪಾಂದೆ ದುಬೈಯಲ್ಲಿ ಉದ್ಯೋಗಿಯಾಗಿದ್ದು ದುಬೈ ಕನ್ನಡ ಸಂಘ, ಬ್ಯಾರಿ ಸಂಘಟನೆ ಸಾಹಿತಿ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಸಕ್ರಿಯ ಸದಸ್ಯರಾಗಿ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು

ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿರುತ್ತಾರೆ.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ ಉದ್ಯಾವರ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now