ಮಲಬಾರ್ ವಿಶ್ವರಂಗ ಪುರಸ್ಕಾರ-2026ಕ್ಕೆ’ ಐವರು ಹಿರಿಯ ರಂಗಕರ್ಮಿಗಳು ಆಯ್ಕೆ

ಮಲಬಾರ್ ವಿಶ್ವರಂಗ ಪುರಸ್ಕಾರ-2026ಕ್ಕೆ’ ಐವರು ಹಿರಿಯ ರಂಗಕರ್ಮಿಗಳು ಆಯ್ಕೆ

0Shares

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಪ್ರದಾನ ಮಾಡುತ್ತಿರುವ, ಶಂಕರ್ ರೂಫಿಂಗ್ ಸಿಸ್ಟಮ್ ದತ್ತಿ ನಿಧಿ ಪ್ರಯೋಜಿತ ’ಮಲಬಾರ್ ವಿಶ್ವರಂಗ ಪುರಸ್ಕಾರ 2026ಕ್ಕೆ ’ ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳು ಆಯ್ಕೆಯಾಗಿದ್ದಾರೆ

ಗೀತಾ ಸುರತ್ಕಲ್ (ರಂಗ ನಟಿ), ಶ್ರೀಪತಿ ಮಂಜನಬೈಲು ಬೆಂಗಳೂರು (ರಂಗ ನಟ) ಎಸ್. ನಿತ್ಯಾನಂದ ಪೈ, ಕಾರ್ಕಳ( ರಂಗ ಸಂಘಟನೆ) , ಅವಿನಾಶ್ ಕಾಮತ್ ಮುಂಬೈ ( ರಂಗ ನಟ) ,

ಬಿ. ಎಸ್.ರಾಮ್ ಶೆಟ್ಟಿ ಹಾರಾಡಿ (ರಂಗ ನಿರ್ದೇಶನ ) ಇವರಿಗೆ ಮಾರ್ಚ್ 26ರಂದು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ನಡೆಯುವ ವಿಶ್ವರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ನಗದು , ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ’ಮಲಬಾರ್ ವಿಶ್ವರಂಗ ಪುರಸ್ಕಾರ-2026’ ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಸಂಚಾಲಕ ರಾಜೇಶ್ ಭಟ್ ಪಣಿಯಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now