ಉಡುಪಿ: ಸಮಾಧಾನ ಮಹೋತ್ಸವ ನಡೆಯುವ ಮೈದಾನಕ್ಕೆ ನುಗ್ಗಲು ಪ್ರಯತ್ನಿಸಿದ ಹಿಂದೂ ಜಾಗರಣ ವೇದಿಕೆಯ 38 ಜನರ ಬಂಧನ

0Shares

ದಿನಾಂಕ 20/03/2026 ರಿಂದ ದಿನಾಂಕ 22/03/2026ರ ತನಕ ಪ್ರತಿದಿನ 17:30 ಗಂಟೆಯಿಂದ 21:30 ಗಂಟೆಯ ತನಕ ಮಾನ್ಯ ಉಚ್ಚ ನ್ಯಾಯಾಲಯ, ಬೆಂಗಳೂರು ಇವರ ಆದೇಶ ಸಂಖ್ಯೆ WRIT PTN NO 9112/2026 ರಂತೆ ಉಡುಪಿ ನಗರ ಠಾಣಾ ವ್ಯಾಪ್ತಿಯ ಮಿಶಿನ್ ಕಂಪೌಂಡ ಬಳಿಯ ಕ್ರಿಶ್ಚಿಯನ್ ಪಿ.ಯು. ಕಾಲೇಜು ಮೈದಾನದಲ್ಲಿ ಫೆಲೋಶಿಪ್ ಆಫ್ ಉಡುಪಿ ಡಿಸ್ಟ್ರಿಕ್ಟ್ ಚರ್ಚಸ್ ರವರ ವತಿಯಿಂದ ಅಧ್ಯಕ್ಷರು ಫೆಲೋಶಿಪ್ ಆಫ್ ಉಡುಪಿ ಡಿಸ್ಟ್ರಿಕ್ಟ್ ಚರ್ಚಸ್ ರವರ ನೇತೃತ್ವದಲ್ಲಿ ಸಮಾಧಾನ ಮಹೋತ್ಸವ ಎಂಬ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ನಡೆಸುತ್ತಿದ್ದು, ಈ ಕಾರ್ಯಕ್ರಮದ ವಿಶೇಷ ಸಂದೇಶಕರಾಗಿ ಮೋಹನ್ ಸಿ ಲಾಜರಸ್ (ಪಾದ್ರಿಗಳು ತಮಿಳುನಾಡು) ರವರು ಆಗಮಿಸುವ ಬಗ್ಗೆ ತಿಳಿದ ಹಿಂದೂ ಜಾಗರಣ ವೇದಿಕೆ ಹಾಗೂ ಇತರ ಹಿಂದೂ ಪರ ಸಂಘಟನೆ ಪ್ರಮುಖರು ಮೋಹನ ಸಿ ಲಾಜರಸ್ ರವರ ವಿರುದ್ದ ತಮಿಳುನಾಡು ರಾಜ್ಯದಲ್ಲಿ ಹಿಂದೂ ದೇವರ ಅವಹೇಳನದ ಬಗ್ಗೆ ಪ್ರಕರಣಗಳು ದಾಖಲಾಗಿರುವುದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸದ್ರಿ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಪತ್ರಿಕಾಗೋಷ್ಠಿ ಮುಖಾಂತರ ಒತ್ತಾಯಿಸಿದ್ದರು. ಪ್ರಾಂತ್ಯ ಕಾರ್ಯಕಾರಿಣಿ ಪ್ರಮುಖ ಹಿಂ.ಜಾ.ವೇ ರವರ ಮುಂದಾಳತ್ವದಲ್ಲಿ ಮೋಹನ ಸಿ ಲಾಜರಸ್ ರವರು ಉಡುಪಿ ಜಿಲ್ಲೆಗೆ ಆಗಮಿಸದಂತೆ ನಿರ್ಭಂದ ಹೇರುವಂತೆ ಮತ್ತು ಕಾರ್ಯಕ್ರಮಕ್ಕೆ ಅವಕಾಶ ನೀಡದಂತೆ ಒತ್ತಾಯಿಸಿ ದಿನಾಂಕ 20/03/2026 ರಂದು ಸಂಜೆ 5:00 ಗಂಟೆಗೆ ಗೋವಿಂದ ಕಲ್ಯಾಣ ಮಂಟಪದ ಬಳಿ ಸೇರಿ, ಮಾಧ್ಯಮದವರಿಗೆ ಬೈಟ್ ನೀಡಿ ಬಳಿಕ ಇತರರೊಂದಿಗೆ ಗೋವಿಂದ ಕಲ್ಯಾಣ ಮಂಟಪದ ಬಳಿ ಇರುವ ಎಮ್ ಟಿ ಆರ್ ಹೋಟೆಲ್ ಬಳಿಯ ಮುಖ್ಯ ರಸ್ತೆಗೆ ಬಂದು ನಾವು ಕ್ರಿಶ್ಚನ್ ಪಿಯು ಕಾಲೇಜ್ ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗುತ್ತೇವೆ ಎಂದು ಹೇಳಿ ಹೋಗಲು ಪ್ರಯತ್ನಿಸಿರುತ್ತಾರೆ.ಹಿಂದೂ ಜಾಗರಣ ವೇದಿಕೆಯ ಮುಖಂಡ ಶ್ರೀಕಾಂತ ಶೆಟ್ಟಿ ಹಾಗೂ 38 ಮಂದಿ ಕಾರ್ಯಕರ್ತರು ಅಕ್ರಮ ಕೂಟ ಸೇರಿಕೊಂಡು ಉಡುಪಿ ಗೋವಿಂದ ಕಲ್ಯಾಣಮಂಟಪದಿಂದ ಸಮಾಧಾನ ಮಹೋತ್ಸವ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ಹೊರಟರು. ಈ ಸಂದರ್ಭದಲ್ಲಿ ತಡೆದ ಪೊಲೀಸರು, ಪ್ರತಿಭಟನಕರಾದ ಮಹೇಶ್ ಶೆಣೈ (43), ಶ್ರೀಕಾಂತ್ ಶೆಟ್ಟಿ, ಸಂತೋಷ (27), ಉಮೇಶ್ ನಾಯ್ಕ್ (51), ಉಮೇಶ್ (35), ರಮೇಶ್ ಶೆಟ್ಟಿ (43), ರಾಜೇಶ್ ಉಚ್ಚಿಲ (41), ದರ್ಶನ್ (23), ಉದಯ ಕುಮಾರ್ (44), ಪ್ರಶಾಂತ್ (40), ಗುರುರಾಜ್ (37), ಅಜೀತ್ ಗೋಳಿಕಟ್ಟೆ (39), ರಾಧಕೃಷ್ಣ (55), ರೀತೇಶ್ ಪೂಜಾರಿ (25), ಜಗದೀಶ ಪೂಜಾರಿ (31), ಮಹೇಶ್ ಪೂಜಾರಿ (33), ಸುನೀಲ್ ಪೂಜಾರಿ (26), ಚಿರಾಗ್ ಎಚ್.ಎಸ್. (22), ಸುದೀಪ್ ಕಡಿಯಾಳಿ (23), ನಿಖಿಲ್ (28), ಸುಜೀತ್ (28), ಸಾಜನ್ ಎಂ. ಶೆಟ್ಟಿ (34), ರಾಜೇಶ್ ಪೈಯಾರ್ (43), ಲಕ್ಷ್ಮಣ್ ಕರ್ಕೇರ (49), ಶರತ್ ಕುಮಾರ್ ಬೈಲಕೆರೆ (42), ಶೈಲೇಂದ್ರ ಶೆಟ್ಟಿ (50), ವಿಕೇಶ್ ಎಸ್. (29), ನಿತೇಶ್ (32), ಸರೋಜಾ ಶೆಣೈ (52), ತಾರಾ ಎಸ್., ತಾರಾ ಆಚಾರ್ಯ (55), ಸಿಂಚನ್ (21), ಧನುಷ್ ಶೆಟ್ಟಿ (21), ವಿಶೇಕ್ ಶೆಟ್ಟಿ (20), ಸಾತ್ವೀಕ್ (20), ಮನೀಷ್ (21), ಅಶ್ವತ್ ಆಚಾರ್ಯ (37), ದಿನೇಶ್ ಸಾವಂತ (47) ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಈ ವೇಳೆ ಪೊಲೀಸರು ಅವರನ್ನು ತಡೆದು 38 ಜನ ಪ್ರತಿಭಟನಾಕಾರರನ್ನು ದಸ್ತಗಿರಿ ಮಾಡಿ ನಂತರ ಬಿಡುಗಡೆಗೊಳಿಸಿರುತ್ತಾರೆ. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಎಲ್ಲಾ 38 ಆರೋಪಿತರ ಮೇಲೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 44/2026 ಕಲಂ 189(2) BNS, ಕಲಂ. 112 KP act ನಂತೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿರುತ್ತದೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now