
ಉಡುಪಿ/ಪರಾರಿ: ಇಲ್ಲಿನ ಪರಾರಿ ಶ್ರೀ ಬೊಬ್ಬರ್ಯ ದೈವಸ್ಥಾನದಲ್ಲಿ ಮುಂಬರುವ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ದೈವಸ್ಥಾನದ ವಠಾರದಲ್ಲಿ ದಿನಾಂಕ 22-03-2026 ಭಾನುವಾರ ದಂದು ಭಕ್ತಿಪೂರ್ವಕವಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಇವರ ತಿಪ್ಪೇಶ್ ಬಿ ಎಂ ಮಣಿಪಾಲ ಠಾಣಾಧಿಕಾರಿ ಹಾಗೂ ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ಅಶೋಕ್ ಮಳಬಾಗಿ ಅವರು ಜಂಟಿಯಾಗಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಮುಂಬರುವ ಧಾರ್ಮಿಕ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.
ಸಮಿತಿಯ ಅಧ್ಯಕ್ಷರಾದ ಗುರುರಾಜ್ ಭಟ್ ಕೊಳಲಗಿರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಇದಕ್ಕೂ ಮುನ್ನ ಕ್ಷೇತ್ರದ ಪ್ರಧಾನ ಅರ್ಚಕರಾದ ಲಕ್ಷ್ಮೀಶ ಭಟ್ ಉಪ್ಪೂರು ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಈ ಶುಭ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಸತೀಶ್ ಪೂಜಾರಿ ಕೇಳಂಜೆ ಗ್ರಾಮಸ್ಥರು ಹೊರ ಊರಿನ ದಾನಿಗಳ ಸಹಾಯದಿಂದ ಶ್ರೀ ಗೊಬ್ಬರಿಯ ದೇವರು ಗುಡಿಯು ಬಹಳ ಸುಂದರವಾಗಿ ಮುಂದಿನ ದಿನಗಳಲ್ಲಿ ಮೂಡಿ ಬರುತ್ತದೆ ಎಂದು ಇವರು ಹೇಳಿದರು. ಇನ್ನು ಸಹ ದಾನಿಗಳ ಸಹಕಾರ ಬೇಕೆಂದು ಗೌರಧ್ಯಕ್ಷರು ಹೇಳಿದರು. ಬ್ರಹ್ಮಾವರಾನಾಧಿಕಾರಿಯವರು ಬ್ರಹ್ಮವರ ತಾಲೂಕು ಠಾಣೆ ಸಂಬಂಧಪಟ್ಟ l ಈ ಬೊಬ್ಬರ್ಯ ದೇವಸ್ಥಾನವು ಬ್ರಹ್ಮಕಲಶಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆಂದು ಎಂದು ಬ್ರಹ್ಮವರ ಪೊಲೀಸ್ ಠಾಣಾಧಿಕಾರಿ ಹೇಳಿರುತ್ತಾರೆ. ಮತ್ತು ನಮ್ಮನ್ನು ಕರೆಸಿ ಈ ಬ್ರಹ್ಮಕಲಸದ ಆಮಂತ್ರ ಪತ್ರಿಕೆ ಬಿಡುಗಡೆ ಮಾಡಿದ್ದು ಬಹಳ ಸಂತೋಷ ಆಯ್ತು ಎಂದು ಇವರು ಹೇಳಿರುತ್ತಾರೆ. ಠಾಣಾಧಿಕಾರಿ ಅಶೋಕ್ ಸರ್ ಹೇಳಿರುತ್ತಾರೆ , ಮತ್ತು ಮಣಿಪಾಲ ಠಾನಾಧಿಕಾರಿ ನಾವು ಇಡೀ ದಿವಸ ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಕೆಲಸ ಮಾಡುತ್ತಾ ಬಂದಿರುತ್ತೇವೆ ಆದರೆ ಇದು ಈ ಶ್ರೀ ಬೊಬ್ಬರ್ಯ ಆ ದೇವರ ಬ್ರಹ್ಮಕಲಸದ ಆಮಂತ್ರಣ ಪತ್ರಿಕೆ ಬಿಡುಗಡೆಗೋಸ್ಕರ ನಮ್ಮನ್ನು ಕರೆಸಿದ್ದು ಬಹಳ ಸಂತೋಷ ಆಯ್ತು ಅಂತ ಇವರು ಹೇಳಿರುತ್ತಾರೆ.. ಇವರಿಬ್ಬರೂ ಸಹ ಅಧಿಕಾರಿಗಳು ಕರ್ತವ್ಯದಲ್ಲಿ ಇದ್ದು ನಮಗೆ ಈ ಒಳ್ಳೆಯ ದೇವರ ಒಂದು ಒಳ್ಳೆಯ ಕಾರ್ಯ ಮಾಡಲಿಕ್ಕೆ ಸಿಕ್ಕಿದ್ದು ನಮ್ಮ ಭಾಗ್ಯ ಅಂತ ಇವರಿಬ್ಬರೂ ಹೇಳುತ್ತಾರೆ. ಪ್ರಮುಖರಾದ ಉಪಸ್ಥಿತಿ ರಾಜು ಪೂಜಾರಿ( ಬಿಲ್ಲವ ಸೇವಾ ಸಂಘ ಅಧ್ಯಕ್ಷರು ಉಪ್ಪುರು) ಫ್ರಾಂಕಿ ಡಿಸೋಜ ಕೊಳಲಗಿರಿ (ಜಿಲ್ಲಾಧ್ಯಕ್ಷರು ತುಳುನಾಡ ರಕ್ಷಣಾ ವೇದಿಕೆ. )ಮಾಧವ ಪಾಣ (ಪಿಎಂ ಎಲೆಕ್ಟ್ರಿಕಲ್ ಅಮುಂಜೆ ). ವಿಕ್ರಾಂತ್ ಶೆಟ್ಟಿ ಕೀಳಂಜ ಜಿ ಕೆ ಎಲೆಕ್ಟ್ರಿಕಲ್ ಇದರ ಮಾಲೀಕರು. ಆತ್ಮರಾಮ್ ಪಾಟಿಲ್ ಪರಾರಿ ಉದ್ಯಮಿಗಳು. ಮಧುಕರ್ ನಾಯ್ಕ್. ಮಾಲೀಕರು ಶ್ರೀ ದುರ್ಗಾ ಇಂಜಿನಿಯರಿಂಗ್ ಕೊಳಲುಗಿರಿ. ಜಗದೀಶ್ ನಾಯಕ್ ಪರಾರಿ. ರಾಮ ನಾಯ್ಕ್ ಪರಾರಿ.. ಪ್ರಶಾಂತ್ ಶೆಟ್ಟಿ ಆ ಒಂದು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಆಮಂತ್ರಣ ಪತ್ರಿಕೆಗೆ ಉಚಿತವಾಗಿ ಫಲಾರ ಮತ್ತು ಉಚಿತ ಚಾ ತಿಂಡಿ ಮಾಡಿಕೊಟ್ಟವರು ಅನ್ನಪೂರ್ಣ ಕ್ಯಾಟ್ರಿಕ್ ಉಡುಪಿ ರಾಮಮೂರ್ತಿ ರಾವ್ ಪಾಡಿಗರ್ ಉಡುಪಿ ಕಾರ್ಯಕ್ರಮ ನಿರೂಪಣೆ ಮಾಡಿದವರು ಪ್ರಶಾಂತ್ ಶೆಟ್ಟಿ ..ಸೇರಿದಂತೆ ದೈವಸ್ಥಾನದ ಸಮಿತಿಯ ಉಪಾಧ್ಯಕ್ಷರುಗಳು ಮತ್ತು ಕಾರ್ಯದರ್ಶಿಗಳು ಕೋಶಾಧಿಕಾರಿಗಳು. ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಮೈತು ಮಹಿಳಾ ಪದಾಧಿಕಾರಿಗಳು ಹಾಗೂ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.




Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now