12 ಗಂಟೆಯ ಒಳಗೆ ಹಗಲು ಮನೆ ಕಳ್ಳತನ ಭೇಧಿಸಿದ ಮಣಿಪಾಲ ಪೊಲೀಸರು

12 ಗಂಟೆಯ ಒಳಗೆ ಹಗಲು ಮನೆ ಕಳ್ಳತನ ಭೇಧಿಸಿದ ಮಣಿಪಾಲ ಪೊಲೀಸರು

0Shares

12 ಗಂಟೆಯ ಒಳಗೆ ಹಗಲು ಮನೆ ಕಳ್ಳತನ ಭೇಧಿಸಿದ ಮಣಿಪಾಲ ಪೊಲೀಸರು. ಇಬ್ಬರು ಅರೋಪಿಗಳು ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಹಾಗೂ ಬೆಲೆ ಬಾಳುವ ಚಿನ್ನ, ಬೆಳ್ಳಿ ಆಭರಣಗಳ ಮೌಲ್ಯ ರೂ.4,47,000 ಹಾಗೂ ನಗದು ವಶ

ಮಣಿಪಾಲ ಪೊಲೀಸ್‌ ಠಾಣಾ ವ್ಯಾಪ್ತಿಯ 80 ಬಡಗುಬೆಟ್ಟು ಗ್ರಾಮದ ಶಾಂತಿನಗರದ ನಿವಾಸಿ ಸಂಗೀತ ಮಡಿವಾಳ ಎಂಬವರು ದಿನಾಂಕ 12.03.2026 ರಂದು ಬೆಳಿಗ್ಗೆ 8 ಗಂಟೆಗೆ ಮನೆಗೆ ಬೀಗ ಹಾಕಿ ತಾಯಿ ಮನೆಗೆ ಹೋಗಿ ಮಧ್ಯಾಹ್ನ 2 ಗಂಟೆಗೆ ಬಂದು ನೋಡಿದಾಗ ಮನೆ ಹಂಚು ತೆಗೆದು ಒಳ ಪ್ರವೇಶಿಸಿ ಕಪಾಟಿನಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ನಗದನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣವನ್ನು ಪತ್ತೆ ಹಚ್ಚುವ ಸಲುವಾಗಿ ಮಣಿಪಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ರೌಂಡ್ಸ್‌ ಕರ್ತವ್ಯವನ್ನು ಕೈಗೊಂಡಿದ್ದು, ಬೆಳ್ಳಿಯಪ್ಪ,ಕೆ ಪೊಲೀಸ್‌ ಉಪಾಧೀಕ್ಷಕರು ಉಡುಪಿ ಉಪ ವಿಭಾಗ, ಉಡುಪಿರವರ ನಿರ್ದೇಶನದಂತೆ, ಮಣಿಪಾಲ ಪೊಲೀಸ್‌ ನಿರೀಕ್ಷಕರಾದ ಮಹೇಶ ಪ್ರಸಾದ್‌ ರವರ ನೇತೃತ್ವದ ಮಣಿಪಾಲ ಠಾಣಾ ಪಿ.ಎಸ್‌. ಐ ತಿಮ್ಮೇಶ್‌ ಬಿ.ಎನ್‌ ಹಾಗೂ ಠಾಣಾ ಅಪರಾಧ ಸಿಬ್ಬಂದಿಗಳಾದ ವಿಶ್ವಜಿತ್‌, ಮಹಮ್ಮದ್‌ ಅಜ್ಮಲ್‌, ಚೇತನ್‌, ರವಿರಾಜ್‌ ಒಳಗೊಂಡ ವಿಶೇಷ ತಂಡವು ರೌಂಡ್ಸ ಕರ್ತವ್ಯದಲ್ಲಿರುವಾಗ ದಿನಾಂಕ 13/03/2026 ರಂದು ಶಿವಳ್ಳಿ ಗ್ರಾಮದ ಶಿಂಬ್ರಾ ಬ್ರಿಡ್ಜ್‌ ಬಳಿ ಅನುಮಾಸ್ಪದವಾಗಿ ನಿಂತ ಇಬ್ಬರು ವ್ಯೆಕ್ತಿಗಳು ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಇಬ್ಬರು ಬಾಲಕರನ್ನು ವಿಚಾರಿಸಲಾಗಿ ನಾವುಗಳು 80 ಬಡಗುಬೆಟ್ಟು ಗ್ರಾಮದ ಶಾಂತಿನಗರದ ಬೀಗ ಹಾಕಿದ ಮನೆಯ ಹಂಚನ್ನು ತೆಗೆದು ಒಳ ಪ್ರವೇಶಿಸಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಆರೋಪಿತರಾದ 1.ಸಂತೋಷ @ಸಂತೋಷ ಪೊಲೆಷಿ (20) ತಂದೆ: ಬಸವರಾಜ ವಾಸ: ಪುತ್ತೂರು ಹನುಮಂತ ನಗರ ಶಾಲೆಯ ಹತ್ತಿರ ,ಉಡುಪಿ ತಾಲೂಕು ಉಡುಪಿ ಜಿಲ್ಲೆ. ಹಾಲಿ ವಾಸ: ಮಾರಿಯಮ್ಮನ ದೇವಾಸ್ಥಾನದ ಹತ್ತಿರ , ಬಿಜ್ಜೂರು ,ಮುದ್ದೆಬಿಹಾಳ ತಾಲ್ಲೂಕು,ವಿಜಯಪುರ ಜಿಲ್ಲೆ.
2.ಚಿರಂತನ್ (21) ತಂದೆ : ಚಂದ್ರಕಾಂತ ,ವಾಸ: ಬೊಟ್ಟಲ ಬಗ್ಗೂಲ ಗರಡಿ ಹತ್ತಿರ, ಕಲ್ಮಾಡಿ, ಕೊಡವೂರು ಗ್ರಾಮ ,ಮಲ್ಪೆ ಉಡುಪಿ ಜಿಲ್ಲೆ. ಹಾಲಿ ವಾಸ: ಹಂಪನಕಟ್ಟ ಪೆಟ್ರೋಲ್‌ ಬಂಕ್‌ ಹತ್ತಿರ,ಸನ್ಯಾಸಿ ಮಠ ಬಡಾನಿಡಿಯೂರು ಗ್ರಾಮ ,ಉಡುಪಿ ಜಿಲ್ಲೆ ಇವರುಗಳನ್ನು ದಸ್ತಗಿರಿ ಮಾಡಿ ಮತ್ತು ಇಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರನ್ನು ವಶಕ್ಕೆ ಪಡೆದು, ಅವರಲ್ಲಿ ಕೃತ್ಯಕ್ಕೆ ಬಳಸಿದ ಸಾಮಾಗ್ರಿ, ಹಾಗೂ 4,47,000 ಮೌಲ್ಯದ ಚಿನ್ನ ,ಬೆಳ್ಳಿ ಆಭರಣ ಹಾಗೂ ನಗದು ವಶಪಡಿಸಿಕೊಂಡಿರುವುದಾಗಿದೆ.

ಈ ಕಾರ್ಯಾಚರಣೆಯಲ್ಲಿ ಶ್ರೀ ಮಹೇಶ ಪ್ರಸಾದ್ ಪೊಲೀಸ್‌ ನಿರೀಕ್ಷಕರು ಮಣಿಪಾಲ ಪೊಲೀಸ್‌ ಠಾಣೆ, ಪಿ.ಎಸ್‌. ಐ ತಿಮ್ಮೇಶ್‌ ಬಿ.ಎನ್‌,ಮಣಿಪಾಲ ಠಾಣಾ ಅಪರಾಧ ಸಿಬ್ಬಂದಿಗಳಾದ ಹೆಚ್‌ಸಿ ವಿಶ್ವಜಿತ್‌ ಬೆಳ್ಳೆ , ಮಹಮ್ಮದ್‌ ಅಜ್ಮಲ್‌ ಹೈಕಾಡಿ ,ಚೇತನ್‌ ,ಪಿಸಿ ರವಿರಾಜ್‌,ಉಮೇಶ್‌ ಠಾಣಾ ತನಿಖಾ ಸಹಾಯಕ ಹೆಚ್ ಸಿ ಸುರೇಶ ಶೆಟ್ಟಿ ಸುಕುಮಾರ ಶೆಟ್ಟಿ,ಜೀಪು ಚಾಲಕ ಸಲೀಂ ಸತೀಶ, ಹಾಗೂ ಉಡುಪಿ ಸಿಡಿಆರ್‌ ವಿಭಾಗದ ದಿನೇಶ ಹಾಗೂ ನಿತೀನ್‌ ಸದ್ರಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now