
ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಕೇವಲ ಆರು ವರ್ಷದಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ 300ನೇ ರಕ್ತದಾನ ಶಿಬಿರ ಆಯೋಜಿಸಿ ಸಹಸ್ರಾರು ರೋಗಿಗಳಿಗಳ ಬಾಳಿಗೆ ಅಭಯಹಸ್ತ ನೀಡಿದೆ. ನಾಡೋಜ ಡಾ. ಜಿ. ಶಂಕರ್ ಸಾರಥ್ಯದ ಮೊಗವೀರ ಯುವ ಸಂಘಟನೆಯ ನಂತರದಲ್ಲಿ 300ನೇ ರಕ್ತದಾನ ಶಿಬಿರ ಆಯೋಜಿಸಿದ 2ನೇ ಸಂಘಟನೆಯಾಗಿ ಹೊರಹೊಮ್ಮಿದೆ. ಈ ಸಾಧನೆ ಉಡುಪಿ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಿದೆ ಎಂದು ಉಡುಪಿ ಜಿಲ್ಲಾ ಸರ್ಜನ್ ಡಾ. ಎಚ್. ಅಶೋಕ್ ಅಭಿಪ್ರಾಯಪಟ್ಟರು.
ದಿನಾಂಕ ಫೆಬ್ರವರಿ 26ರಂದು ಆದಿತ್ಯವಾರ ಡಾ. ಟಿ.ಎಂ.ಎ.ಪೈ ಹಾಲ್ ಕೆಎಂಸಿ ಮಣಿಪಾಲದಲ್ಲಿ ನಡೆದ ಹೆಗ್ಗುರುತು -300 ಅಭಯಹಸ್ತ ಚಾರಿಟೇಬಲ್ ಟ್ರಸ್ಟಿನ 300ನೇ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಾಲ್ಯಾನ್ ಆದಿ ಮೂಲಸ್ಥಾನ ರಿಲಿಜಿಯಸ್ಸ್ ಚಾರಿಟೇಬಲ್ ಟ್ರಸ್ಟ್ ರಿ. ಪಲಿಮಾರು, ಎನ್‌ಎಸ್‌ಎಸ್ ಯೂನಿಟ್ 1& 2 ಎಂಐಟಿ ಮಣಿಪಾಲ ಹಾಗೂ ರಕ್ತ ಕೇಂದ್ರ ಕೆಎಂಸಿ ಮಣಿಪಾಲ ಸಹಯೋಗ ನೀಡಿದ್ದರು.
ಅಭಯಹಸ್ತ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಶ್ರೀ ದಿನೇಶ್ ಹೆಗ್ಡೆ ಆತ್ರಾಡಿ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಡಾ.ಶಮಿ ಶಾಸ್ತ್ರೀ, ಪ್ರೊಫೆಸರ್ ಬ್ಲಡ್ ಸೆಂಟರ್ ಕೆಎಂಸಿ ಮಣಿಪಾಲ, ಡಾ. ಕೀರ್ತನ್ ಉಪಾಧ್ಯಾಯ, ವೈದ್ಯರು, ಮಹೇಶ್ ಆಸ್ಪತ್ರೆ ಬ್ರಹ್ಮಾವರ, ಲಕ್ಷ್ಮಿ ಸತನ್ ಶೆಣೈ,ಕಂಟೆಂಟ್ ಕ್ರಿಯೆಟರ್ ಉಡುಪಿ, ಶ್ರೀ ಸದಾಶಿವ ಪಡುಬಿದ್ರಿ, ಅಧ್ಯಕ್ಷರು, ಸಾಲ್ಯಾನ್ ಆದಿಮೂಲಸ್ಥಾನ ರಿಲಿಜಿಯಸ್ ಚಾರಿಟೇಬಲ್ ಟ್ರಸ್ಟ್ ರಿ. ಪಲಿಮಾರು , ರಕ್ತದಾನಿ ಹಾಗೂ ಮಾಜಿ ಯೋಧರಾದ ಶ್ರೀ ರತ್ನಾಕರ ಸಾಮಂತ್, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ರಿ. ಕರ್ನಾಟಕ ಇದರ ಅಧ್ಯಕ್ಷರಾದ ಶ್ರೀ ರಚನ್ ಸಾಲ್ಯಾನ್, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಇದರ ಅಧ್ಯಕ್ಷರಾದ ರಕ್ತದ ಆಪತ್ಭಾಂದವ ಸತೀಶ್ ಸಾಲ್ಯಾನ್ ಮಣಿಪಾಲ್, ಅಭಯಹಸ್ತ ಚಾರಿಟೇಬಲ್ ಟ್ರಸ್ಟಿನ ಶ್ರೀ ರಾಜೇಶ್ ಮೆಂಡನ್ ಬೈಪಾಸ್, ಶ್ರೀ ಶರತ್ ಕಾಂಚನ್ ಆನಗಳ್ಳಿ, ಶ್ರೀ ದಿನೇಶ್ ಕಾಂಚನ್ ಬಾರಿಕೆರೆ, ಶ್ರೀ ಪ್ರಶಾಂತ್ ತಲ್ಲೂರು, ಶ್ರೀ ಹರಿಪ್ರಸಾದ್ ಮಲ್ಪೆ, ಶ್ರೀ ಸೂರ್ಯಕಾಂತ್ ಶೆಟ್ಟಿ, ಶ್ರೀ ವಿಘ್ನೇಶ್ ಮರವಂತೆ, ಶ್ರೀ ಅಶ್ವತ್ ಹಟ್ಟಿಕುದ್ರು, ಶ್ರೀ ಅಭಿಜಿತ್ ಕುಂದಾಪುರ ಉಪಸ್ಥಿತರಿದ್ದರು.
ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಶ್ರೀ ಶೀನಿವಾಸ ಪೂಜಾರಿ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣ,
ಕೆಎಂಸಿ ಯುರೋಲಾಜಿ ವಿಭಾಗದ ಪ್ರೊಫೆಸರ್ ಡಾ. ಪದ್ಮರಾಜ್ ಹೆಗ್ಡೆ, ಉಡುಪಿ ಕಾಂಗ್ರೆಸ್ ಮುಖಂಡರಾದ ಶ್ರೀ ರಮೇಶ್ ಕಾಂಚನ್ ಮತ್ತು ಶ್ರೀ ಪ್ರಸಾದ್ ಕಾಂಚನ್ , ಉದ್ಯಮಿಗಳಾದ ಶ್ರೀ ಅಜಯ್ ಪುರುಷೊತ್ತಮ್ ಶೆಟ್ಟಿ ಮತ್ತು ಶ್ರೀ ವಿವೇಕ್ ಸುವರ್ಣ , ಮಾಜಿ ನಗರಸಭಾ ಸದಸ್ಯರಾದ ಶ್ರೀ ಮಂಜುನಾಥ್ ಮಣಿಪಾಲ್, ಮಾತೃಶ್ರೀ ಸೇವಾ ಸಂಘ ಮಣಿಪಾಲ ಇದರ ಪ್ರವರ್ತಕರಾದ ಡಾ. ಬಳ್ಕೂರು ಗೋಪಾಲ ಆಚಾರ್ಯ, ಶ್ರೀ ಸುನೀಲ್ ಸಾಲ್ಯಾನ್ ಕಡೆಕಾರು ಜಿಲ್ಲಾ ಗವರ್ನರ್, ಆಲಯನ್ಸ್ ಉಡುಪಿ, ಕ್ಲಿಂಗ್ ಜಾನ್ಸನ್, ಅಗ್ನಿ ಶಾಮಕ ಸುರಕ್ಷಾ ಅಧಿಕಾರಿ, ಮಾಹೆ ಮಣಿಪಾಲ, ಸದಾನಂದ ಸಾಲ್ಯಾನ್ ಉಪಾಧ್ಯಕ್ಷರು, ಸಾಲ್ಯಾನ್ ಆದಿ ಮೂಲಸ್ಥಾನ ರಿಲಿಜಿಯಸ್ ಚಾರಿಟೇಬಲ್ ಟ್ರಸ್ಟ್ ರಿ. ಪಲಿಮಾರು, ಶ್ರೀ ಯೋಗಿಶ್ ಸಾಲ್ಯಾನ್, ಉದ್ಯಮಿ ಮಂಗಳೂರು, ಚರಣ್ ಗಂಗೊಳ್ಳಿ ರಕ್ತದಾನಿ ಕುಂದಾಪುರ, ಶ್ರೀ ರಮೇಶ್ ಕರ್ಕೇರಾ ಉಗ್ಗೆಲ್ಬೆಟ್ಟು, ರಕ್ತದಾನಿ ಉಡುಪಿ ಭೇಟಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.




Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now