
ರಜತ ಸಂಭ್ರಮದಲ್ಲಿರುವ ಯುವ ವಿಚಾರ ವೇದಿಕೆ ಕೊಳಲಗಿರಿ ಇವರು ತೆಂಕನಿಡಿಯೂರು ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳಿಗೆ ಉಪ್ಪೂರು ಪಿಶರಿಸ್ ಶಾಲೆಯಲ್ಲಿ ರಂಗ ತರಬೇತಿ ಶಿಬಿರ ನೆರವೇರಿತು..
ಈ ಸಂದರ್ಭದಲ್ಲಿ ಹಿರಿಯ ರಂಗ ಕಲಾವಿದ ಹಾಗೂ ಊರಿನ ಕಾರ್ಯಕ್ರಮಗಳ ಪ್ರಚಾರದ ಉದ್ಘೋಶಕರಾದ ಗಣೇಶ್ ಪೂಜಾರಿ ಉಗ್ಗೆಲ್ಬೆಟ್ಟು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು… ವೇದಿಕೆಯಲ್ಲಿ ಯುವ ವಿಚಾರ ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ, ರತ್ನಾಕರ್ ಮೊಗವೀರ, ಪ್ರಶಾಂತ್ ಮಾಸ್ಟರ್, ಎನ್ ಎಸ್ ಎಸ್ ಮುಖ್ಯಸ್ಥರಾದ ಪ್ರಸಾದ್, ಮಮತಾ, ಉಪನ್ಯಾಸಕರಾದ ಪ್ರಭಾಕರ್ ಆಚಾರ್ಯ ಉಪಸ್ಥಿತರಿದ್ದರು
ಎನ್ ಎಸ್ ಎಸ್ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಚೆನ್ನಾಗಿ ನಿರ್ವಹಿಸಿದರು. ತದನಂತರ ಸಂಪನ್ಮೂಲ ವ್ಯಕ್ತಿಯಾದ ಯೋಗೀಶ್ ಕೊಳಲಗಿರಿ ಅವರಿಂದ ವಿದ್ಯಾರ್ಥಿಗಳಿಗೆ ರಂಗ ತರಬೇತಿ ನೆರವೇರಿತು.





Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now